ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ನಗರದ ಕೋಟೆ ವೃತ್ತದಲ್ಲಿರುವ ಶ್ರೀರಾಮನ ದೇವಾಲಯದ ಆವರಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮಟ್ಟದ ಕೈವಾರ ತಾತಯ್ಯ ಜಯಂತಿಯಲ್ಲಿ ಪಾಲ್ಗೊಂಡಿದ್ದ ಶಾಸಕ ಪ್ರದೀಪ್ ಈಶ್ವರ್, ಏಕವಚನದಲ್ಲಿ ಮಾತನಾಡಿರುವುದು ನಮ್ಮ ಸಮುದಾಯ ತಲೆತಗ್ಗಿಸುವಂತಾಗಿದೆ ಎಂದರು. ಬಿಜೆಪಿ ಕೊಡುಗೆ ಮರೆಯಲಾಗದು
ಬಿಜೆಪಿ ಸರ್ಕಾರ ಬಲಿಜ ಸಮಾಜದ ಮಕ್ಕಳಿಗೆ 2ಎ ಮೀಸಲಾತಿ ಕಲ್ಪಿಸಿದೆ. ಕೈವಾರ ತಾತಯ್ಯ ಜಯಂತಿಯನ್ನು ಘೋಷಿಸಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಸಂಸದರಾಗಿದ್ದ ಪಿ.ಸಿ.ಮೋಹನ್ ಅವರು ಸಾಕಷ್ಟು ಶ್ರಮ ವಹಿಸಿ ಸಮುದಾಯದ ಮಕ್ಕಳ ಭವಿಷ್ಯಕ್ಕಾಗಿ 2ಎ ಮೀಸಲಾತಿ ಕಲ್ಪಿಸಿದರು ಎಂಬುದನ್ನು ಶಾಸಕ ಶಾಸಕ ಪ್ರದೀಪ್ ಈಶ್ವರ್ ಮರೆಯಬಾರದು ಎಂದರು.ಶಾಸಕರಿಗೆ ಸಮುದಾಯದ ಬಗ್ಗೆ ಕಾಳಜಿ, ಬದ್ಧತೆ ಇದ್ದರೆ ಮುಖ್ಯಮಂತ್ರಿಗಳ ಕೈ, ಕಾಲು ಹಿಡಿದು ಟೇಬಲ್ ಗುದ್ದಿ ಉದ್ಯೋಗ ಹಾಗೂ ರಾಜಕೀಯವಾಗಿ ಬಲಿಜ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಲಿ. ಆಗ ಅವರನ್ನು ನಾವು ಮೆಚ್ಚುತ್ತೇವೆ. ಸಮುದಾಯದ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು. ಆದರೆ ಬಿಜೆಪಿ ಮಾಡಿರುವುದನ್ನು ಆ ಕಾರ್ಯಕ್ರಮದಲ್ಲಿ ಕೆಲವರು ಹೇಳಿದ್ದಾರೆ ಅದು ನಿಜ ಕೂಡ. ಆದರೆ ಮುಖ್ಯ ವೇದಿಕೆಯಲ್ಲಿ ಪ್ರದೀಪ್ ಈಶ್ವರ್ ರವರ ನಡವಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು. ಮುಂದಿನ ಜಯಂತಿಗೆ ಬರಬೇಡಿ