ಕಾಂಗ್ರೆಸ್‌ನೊಳಗಿನ ಬಣಗಳ ಜಗಳ ಬಹಿರಂಗ । ಎಐಸಿಸಿ ವೀಕ್ಷಕಿ ದೀಪ್ತಿ ಮೇರಿ ವರ್ಗೀಸ್ ಸಭೆ ಮೊಟಕು
ಜಿಲ್ಲೆಯ ಕಾಂಗ್ರೆಸ್ ಪಕ್ಷದೊಳಗಿನ ಬಣಗಳ ಸಂಘರ್ಷ ಪದೇ ಪದೇ ಬೀದಿಗೆ ಬರುತ್ತಿದೆ. ಎಐಸಿಸಿ ವೀಕ್ಷಕರು ಮತ್ತು ರಾಜ್ಯ ಮಟ್ಟದ ನಾಯಕರು ಚಿಕ್ಕಬಳ್ಳಾಪುರಕ್ಕೆ ಬಂದ ವೇಳೆ ಕಾಂಗ್ರೆಸ್‌ನೊಳಗಿನ ಬಣಗಳ ಜಗಳ ಬಹಿರಂಗವಾಗಿದೆ.
ಕೇಂದ್ರದ ಎನ್ ಡಿಎ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ನ.1 ರಂದು ದೆಹಲಿಯಲ್ಲಿ ಬೃಹತ್ ರ್ಯಾಲಿ ಹಾಗೂ ನ. 25 ರಂದು ದೇಶದಾದ್ಯಂತ ಲಕ್ಷಾಂತರ ಕಾರ್ಯಕರ್ತರ ಭಾಗವಹಿಸುವಿಕೆಯೊಂದಿಗೆ ''''''''ವೋಟ್ ಬಚಾವೋ ದೇಶ್ ಬಚಾವೋ'''''''' ಜನಾಂದೋಲನ ನಡೆಸಲು ಕಾಂಗ್ರೆಸ್ ಮುಂದಾಗಿದ್ದು, ಈಹಿನ್ನಲೆ ಎಐಸಿಸಿ ವೀಕ್ಷಕಿ ದೀಪ್ತಿ ಮೇರಿ ವರ್ಗೀಸ್, ಚಿಕ್ಕಬಳ್ಳಾಪುರ ನಗರದ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರ ಸಭೆ ನಡೆಸಲು ಬಂದಿದ್ದಾಗ, ಸಭೆಯಲ್ಲಿ ಪಕ್ಷದೊಳಗಿನ ಬಣಗಳ ತಿಕ್ಕಾಟದಿಂದ ಸಭೆ ಅರ್ಧಕ್ಕೆ ನಿಂತು ಹೋಯಿತು.ತೀವ್ರ ಗದ್ದಲ ಗೊಂದಲ ಸಂಘರ್ಷಗಳು ನಡೆದು ಮಾಜಿ ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ ಸೇರಿದಂತೆ ಕೆಲ ಪ್ರಮುಖ ನಾಯಕರು ಸಭೆಯಿಂದಲೇ ಹೊರ ನಡೆದರು. ಕಾಂಗ್ರೆಸ್ ಮುಖಂಡರು ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಡಿ.ಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರಿಗೆ ಕ್ಷೇತ್ರಗಳ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಆದರೂ ಯಾವುದೇ ಕ್ರಮವಾಗುತ್ತಿಲ್ಲ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರಲ್ಲದೇ ,ಶಾಸಕ ಪ್ರದೀಪ್ ಈಶ್ವರ್ ವಿರೋಧ ಬಣದ ಮುಖಂಡರು ಸಭೆಯಿಂದ ಹೊರ ನಡೆದರು .