ಗಾಯಿತ್ರಿ ಪತ್ತಿನ ಸಹಕಾರ ಸಂಘದಿಂದ ಪ್ರತಿಭಾ ಪುರಸ್ಕಾರ

KannadaprabhaNewsNetwork |  
Published : Jun 17, 2025, 01:45 AM IST
ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗಳಲ್ಲಿ ತಾಲೂಕಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ, ಹಾಗೂ ಷೇರುದಾರರ ಪ್ರತಿಭಾವಂತ ಮಕ್ಕಳಿಗೆ ನಗದು ಬಹುಮಾನ, ಶಾಲು, ಹಾರ ನೆನಪಿನ ಕಾಣಿಕೆ ನೀಡಿ ಅತಿಥಿಗಳು ಗೌರವಿಸಿದರು. | Kannada Prabha

ಸಾರಾಂಶ

ನಾವು ಬದುಕುವುದು ನಮಗೋಸ್ಕರ ಹಾಗೂ ಈ ಹಾದಿಯಲ್ಲಿ ನಮ್ಮವರೊಂದಿಗೂ ಬದುಕಬೇಕು ಎಂದು ಮಂಡ್ಯದ ಶಂಕರೇಗೌಡ ಕಾಲೇಜ್ ಆಫ್ ಎಜುಕೇಶನ್ ಪ್ರಾಂಶುಪಾಲ ಡಾ. ಸುವರ್ಣ ವಿ.ಡಿ. ಮಕ್ಕಳಿಗೆ ತಿಳಿ ಹೇಳಿದ್ದಾರೆ. ಪಟ್ಟಣದ ಕೋಟೆ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಗಾಯಿತ್ರಿ ಪತ್ತಿನ ಸಹಕಾರ ಸಂಘದ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ವಿಶೇಷ ಮಾರ್ಗದರ್ಶನ ನೀಡಿದರು. ಶಿಕ್ಷಣ ಪಡೆದಂತೆಲ್ಲಾ ಪರಿಸ್ಥಿತಿಗಳನ್ನು ನಿಭಾಯಿಸುವ ಜ್ಞಾನವು ಬೇಕು. ಪುಸ್ತಕ ಪತ್ರಿಕೆಗಳು ನಿಮ್ಮ ಸ್ನೇಹಿತರಾಗಬೇಕು ಹಾಗೂ ಮೆದುಳಿಗಿಂತ ಹೃದಯಕ್ಕೆ ಹೋಗುವ ವಿಚಾರಗಳು ದೀರ್ಘಕಾಲ ಉಳಿಯುತ್ತವೆ. ಸಾಧನೆಗೆ ಸಾಧಕರ, ಗುರು ಹಿರಿಯರ ಮಾರ್ಗದರ್ಶನ ಪಡೆಯಿರಿ ಎಂದು ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ನಾವು ಬದುಕುವುದು ನಮಗೋಸ್ಕರ ಹಾಗೂ ಈ ಹಾದಿಯಲ್ಲಿ ನಮ್ಮವರೊಂದಿಗೂ ಬದುಕಬೇಕು ಎಂದು ಮಂಡ್ಯದ ಶಂಕರೇಗೌಡ ಕಾಲೇಜ್ ಆಫ್ ಎಜುಕೇಶನ್ ಪ್ರಾಂಶುಪಾಲ ಡಾ. ಸುವರ್ಣ ವಿ.ಡಿ. ಮಕ್ಕಳಿಗೆ ತಿಳಿ ಹೇಳಿದ್ದಾರೆ.

ಪಟ್ಟಣದ ಕೋಟೆ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಗಾಯಿತ್ರಿ ಪತ್ತಿನ ಸಹಕಾರ ಸಂಘದ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ವಿಶೇಷ ಮಾರ್ಗದರ್ಶನ ನೀಡಿದರು. ಶಿಕ್ಷಣ ಪಡೆದಂತೆಲ್ಲಾ ಪರಿಸ್ಥಿತಿಗಳನ್ನು ನಿಭಾಯಿಸುವ ಜ್ಞಾನವು ಬೇಕು. ಪುಸ್ತಕ ಪತ್ರಿಕೆಗಳು ನಿಮ್ಮ ಸ್ನೇಹಿತರಾಗಬೇಕು ಹಾಗೂ ಮೆದುಳಿಗಿಂತ ಹೃದಯಕ್ಕೆ ಹೋಗುವ ವಿಚಾರಗಳು ದೀರ್ಘಕಾಲ ಉಳಿಯುತ್ತವೆ. ಸಾಧನೆಗೆ ಸಾಧಕರ, ಗುರು ಹಿರಿಯರ ಮಾರ್ಗದರ್ಶನ ಪಡೆಯಿರಿ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕುಸುಮ ಬಾಲಕೃಷ್ಣ ಮಾತನಾಡಿ ಶಿಕ್ಷಕರು, ತಂದೆತಾಯಿ, ಮಾರ್ಗದರ್ಶನ ಪಡೆದು ಸಮಾಜದಲ್ಲಿ ಕೀರ್ತಿವಂತರಾಗಿ ಎಂದರು.ಸಹಕಾರ ಸಂಘದ ಅಧ್ಯಕ್ಷ ಸಿ.ಆರ್‌. ನಾಗರಾಜು ಮಾತನಾಡಿ, ಸಹಕಾರ ಸಂಘದ ಮೇಲೆ ವಿಶ್ವಾಸವಿಟ್ಟು, ನಾಗರಿಕರು ಎಫ್‌.ಡಿ.ಆರ್‌.ಡಿ ಉಳಿತಾಯ ಖಾತೆ ಪಿಗ್ಗಿ ಮೂಲಕ ೧೧.೩೦ಕೋಟಿ ರು. ಹಣವನ್ನು ವಿನಿಯೋಗಿಸಿದ್ದಾರೆ. ಪಾರದರ್ಶಕ ವ್ಯವಹಾರಕ್ಕಾಗಿ ಗಣಕೀಕರಣ, ಡಿಜಿಟಲೀಕರಣ ಹಾಗೂ ಸಂಘದ ಹೆಸರಿನಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದರು.

ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗಳಲ್ಲಿ ತಾಲೂಕಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ, ಹಾಗೂ ಷೇರುದಾರರ ಪ್ರತಿಭಾವಂತ ಮಕ್ಕಳಿಗೆ ನಗದು ಬಹುಮಾನ, ಶಾಲು, ಹಾರ ನೆನಪಿನ ಕಾಣಿಕೆ ನೀಡಿ ಅತಿಥಿಗಳು ಗೌರವಿಸಿದರು.

ವೈಖಾನಸ ಆಗಮ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಮನು ಅವರನ್ನು ಅಭಿನಂದಿಸಿ ಅವರ ತಂದೆತಾಯಿಯರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ವಿಶ್ವನಾಥ್, ನಿರ್ದೇಶಕರಾದ ಗೌರಿಶಂಕರ್, ಚಂದ್ರಶೇಖರ್‌, ಅನಂತರಾಮಯ್ಯ, ರಾಜಶ್ರೀ, ಸತ್ಯವತಿ, ಅರುಣ್, ಮೋಹನ್, ಲಕ್ಷ್ಮೀಶ್, ವೆಂಕಟೇಶ್, ಎ.ಎಂ. ಜಯರಾಮ್, ರಾಮಕೃಷ್ಣ ಉಪಾಧ್ಯ, ಸಿಇಒ ಕಾವ್ಯ, ರಾಮ್ ಪ್ರಸಾದ್, ದಿವ್ಯ, ಕೇಶವಮೂರ್ತಿ, ಕುಮಾರ್. ಕೃಷ್ಣಮೂರ್ತಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ