ಜೈನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

KannadaprabhaNewsNetwork |  
Published : Sep 18, 2024, 01:52 AM IST
೧೭ಎಚ್‌ವಿಆರ್೧ | Kannada Prabha

ಸಾರಾಂಶ

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ದಿಗಂಬರ ಜೈನ ವಿದ್ಯಾರ್ಥಿಗಳಿಗೆ ವೀಣಾ ಚಂದ್ರನಾಥ ಕಳಸೂರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಹಾವೇರಿ: ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ದಿಗಂಬರ ಜೈನ ವಿದ್ಯಾರ್ಥಿಗಳಿಗೆ ವೀಣಾ ಚಂದ್ರನಾಥ ಕಳಸೂರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಹಾವೇರಿ ನಗರದ ರತ್ನತ್ರಯ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಶಿವಾನಿ ಛಬ್ಬಿ, ಸಮೃದ್ಧ ಬೋಗಾರ್, ಸೃಷ್ಟಿ ಹುರುಳಿಕೊಪ್ಪ, ದೀಕ್ಷಿತ್ ಬನ್ನಿಕೊಪ್ಪ, ಅಕ್ಷತಾ ಕರಿಬಸಣ್ಣನವರ್, ಅಕ್ಷತಾ ಮೂಲಿಮನಿ, ನಂದಿನಿ ಕರಿಬಸಣ್ಣನವರ್, ಶಾಂತರಾಜ ಪದ್ಮೋಜಿ, ಅಮೂಲ್ಯ ಸಾತಣ್ಣನವರ್, ಸುಮಾ ಕಠಾರಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ನಮನ್ ದುಂಡಶಿ, ಕ್ಷೇಮ ಹಜಾರಿ, ದೀಪ ವರೂರ, ಸಮಯ ಹಜಾರಿ, ಪಾವನಿ ಅವರಾಡಿ, ಸುಪ್ರಿಯಾ ಕುಂಬೋಜ, ರಾಧಿಕಾ ಕಲಸ್ಕರ, ರಕ್ಷಿತಾ ಬನ್ನಿಕೊಪ್ಪ, ಧನ್ಯ ಚುಳುಕಿ, ಸಮೃದ್ಧ ಬಸಾಪುರ, ನಿಶಾಂತ್ ಚೇಡಾ, ಪೂಜಾ ಬೆಳಗಲಿ, ಸಚಿನ್ ತೆವಲಪ್ಪನವರ್, ಗೋದಾವರಿ ದಿಂಡಾಲಕೊಪ್ಪ, ವಿದ್ಯಾ ಅಂಗಡಿ, ಸುಚಿತ್ರ ಹಾವೇರಿ, ಕಾವೇರಿ ಮಸಣಗಿ, ಅನು ಜೈನರ್, ಮಂಜು ಜೈನರ ,ಅನುಷಾ ದುಂಡಶಿ ಇನ್ನಿತರರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಚಂದ್ರನಾಥ ಕಳಸೂರ ಜೈನ ಸಮಾಜದ ವಿವಿಧ ಘಟಕಗಳ ಪದಾಧಿಕಾರಿಗಳು, ಮಹಿಳಾ ಸಂಘಟನೆ ಪದಾಧಿಕಾರಿಗಳು ಹಾಗೂ ಶ್ರಾವಕ -ಶ್ರಾವಕಿಯರು ಇದ್ದರು.ಇದೇ ಸಂದರ್ಭದಲ್ಲಿ ದಶಲಕ್ಷಣ ಮಹಾಪರ್ವ ಕಾರ್ಯಕ್ರಮದಲ್ಲಿ ಹಾವೇರಿ ಜೈನ್ ಸಮಾಜದ ವತಿಯಿಂದ ಡಾ. ವಿಮಲಕುಮಾರ ವರೂರ ಅವರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತರ್ಜಾತಿ ವಿವಾಹಿತರಿಗೆ ಪೊಲೀಸರ ರಕ್ಷಣೆ : ಗೃಹ ಮಂತ್ರಿ
ಮುಂಬೈ ಮೇಯರ್‌ ಹುದ್ದೆಗೆ ಶಿಂಧೆ ಲಡಾಯಿ?