ಮೂಡುಬಿದಿರೆ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರಾಂತ್ಯ ಸಂಯುಕ್ತ ಆಶ್ರಯದಲ್ಲಿ ನಡೆದ ಜ್ಯೋತಿನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಶಾಲೆಯ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ವಿಜೇತ ವಿದ್ಯಾರ್ಥಿಗಳ ವಿವರ:
ಪ್ರೌಢಶಾಲಾ ವಿಭಾಗ:ಪ್ರಥಮ ಸ್ಥಾನಿಗಳು-ಅಭಿಜ್ಞಾ ಭಟ್ (ಸಂಸ್ಕೃತ ಧಾರ್ಮಿಕ ಪಠಣ), ಮೊಹಮ್ಮದ್ ಹನನ್ ಅಸೀಬ್ (ಅರೇಬಿಕ್ ಧಾರ್ಮಿಕ ಪಠಣ), ಮಾನಿತ ಉಡುಪ ವೈ (ಆಂಗ್ಲ ಭಾಷಣ), ಆಯುಷ್ (ಗಝಲ್), ಧ್ಯಾನ್ ಜೈನ್ (ಚರ್ಚಾ ಸ್ಪರ್ಧೆ), ಶ್ರೇಯ ಹೆಗ್ಡೆ (ಕವನ ವಾಚನ), ಆರುಷ್, ಷಣ್ಮುಖ ( ಗುಂಪು ವಿಭಾಗದ ರಸಪ್ರಶ್ನೆ) ಮತ್ತು ರಾಮಚಂದ್ರ ಎಸ್ ಪೈ (ಸಂಸ್ಕೃತ ಭಾಷಣ)ದ್ವಿತೀಯ ಸ್ಥಾನಿಗಳು- ತೃಪ್ತಿ ಪೂಜಾರಿ (ಕನ್ನಡ ಭಾಷಣ), ಅನುಷಾ ಕದ್ರೂಳಿ (ಹಿಂದಿ ಭಾಷಣ), ಸರ್ವದಾ ಕೆ ಎಸ್ (ಭಾವಗೀತೆ) ಮತ್ತು ಮಾನಸ (ಪ್ರಬಂಧ ರಚನೆ)
ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಆಡಳಿತ ನಿರ್ದೇಶಕ ಡಾ.ಸಂಪತ್ ಕುಮಾರ್, ಶೈಕ್ಷಣಿಕ ನಿರ್ದೇಶಕ ಪುಷ್ಪರಾಜ್ ಜೈನ್, ಮುಖ್ಯಶಿಕ್ಷಕ ಶಿವಪ್ರಸಾದ್ ಭಟ್ ಮತ್ತು ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ಅಭಿನಂದಿಸಿ, ಶುಭ ಹಾರೈಸಿದರು.