ಜಿಲ್ಲೆ ಸ್ಥಾಪನೆಯಾಗಿ 25 ವರ್ಷ ಕಳೆದರೂ ಸರ್ವಾಂಗೀಣ ಅಭಿವೃದ್ಧಿ ಮರೀಚಿಕೆ
---
ಬೇಡಿಕೆಗಳೇನು?ದೊಡ್ಡ ದೊಡ್ಡ ನಗರಗಳಿಗೆ ನೇರ ರೈಲು ಸಂಪರ್ಕ ಕಲ್ಪಿಸಲು ಆಗ್ರಹ
ಚಾಮರಾಜನಗರ ನಿಲ್ದಾಣದಲ್ಲಿ 24 ಗಂಟೆಯೂ ಭದ್ರತಾ ಸಿಬ್ಬಂದಿನಿಲ್ದಾಣದಲ್ಲಿ ತುರ್ತು ಚಿಕಿತ್ಸಾ ಸೇರಿದಂತೆ ವೈದ್ಯಕೀಯ ವ್ಯವಸ್ಥೆಗೆ ಬೇಡಿಕೆ
ಸಂಜೆ 6.45ಕ್ಕೆ ಹೊರಡುವ ರೈಲು ರಾತ್ರಿ 8.50ಕ್ಕೆ ಹೊರಡಲು ವ್ಯವಸ್ಥೆಹೆಜ್ಜಾಲ - ಚಾಮರಾಜನಗರ ರೈಲ್ವೆ ಮಾರ್ಗ ತ್ವರಿತವಾಗಿ ಜಾರಿಗೆ ಒತ್ತು
ತಾಳವಾಡಿ- ಮೇಟುಪಾಳ್ಯಂ - ಕೊಯಮತ್ತೂರು ರೈಲ್ವೆ ಮಾರ್ಗ ಜಾರಿಮೈಸೂರು - ತಂಜಾವೂರು ಎಕ್ಸ್‌ಪ್ರೆಸ್ ಚಾಮರಾಜನಗರಕ್ಕೆ ವಿಸ್ತರಣೆ
ಚಾಮರಾಜನಗರದಿಂದ ಬೆಳಗ್ಗೆ 10.40, ಸಂಜೆ 4ರ ನಂತರ ರೈಲು ಸಂಚಾರ---ಕನ್ನಡಪ್ರಭ ವಾರ್ತೆ ಚಾಮರಾಜನಗರಗಡಿಜಿಲ್ಲೆ ಚಾಮರಾಜನಗರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ರೈಲ್ವೆ ಯೋಜನೆಗಳನ್ನು ಅನುಷ್ಠಾನ ಮಾಡಲು ರೈಲ್ವೆ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಅಧ್ಯಕ್ಷ, ಡಿಆರ್‌ಯುಸಿಸಿ ಸದಸ್ಯ ವಿ. ಪ್ರಭಾಕರ್ ಮನವಿ ಮಾಡಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಮಾತನಾಡಿದ ಅವರು, ‘ಒಂದು ಪ್ರದೇಶ ಅಭಿವೃದ್ಧಿಯಾಗಲು ವ್ಯಾಪಾರ-ವಹಿವಾಟು ಕಾರಣವಾಗಲಿದೆ. ಚಾಮರಾಜನಗರ ಜಿಲ್ಲೆಯಾಗಿ 27ವರ್ಷವಾಗಿದೆ. ಆದರೂ ಸಮಗ್ರ ಅಭಿವೃದ್ಧಿಯಾಗಿಲ್ಲ’ ಎಂದರು.
‘ಹೆಜ್ಜಾಲದಿಂದ - ಕೊಳ್ಳೇಗಾಲ - ಚಾಮರಾಜನಗರ 15 ಕಿ.ಮೀ. ಸುರಂಗ ನಿರ್ಮಿಸಿದಲ್ಲಿ ಯಾವುದೇ ಹುಲಿ ಯೋಜನೆ, ಆನೆ ಕಾರಿಡಾರ್‌ನಿಂದ ತೊಂದರೆಯಾಗದು.ಚಾಮರಾಜನಗರದಿಂದ ಬೆಳಗ್ಗೆ 10.40ರಿಂದ ಮಧ್ಯಾಹ್ನ 3.30 ಹಾಗೂ ಮಧ್ಯಾಹ್ನ 4.00ರಿಂದ 5.30ರವರೆಗೆ ಯಾವುದೇ ರೈಲು ಇಲ್ಲ. ಈ ವೇಳೆ 2-3 ರೈಲುಗಳ ಓಡಿಸಬೇಕೆಂದು ಆಗ್ರಹಿಸಿದರು. ಚಾಮರಾಜನಗರದಿಂದ ಮೈಸೂರಿಗೆ ದ್ವಿಪಥ, ರೈಲ್ವೆ ನಿಲ್ದಾಣದಲ್ಲಿ ಪಿಟ್‌ಲೈನ್, ಸಿಕ್‌ಲೈನ್, ವಾಟರಿಂಗ್ ಪಾಯಿಂಟ್ ಸ್ಥಾಪಿಸಬೇಕು. ಚಾಮರಾಜನಗರಕ್ಕೆ ಬರುವ ಎಲ್ಲ ರೈಲುಗಳನ್ನು ವಿದ್ಯುತ್ ಎಂಜಿನ್ ಅಳವಡಿಸಬೇಕು. ನಿಲ್ದಾಣಕ್ಕೆ ಆಗಮಿಸಲು 80 ಅಡಿ ರೈಲ್ವೆ ಆಸ್ತಿಯಲ್ಲಿ ಬೀದಿ ದೀಪದ ಅಳವಡಿಸಬೇಕು. ಸಂಜೆಯಾದರೆ ಅಕ್ರಮ ಚಟುವಟಿಕೆಗಳು ನಡೆಯುತ್ತವೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.ವಾಹನ ಸಂಚಾರ ದಟ್ಟಣೆ ಇರುವುದರಿಂದ ಮರಿಯಾಲ ರೈಲ್ವೆ ಸೇತುವೆಯನ್ನು ಅಗಲೀಕರಣ, ಲೆವೆಲ್ ಕ್ರಾಸಿಂಗ್‌ಗಳಲ್ಲಿ ರಸ್ತೆ ವಿಭಜಕಗಳ ನಿರ್ಮಾಣ ಮಾಡುವುದು. ರೈಲ್ವೆ ಆಸ್ತಿಯನ್ನು ಉಳಿಸಲು ಇಲಾಖೆಯಿಂದ ತಡೆಗೋಡೆ ನಿರ್ಮಿಸಬೇಕು ಎಂದು ಆಗ್ರಹಿಸಿದರು.ಗೋಷ್ಠಿಯಲ್ಲಿ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಉಪಾಧ್ಯಕ್ಷ ಬಿ.ಕೆ.ಪ್ರಕಾಶ್, ಸದಸ್ಯ ಬಸವರಾಜೇಶ, ಖಜಾಂಚಿ ಸಿ.ಎ.ನಾರಾಯಣ, ಪ್ರಧಾನ ಕಾರ್ಯದರ್ಶಿ ಎನ್.ಪ್ರಸಾದ್ ಹಾಜರಿದ್ದರು.---೧೧ಸಿಎಚ್‌ಎನ್೧