ಕ್ಷತ್ರೀಯ ಮರಾಠ ಸಮಾಜದಿಂದ ಪ್ರತಿಭಾ ಪುರಸ್ಕಾರ

KannadaprabhaNewsNetwork |  
Published : May 26, 2026, 02:45 AM IST
23ಕತಾರ್ | Kannada Prabha

ಸಾರಾಂಶ

ಕ್ಷತ್ರೀಯ ಮರಾಠ ಸಮಾಜ ಕಾರ್ಕಳ ಇದರ ಆಶ್ರಯದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಭಾನುವಾರ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಕಾರ್ಕಳ: ಕ್ಷತ್ರೀಯ ಮರಾಠ ಸಮಾಜ ಕಾರ್ಕಳ ಇದರ ಆಶ್ರಯದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಭಾನುವಾರ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಸಮಾಜದ ಅಧ್ಯಕ್ಷ ಶುಭದ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಮಾಜದ ಹಿರಿಯ ಉಮೇಶ್ ರಾವ್ ಉದ್ಘಾಟಿಸಿದರು.

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ 8 ವಿದ್ಯಾರ್ಥಿಗಳನ್ನು ಶಾಲು, ಹಾರ, ಸ್ಮರಣಿಕೆ ಹಾಗೂ ಉಡುಗೊರೆ ನೀಡಿ ಸನ್ಮಾನಿಸಲಾಯಿತು. ಜೊತೆಗೆ ಸಮಾಜದ ಇತರ 107 ವಿದ್ಯಾರ್ಥಿಗಳಿಗೆ ಒಟ್ಟು ₹1.42 ಲಕ್ಷ ರು. ವಿದ್ಯಾರ್ಥಿವೇತನ ಹಾಗೂ ಶಾಲಾ ಬ್ಯಾಗ್‌ಗಳನ್ನು ವಿತರಿಸಿ ಪ್ರೋತ್ಸಾಹಿಸಲಾಯಿತು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ್ ಗಿರೀಶ್ ರಾವ್, ಕೆ.ಕೆ.ಎಂ.ಪಿ. ತಾಲೂಕು ಘಟಕದ ಅಧ್ಯಕ್ಷ ಕೀರ್ತನ್ ಲಾಡ್, ಸಮಾಜದ ಮುಂದಾಳು ರಮಾನಾಥ್ ರಾವ್ ಜೋಡುಕಟ್ಟೆ, ಸಿ.ಎ. ಹರೀಶ್ ಮೋರೆ ಹಾಗೂ ಶಿಕ್ಷಕಿ ಲಕ್ಷ್ಮೀ ಅವರು ಶುಭ ಹಾರೈಸಿದರು.ಈ ಸಂದರ್ಭ ಸಂಸ್ಥೆಯ ಗೌರವಾಧ್ಯಕ್ಷ ಶೇಖರ್ ರಾವ್ ಹಾಗೂ ಉದ್ಯಮಿ ನವೀನ್ ರಾವ್ ಕಾಳಿಕಾಂಬ ಉಪಸ್ಥಿತರಿದ್ದರು.ದಾನಿಗಳಾದ ಸತ್ಯಾರ್ಥಿ ರಾವ್ ಸಾಣೂರು ಮತ್ತು ಸಂತೋಷ್ ರಾವ್ ಜೋಡುರಸ್ತೆ ಅವರನ್ನು ಗೌರವಿಸಲಾಯಿತು.ಶಿಕ್ಷಕಿ ದಿವ್ಯಾ ಹರೇಂದ್ರ ಸ್ವಾಗತಿಸಿದರು. ಆಶಾಲತಾ ಗಿರೀಶ್ ವಿದ್ಯಾರ್ಥಿಗಳ ವಿವರ ವಾಚಿಸಿದರು. ಕಾರ್ಯದರ್ಶಿ ಪ್ರಸನ್ನ ರಾವ್ ವಂದಿಸಿಸಿದರು. ಶಿಕ್ಷಕ ಹರೇಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೌಶಲ್ಯಗಳ ಸಮರ್ಪಕ ಬಳಕೆ ಮಾಡಿಕೊಳ್ಳಿ: ಡಾ.ಮಾರುತಿ ಪಾಟೋಳಿ
ಬೈಕ್‌ ಆಟೋ ಡಿಕ್ಕಿ, ಒಂದೇ ಕುಟುಂಬದ ಮೂವರ ಸಾವು