ಕನ್ನಡಪ್ರಭ ವಾರ್ತೆ ಗುಬ್ಬಿ
ಮಕ್ಕಳು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸುವುದು ಮುಖ್ಯ ಶಿಕ್ಷಣದಲ್ಲಿ ಹಿಂದುಳಿದ ಮಕ್ಕಳು ಪ್ರತಿಭಾ ಕಾರಂಜಿಯಲ್ಲಿ ಮುಂದೆ ಬರುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದೆ. ಅಂತಹ ಮಕ್ಕಳನ್ನು ಗುರುತಿಸಿ ಶಿಕ್ಷಣ ಕೊಡಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಪ್ರತಿಭಾ ಕಾರಂಜಿಯಲ್ಲಿ ತಾಲೂಕು ಮಟ್ಟ ಜಿಲ್ಲಾ ಮಟ್ಟ ರಾಜ್ಯ ಮಟ್ಟಕ್ಕೂ ಹೋಗಬಹುದು ಮಕ್ಕಳು ಮನಸ್ಸು ಮಾಡಿದರೆ ಬಹುಮಾನವನ್ನು ಪಡೆಯಲು ಸಾಧ್ಯವಾಗುತ್ತದೆ. ಚದ್ಮಾವೇಶ , ಕಾಂತಾರ , ವಿವಿಧ ವೇಷಭೂಷಣ ಪ್ರಬಂಧ ಸ್ಪರ್ಧೆ , ಆಶುಭಾಷಣ ಏಕ ಪಾತ್ರ ಅಭಿಯಾನ ಸೇರಿದಂತೆ ಇನ್ನೂ ಅನೇಕ ಚಟುವಟಿಕೆಗಳನ್ನು ಆಯೋಜನೆ ಮಾಡಿ ಮಕ್ಕಳಿಗೆ ಸೂಕ್ತ ವೇಧಿಕೆ ಕಲ್ಪಿಸಿಕೊಡಲಾಗಿದೆ. ಮಕ್ಕಳು ಇಂತಹ ವೇದಿಕೆಯಲ್ಲಿ ತಮ್ಮ ಪ್ರತಿಭೆಗಳನ್ನು ತೋರಿಸಿ ತಾಲೂಕು ಮಟ್ಟ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳು ದೇವರ ಕುಣಿತ ,ಸೋಮನಕುಣಿತ ,ಆರೆವಾಧ್ಯ ಗಮನ ಸೆಳೆದವು.ಇದೇ ಸಂಧರ್ಭದಲ್ಲಿ ಕರಿಯಮ್ಮ ರಮೇಶ್ , ಮುಖ್ಯ ಶಿಕ್ಷಕ ಗಿರೀಶ್ ,ಎಸ್.ಡಿ.ಎಂ.ಸಿ.ಅಧ್ಯಕ್ಷ ಕೃಷ್ಣಯ್ಯ , ಬಿ.ಆರ್.ಪಿ.ಕೃಷ್ಣಮೂರ್ತಿ ,ಸಿ.ಆರ್.ಪಿ.ಮಂಜುನಾಥ್ ಶಿಕ್ಷಕರಾದ ದಯಾನಂದ್ ,ರಂಗಪ್ಪ ,ಲೋಕೇಶ್ ,ಕೆಂಪಯ್ಯ ,ಮುಬಾರಕ್ ,ಲಕ್ಷ್ಮೀಕಾಂತ್ ,ರಾಧಿಕಾ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.