- ಹೈಸ್ಕೂಲ್ ಮೈದಾನದಲ್ಲಿ 11ನೇ ವಿಶ್ವ ಯೋಗ ದಿನಾಚರಣೆ । ಅಧಿಕಾರಿಗಳು, ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗಾಭ್ಯಾಸ- - -
ನಗರದ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯೋಗವನ್ನು ರೂಢಿಸಿಕೊಳ್ಳುವ ಮೂಲಕ ಪ್ರತಿಯೊಬ್ಬರೂ ನಿರೋಗಿಗಳಾಗಬೇಕು ಎಂದರು.
ದೈಹಿಕ, ಸಾಮಾಜಿಕ, ಮತ್ತು ಪರಿಸರ ಕಾಳಜಿ ಇವೆಲ್ಲವನ್ನೂ ಒಳಗೊಂಡ ವಿಜ್ಞಾನವಿದ್ದರೇ ಅದು ಯೋಗಕಲೆ. ಮನಸ್ಸು ಮತ್ತು ದೇಹದ ಮೇಲೆ ನಿಯಂತ್ರಣ ಹೊಂದುವುದನ್ನೂ ಯೋಗವು ನಮಗೆ ಕಲಿಸುತ್ತದೆ. ದೈನಂದಿನ ಜೀವನದಲ್ಲಿ ಪ್ರತಿಯೊಬ್ಬರೂ ಯೋಗ ಮಾಡುವುದರಿಂದ ರೋಗದಿಂದ ಮುಕ್ತಿ ಹೊಂದಬಹುದು ಎಂದು ಹೇಳಿದರು.ಯೋಗದಿಂದ ಶಿಸ್ತುಬದ್ಧ ಜೀವನ, ಏಕಾಗ್ರತೆ ಸಾಧ್ಯ. ಯೋಗವೆಂದರೆ ಕೇವಲ ದೇಹದ ಕಸರತ್ತು ಮಾತ್ರವಲ್ಲ, ಅದು ದೇಹ, ಮನಸ್ಸು ಹಾಗೂ ಆತ್ಮದ ಸಂಗಮವಾಗಿದೆ. ಭಾರತವು ಯೋಗದ ಜನ್ಮಭೂಮಿಯಾಗಿದೆ. ಪ್ರಾಚೀನ ಋಷಿಮುನಿಗಳು ಕೊಟ್ಟಂತಹ ಇಂತಹ ಅದ್ಭುತ ಯೋಗಕಲೆಯನ್ನು ಇಂದು ಜಗತ್ತೇ ಗುರುತಿಸಿ, ಸ್ವೀಕರಿಸಿ, ಅನುಸರಿಸುತ್ತಿದೆ. ಇದು ನಾವಲ್ಲಾ ಹೆಮ್ಮೆಪಡುವ ಸಂಗತಿ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಯೋಗ ಪ್ರಾಣಾಯಾಮದಿಂದ ಆರೋಗ್ಯ ಸಮತೋಲನ ಕಾಪಾಡಬಹುದು. ಕನಿಷ್ಠ 15-20 ನಿಮಿಷ ಧ್ಯಾನ, ಯೋಗ ಮಾಡುವುದರಿಂದ ಸಾಕಷ್ಟು ಒತ್ತಡ ನಿವಾರಿಸುವುದರೊಂದಿಗೆ ಮಾನಸಿಕವಾಗಿ ಹಿಡಿತ ಸಾಧಿಸಬಹುದು. ಯೋಗ ಪ್ರಾಣಾಯಾಮ ಮತ್ತು ಧ್ಯಾನವನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಆರೋಗ್ಯವಾಗಿ ಶಾಂತಿ, ನೆಮ್ಮದಿಯ ಜೀವನ ನಡೆಸಬಹುದು ಎಂದು ಹೇಳಿದರು.
ಸಮಾರಂಭದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಯೋಗೇಂದ್ರಕುಮಾರ ಸ್ವಾಗತಿಸಿದರು. ಯೋಗ ಗುರುವೈದ್ಯಶ್ರೀ ಜ್ಯೋತಿ ಚನ್ನಬಸವಣ್ಣ ಯೋಗ ತರಬೇತಿ ನೀಡಿದರು.
(ಕೋಟ್) ಶಿಕ್ಷಣ, ಇನ್ನಿತರೆ ಒತ್ತಡಗಳಲ್ಲಿ ಸಿಲುಕಿಕೊಂಡರೂ ವೈಯಕ್ತಿಕವಾಗಿ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡ ಕಾರಣ ಇಂದು ಅಧಿಕಾರಿಯಾಗಿ ನಿಮ್ಮಗಳ ಮುಂದೆ ನಿಂತಿದ್ದೇನೆ. ಗ್ರಾಮ ಪಂಚಾಯಿತಿಗಳ ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳನ್ನು ಬಳಸಿ, ಗ್ರಾಮೀಣ ಹಂತದಲ್ಲಿ ಕೂಡ ಯೋಗ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗುವುದು.
- - -