ಮೇ 31ರೊಳಗೆ ಪ್ರಜ್ವಲ್ ರೇವಣ್ಣ ದೇಶಕ್ಕೆ ಬರಲೇ ಬೇಕು

KannadaprabhaNewsNetwork |  
Published : May 28, 2024, 01:04 AM ISTUpdated : May 28, 2024, 05:24 AM IST
Prajwal Revanna.jpg

ಸಾರಾಂಶ

ಪೆನ್‌ ಡ್ರೈವ್‌ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜತಾಂತ್ರಿಕ ಪಾಸ್ ಪೋಟ್೯ ಸವಲತ್ತು ಬಳಸಿಕೊಂಡು ವಿದೇಶಕ್ಕೆ ಪರಾರಿಯಾಗಿರುವ ಸಂಸದ ಪ್ರಜ್ವಲ್‌ ರೇವಣ್ಣ ಅವರು ಮೇ 31ರೊಳಗೆ ದೇಶಕ್ಕೆ ವಾಪಸ್‌ ಬರಲೇ ಬೇಕಾಗಿದೆ.

 ನವದೆಹಲಿ :  ಪೆನ್‌ ಡ್ರೈವ್‌ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜತಾಂತ್ರಿಕ ಪಾಸ್ ಪೋಟ್೯ ಸವಲತ್ತು ಬಳಸಿಕೊಂಡು ವಿದೇಶಕ್ಕೆ ಪರಾರಿಯಾಗಿರುವ ಸಂಸದ ಪ್ರಜ್ವಲ್‌ ರೇವಣ್ಣ ಅವರು ಮೇ 31ರೊಳಗೆ ದೇಶಕ್ಕೆ ವಾಪಸ್‌ ಬರಲೇ ಬೇಕು ಎನ್ನುತ್ತಿದೆ ರಾಜತಾಂತ್ರಿಕ ಪಾಸ್ ಪೋರ್ಟ್ ನಿಯಮ.

ಸಂಸದರಿಗೆ 5 ವರ್ಷಗಳ ಅವಧಿಗೆ (ಸರ್ಕಾರದ ಅವಧಿಗೆ) ಪಾಸ್ ಪೋಟ್೯ ನೀಡಲಾಗಿರುತ್ತದೆ. ಈ ಸಂಸತ್‌ನ ಅವಧಿ ಈಗ ಮುಗಿಯುತ್ತಿದ್ದು, ಅದರಂತೆ ಪ್ರಜ್ವಲ್ ಮೇ 31ರೊಳಗೆ ಭಾರತಕ್ಕೆ ಬರಬೇಕು. ಒಂದೊಮ್ಮೆ ಮೇ 31ರ ಮಧ್ಯಾಹ್ನ 12 ಗಂಟೆಯೊಳಗೆ ಭಾರತಕ್ಕೆ ತಲುಪಲು ಆಗದಿದ್ದರೆ ಆ ದೇಶದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ಅನುಮತಿ ಪಡೆಯಬೇಕಾಗುತ್ತದೆ. ಈ ಮಧ್ಯೆ, ಈಗಾಗಲೇ ಪ್ರಜ್ವಲ್‌ ವಿರುದ್ಧ ಬ್ಲ್ಯೂ ಕಾರ್ನರ್‌ ನೋಟಿಸ್‌ ಇಶ್ಯೂ ಮಾಡಲಾಗಿದೆ. ಇಂಟರ್ ಪೋಲ್‌ಗೂ ಮನವಿ ಮಾಡಲಾಗಿದೆ. ಹೀಗಾಗಿ, ರಾಯಭಾರಿ ಕಚೇರಿಯಿಂದ ಅನುಮತಿ ಪಡೆಯುವ ಪ್ರಕ್ರಿಯೆ ಸಂಕಷ್ಟಕ್ಕೆ ಈಡುಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್ ಪೋಟ್೯ನ ಅವಧಿ ನವೆಂಬರ್ 30 ರತನಕ ಇದೆಯಾದರೂ, ಕೊನೆಯ ಆರು ತಿಂಗಳ ಅವಧಿ ತುರ್ತು ಕಾರ್ಯಗಳ ಸಲುವಾಗಿ ಇಟ್ಟಿರುವಂತದ್ದು. ತುರ್ತು ಕಾರ್ಯಗಳು ಇದ್ದಾಗ ಸರ್ಕಾರದ ಪೂರ್ವಾನುಮತಿ ಪಡೆದುಕೊಂಡು ಹೋಗಬಹುದು. ರಾಜತಾಂತ್ರಿಕ ಪಾಸ್ ಪೋಟ್೯ ಪಡೆಯುವಾಗ ಸಾಮಾನ್ಯ ಪಾಸ್ ಪೋಟ್೯ನ್ನು ಸರ್ಕಾರಕ್ಕೆ ವಾಪಸ್ ನೀಡಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಜರ್ಮನಿ, ಬ್ರಿಟನ್‌ ಸೇರಿ 34 ರಾಷ್ಟ್ರಗಳ ಜೊತೆ ಭಾರತ ವೀಸಾ ಒಪ್ಪಂದ ಮಾಡಿಕೊಂಡಿದೆ. ವೀಸಾ ಪಡೆಯದೆ 90 ದಿನಗಳ ಅವಧಿಗೆ ಈ 34 ದೇಶಗಳಿಗೆ ಭಾರತೀಯರು ಹೋಗಿ ಬರಬಹುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಶೇಷ ಅಗತ್ಯತೆಯುಳ್ಳ 50 ಮಕ್ಕಳ ವೈದ್ಯಕೀಯ ಮೌಲ್ಯಾಂಕನ: ಟಿ. ಮಂಜುನಾಥ್
ಕ್ರೀಡಾಂಗಣ ಕಟ್ಟಲು ಸ್ಥಳ ಮಂಜೂರು