ಕಳೆದ ಮೂರು ದಿನಗಳಿಂದ ವಿದ್ಯುತ್ ನಿಲುಗಡೆ । ಸಂಪರ್ಕಕ್ಕೆ ಸಿಗದ ಮೆಸ್ಕಾಂ ಅಧಿಕಾರಿಗಳುಕನ್ನಡಪ್ರಭ ವಾರ್ತೆ, ಕಡೂರುಇಂಧನ ಸಚಿವ ಕೆ.ಜೆ.ಜಾರ್ಜ್ ಉಸ್ತುವಾರಿ ಜಿಲ್ಲೆಯಲ್ಲಿಯೆ ರೈತರ ಕೃಷಿ ಪಂಪ್ ಸೆಟ್‍ಗಳಿಗೆ ವಿದ್ಯುತ್ ಇಲ್ಲದೆ ಪರದಾಡುವ ಸ್ಥಿತಿ ಬಂದಿದೆ.ಕಡೂರು ತಾಲೂಕಿನ ಯಳಗೊಂಡನಹಳ್ಳಿ, ಯಳ್ಳಂಬಳಸೆ, ವಿಟ್ಲಾಪುರ, ಚಿಕ್ಕನಾಯ್ಕನಹಳ್ಳಿಗಳ ಸುತ್ತಮುತ್ತ ಕಳೆದ ಮೂರು ದಿನಗಳಿಂದ ವಿದ್ಯುತ್ ನಿಲುಗಡೆಯಾಗಿ ಮೆಸ್ಕಾಂ ಅಧಿಕಾರಿಗಳು ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಗುರುವಾರ ಕಡೂರು ಮೆಸ್ಕಾಂ ಇಲಾಖೆಗೆ ರೈತರು ಮುತ್ತಿಗೆಹಾಕಿ ಆಕ್ರೋಶ ವ್ಯಕ್ತಪಡಿಸಿದರು.ಇಂಧನ ಸಚಿವರು ವಿಧಾನಪರಿಷತ್‍ನಲ್ಲಿ ರೈತರ ಪಂಪ್‍ಸೆಟ್‍ಗಳಿಗೆ ನಿರಂತರ 7 ಗಂಟೆ ವಿದ್ಯುತ್ ನೀಡುವುದಾಗಿ ಹೇಳಿಕೆ ನೀಡಿದ್ದು. ಇದು ಶುದ್ಧ ಸುಳ್ಳು ಎಂದು ನಿರೂಪಿಸುತ್ತದೆ. ಕಳೆದ ಒಂದು ವಾರದಿಂದ ಹಳ್ಳಿಗಳ ವಿದ್ಯುತ್ ಸಮಸ್ಯೆಗಳನ್ನು ಲೈನ್ ಮ್ಯಾನ್‍ಗಳ ಮೂಲಕ ತಿಳಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಲೈನ್‍ಮ್ಯಾನ್‍ಗಳು ನಾವು 2 ಗಂಟೆ ಮಾತ್ರ ವಿದ್ಯುತ್ ನೀಡುವುದು ನೀವು ಏನು ಮಾಡುತ್ತಿರಿ? ಎಂದು ಉಡಾಫೆ ಉತ್ತರ ನೀಡುತ್ತಾರೆ. ಈಗಾಗಲೆ ಬೇಸಿಗೆ ಆರಂಭವಾಗಿದ್ದು ಬೆಳೆಗಳನ್ನು, ತೋಟಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ರೈತರು ದೂರಿದರು.ಗುರುವಾರ ಕಡೂರು ಮೆಸ್ಕಾಂ ಇಲಾಖೆ ಇಂಜಿನಿಯರ್‌ಗಳೊಂದಿಗೆ ಮಾತಿನ ಚಕಮಕಿ ನಡೆಸಿದ ರೈತರು 7 ಗಂಟೆ ಸಮರ್ಪಕ ವಾಗಿ ವಿದ್ಯುತ್ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದಾಗ ಅಧಿಕಾರಿಗಳು ಸಮಂಜಸ ಉತ್ತರ ನೀಡದಾಗ ರೈತರು ಇಂಜಿನಿಯರ್ ಗಗಳ ಮೇಲೆ ಹರಿಹಾಯ್ದರು.ರೈತರ ಪರವಾಗಿ ಮಾತನಾಡಿದ ಶೇಖರಪ್ಪ ತಂಗಲಿ ಪೀಡರ್ ನಿಂದ ವಿದ್ಯುತ್ ನೀಡುತ್ತಿದ್ದು ಇದು ಸಮರ್ಪಕವಾಗಿ ಇಲ್ಲದೆ 30ಕ್ಕೂ ಹೆಚ್ಚಿನ ಮೋಟಾರ್ ಗಳು ಸುಟ್ಟುಹೋಗಿದ್ದರಿಂದ ಕಳೆದ ಫೆ 21 ರಂದು ಇಲಾಖೆಗೆ ಬಂದು ದೂರು ನೀಡಿದರೂ ಇಲಾಖೆ ಎಚ್ಚೆತ್ತುಕೊಳ್ಳಲಿಲ್ಲ ಎಂದು ಆರೋಪಿಸಿದರು.ನಾಳೆಯಿಂದಲೆ 7 ಗಂಟೆ ವಿದ್ಯುತ್ ನೀಡುವುದಾಗಿ ಇಂಜಿನಿಯರ್ ಬಸವರಾಜಪ್ಪ, ತಿರುಪತಿ ಭರವಸೆ ನೀಡಿದರು. ಇದನ್ನು ಕೆಲ ರೈತರು ವಿಡಿಯೋ ಮಾಡಿಕೊಂಡು ಮತ್ತೆ ಬರುತ್ತೇವೆ ಎಂದು ಹೇಳಿ ಗ್ರಾಮಗಳತ್ತ ತೆರಳಿದರು. ತಾಲೂಕಿನಲ್ಲಿ ಇದೇ ರೀತಿ ಇನ್ನು ಅನೇಕ ಹಳ್ಳಿಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದ್ದು ಸರಿಪಡಿಸದಿದ್ದರೆ ಮುಂದಿನ ತಿಂಗಳಲ್ಲಿ ರೈತರು ಮೆಸ್ಕಾಂ ಇಲಾಖೆ ಮುಂದೆ ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದರು.ಮಧು, ಹರೀಶ್, ಆನಂದ್ ಸೇರಿದಂತೆ ಮತ್ತಿತರರು ಇದ್ದರು.13ಕೆಡಿಯು3ಕಡೂರು ತಾಲೂಕು ಯಳ್ಳಂಬಳಸೆ,ಚಿಕ್ಕನಾಯ್ಕನಹಳ್ಳಿ,ಯಳಗೊಂಡನಹಳ್ಳಿಯ ರೈತರು ಮೆಸ್ಕಾಂ ಕಚೇರಿ ಮುಂದೆ ವಿದ್ಯುತ್ ನಿಲುಗಡೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.
ಕಡೂರು ಸುದ್ದಿ 3ರಫೋಟೋ13ಕೆೆಕೆಡಿಯು3.