ವಿದ್ಯಾರ್ಥಿಗಳ ವಿಕಸನಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ

KannadaprabhaNewsNetwork |  
Published : Nov 09, 2025, 01:15 AM IST
8ಕೆಆರ್ ಎಂಎನ್ 1.ಜೆಪಿಜಿರಾಮನಗರದ ಪಿಎಂಶ್ರೀ ಜಿಕೆಎಂಪಿಎಸ್ (ಪ್ರಾಥಮಿಕ ವಿಭಾಗ) ಮತ್ತು ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಆವರಣದಲ್ಲಿ  ನಡೆದ ರಾಮನಗರ ಟೌನ್ ಕ್ಲಸ್ಟರ್ - 2 ಹಂತದ ಪ್ರತಿಭಾ ಕಾರಂಜಿ – 2025 ಕಾರ್ಯಕ್ರಮವನ್ನು ಕೆ.ಶೇಷಾದ್ರಿ ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಮನಗರ: ಪ್ರತಿಯೊಬ್ಬ ವಿದ್ಯಾರ್ಥಿಯ ವಿಕಸನಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅಭಿಪ್ರಾಯಪಟ್ಟರು.

ರಾಮನಗರ: ಪ್ರತಿಯೊಬ್ಬ ವಿದ್ಯಾರ್ಥಿಯ ವಿಕಸನಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅಭಿಪ್ರಾಯಪಟ್ಟರು.

ನಗರದ ಪಿಎಂಶ್ರೀ ಜಿಕೆಎಂಪಿಎಸ್ (ಪ್ರಾಥಮಿಕ ವಿಭಾಗ) ಮತ್ತು ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಮನಗರ ಟೌನ್ ಕ್ಲಸ್ಟರ್ - 2 ಹಂತದ ಪ್ರತಿಭಾ ಕಾರಂಜಿ-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿ ದೆಸೆಯಲ್ಲಿ ಮತ್ತುದಾ ಬಳಿಕವೂ ಜೀವನದ ವಿಕಸನಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಕಿರಿಯರಾಗಲಿ, ಹಿರಿಯರಾಗಲಿ, ಪ್ರತಿಯೊಬ್ಬರಲ್ಲೂ ಪ್ರತಿಭೆಯನ್ನು ಭಗವಂತ ಕರುಣಿಸಿರುತ್ತಾನೆ. ಮಕ್ಕಳಲ್ಲಿರುವ ಪ್ರತಿಭಾ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಅತ್ಯುತ್ತಮ ವೇದಿಕೆ. ಪಠ್ಯಕ್ರಮದ ಅಧ್ಯಯನ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಭವಿಷ್ಯದಲ್ಲಿ ಒಳ್ಳೆಯ ನಾಗರೀಕರಾಗಬಹುದು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳ ಆಯೋಜನೆ ಶ್ಲಾಘನೀಯ. ಶ್ರದ್ದೆವಹಿಸಿ ಅತ್ಯುತ್ತಮ ಶಿಕ್ಷಣ ಪಡೆದು ಭವ್ಯ ಭಾರತದ ಪ್ರಜೆಗಳಾಗಿ ಎಂದು ಹಾರೈಸಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸತೀಶ್ ಮಾತನಾಡಿ, ಪಠ್ಯತರ ಚಟುವಟಿಕೆಗಳಿಗೆ ತೊರುವ ಆಸಕ್ತಿಯನ್ನು ವಿದ್ಯಾಭ್ಯಾಸಕ್ಕೂ ತೋರಿಸಬೇಕು. ಶಾಲೆಗೆ ಚಕ್ಕರ್ ಹೊಡೆಯಬೇಡಿ, ಕ್ಲಸ್ಟರ್ ಹಂತದಿಂದ ತಾಲೂಕು ಹಂತ, ಜಿಲ್ಲಾ ಹಂತ ಮತ್ತು ರಾಜ್ಯ ಹಂತದ ಪ್ರತಿಭಾ ಕಾರಂಜಿಯಲ್ಲಿ ಪ್ರತಿಭೆ ಪ್ರದರ್ಶಿಸಿ ಜಿಲ್ಲೆಗೆ ಕೀರ್ತಿ ತನ್ನಿ ಎಂದು ಶುಭ ಹಾರೈಸಿದರು.

ಜಿಲ್ಲಾ ವಕ್ಫ್ ಸಮಿತಿಯ ಮಾಜಿ ಅಧ್ಯಕ್ಷ ಸೈಯದ್ ಅಜ್ಮತ್ ಉಲ್ಲಾ ಮಾತನಾಡಿ, ಇದು ಕೃತಕ ಬುದ್ದಿ ಮತ್ತೆ ತಂತ್ರಜ್ಞಾನದ ಕಾಲ. ಪ್ರಬಂಧ ಬರೆಯಲು ಶ್ರಮವಹಿಸಿ ತಯಾರಿ ನಡೆಸುವ ಕಾಲ ಇಂದು ಹೋಗಿದೆ. ಕೃತಕ ಬುದ್ದಿ ಮತ್ತೆಯ ತಂತ್ರಜ್ಞಾನ ನಾವು ಬಯಸಿದ ಪ್ರಬಂಧ ರಚಿಸಿಕೊಡುತ್ತದೆ. ಅಧುನಿಕ ತಂತ್ರಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ನಿಜ ಆದರೆ, ಶಿಕ್ಷಣಾರ್ಜನೆ ಮತ್ತು ಜೀವನದ ಮೌಲ್ಯಗಳ ಕಲಿಕೆಗೆ ಹೆಚ್ಚು ಪ್ರಾಶಸ್ತ್ಯ ಕೊಡಬೇಕು ಎಂದರು.

ಬಾಲಕಿಯ ಸರ್ಕಾರಿ ಪದವಿ ರ್ಪೂ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದ ಎಸ್‌ಡಿಎಂಸಿ ಸಮಿತಿಯ ಉಪಾಧ್ಯಕ್ಷ ಬೈರೇಗೌಡ ಮಾತನಾಡಿ, ನಮ್ಮ ಪೂರ್ವಿಕರು ನಮಗೆ ಬಳುವಳಿಯಾಗಿ ನೀಡಿರುವ ಪರಂಪರೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ತಿಳಿಸಿಕೊಡುವ ಹೊಣೆ ಹಿರಿಯರದ್ದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಬಿಇಒ ಸೋಮಲಿಂಗಯ್ಯ, ಜಿಲ್ಲಾ ಗ್ರಂಥಾಲಯ ಅಧಿಕಾರಿ ಚನ್ನಕೇಶವ, ಬೆಸ್ಕಾಂ ಎಇಇ ಪ್ರಭಾಕರ್, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸ್ವಾಮಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷ ಕಾಂತರಾಜು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಸೂರ್ಯ ಪ್ರಕಾಶ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾನೂನು ಸಲಹೆಗಾರ ಶಿವಸ್ವಾಮಿ, ಬಿಆರ್‌ಸಿ ಸಿದ್ದಲಿಂಗಸ್ವಾಮಿ, ಇಸಿಒ ನವೀನ್ ಕುಮಾರ್ ಶಿಂಧೆ, ಎಬಿಸಿಡಿ ನೃತ್ಯ ಶಾಲೆಯ ರೇಣುಕಾ ಪ್ರಸಾದ್, ಸಿಆರ್‌ಪಿ ಮುನಿಯಪ್ಪ ಉಪಸ್ಥಿತರಿದ್ದರು.

8ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಪಿಎಂಶ್ರೀ ಜಿಕೆಎಂಪಿಎಸ್ (ಪ್ರಾಥಮಿಕ ವಿಭಾಗ) ಮತ್ತು ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ರಾಮನಗರ ಟೌನ್ ಕ್ಲಸ್ಟರ್ - 2 ಹಂತದ ಪ್ರತಿಭಾ ಕಾರಂಜಿ – 2025 ಕಾರ್ಯಕ್ರಮವನ್ನು ಕೆ.ಶೇಷಾದ್ರಿ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ