ಮಹಮ್ಮದ ರಫೀಕ್ ಬೀಳಗಿ
ಪ್ರತಿವರ್ಷ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಜನರ ನೈಜ ಸಮಸ್ಯೆಗಳನ್ನು ಆಧರಿಸಿ ಸನ್ನಿವೇಶಗಳನ್ನು ಸಿದ್ಧಪಡಿಸಿ ಗಣೇಶೋತ್ಸವ ಆಚರಿಸುತ್ತಿರುವುದು ವಿಶೇಷವಾಗಿದೆ. ಕಳೆದ ಬಾರಿ ಕೇದಾರನಾಥದಲ್ಲಿ ಬಂಡೆಯೊಂದು ಶಿವಲಿಂಗ ರಕ್ಷಣೆ ಮಾಡಿದ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ಮಂಡಳಿ ಈ ಸಲ ಕುಂಭಮೇಳ ಅಂದರೇನು? ಕುಂಭಮೇಳದಲ್ಲಿ ಯಾಕೆ ಪವಿತ್ರಸ್ನಾನ ಮಾಡಬೇಕು ಎಂಬುದನ್ನು ಪ್ರದರ್ಶನ ಮೂಲಕ ಇಲ್ಲಿನ ಭಕ್ತರಿಗೆ ಕುಂಭಮೇಳದ ಮಹತ್ವ ತಿಳಿಸಿಕೊಟ್ಟಿದೆ.
ಗಣೇಶೋತ್ಸವ ಅಲ್ಲದೆ ಮಂಡಳಿ ಸಮಾಜಮುಖಿ ಕಾರ್ಯಗಳಲ್ಲೂ ಸದಾ ಮುಂದಿದೆ. ಈ ಹಿಂದೆ ಕೊರೋನಾ ಸಂಕಷ್ಟದ ಸಮಯದಲ್ಲಿ ಒಂದು ತಿಂಗಳ ಕಾಲ ಹುಬ್ಬಳ್ಳಿ ನಗರದಾದ್ಯಂತ 500ಕ್ಕೂ ಹೆಚ್ಚು ನಿರ್ಗತಿಕರು ಹಾಗೂ ಬಡವರಿಗೆ ಆಹಾರ ಪೊಟ್ಟಣಗಳನ್ನು ವಿತರಿಸಿ ಮಾನವೀಯತೆ ಮೆರಿದಿತ್ತು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ₹50 ಸಾವಿರ, ಓರಿಸ್ಸಾದಲ್ಲಿ ಭೀಕರ ಚಂಡಮಾರುತ ಬೀಸಿದಾಗ ₹50 ಸಾವಿರ, 2019ರಲ್ಲಿ ಗದಗ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹ ಬಂದಾಗ ಅಲ್ಲಿನ ಜನರಿಗೆ ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ದಿನಸಿ ಸಾಮಗ್ರಿ ವಿತರಿಸಿ ತನ್ನ ಸಾಮಾಜಿಕ ಬದ್ಧತೆ ಮೆರೆದಿತ್ತು. ಈ ಮಂಡಳಿ ದೇಶಪ್ರೇಮೆ ಮೆರೆಯುವಲ್ಲಿಯೂ ಹಿಂದೆ ಬಿದ್ದಿಲ್ಲ. ಇತ್ತೀಚಿಗಷ್ಟೆ ಆಗಸ್ಚ್ 15ರಂದು "ದೇಶಕ್ಕಾಗಿ ನಡಿಗೆ " ಯಾತ್ರೆಯಡಿ ಎರಡು ಸಾವಿರ ಅಡಿ ಉದ್ದದ ತ್ರಿವರ್ಣ ಧ್ವಜದ ಮೆರವಣಿಗೆ ಮಾಡಿ ಗಮನಸೆಳೆದಿದೆ.ಪ್ರತಿದಿನ ಪ್ರಸಾದ ವ್ಯವಸ್ಥೆ: ಗಣೇಶೋತ್ಸವದ ಪ್ರತಿದಿನವೂ ಇಲ್ಲಿ ನಿತ್ಯ ಪ್ರಸಾದ ಸೇವೆ ಇರುತ್ತದೆ. ಚಪಾತಿ, ಬಾಜಿ, ಸಿಹಿ ಜತೆ ಅನ್ನ, ಸಾಂಬಾರ ವ್ಯವಸ್ಥೆ ಇರುತ್ತದೆ. ಮಂಡಳಿಯ ಸದಸ್ಯರು ಪ್ರತಿದಿನ ಅಚ್ಚುಕಟ್ಟಾಗಿ ತಮ್ಮ ಕಾರ್ಯ ನಿರ್ವಹಿಸುತ್ತಾರೆ. ಸುತ್ತಮುತ್ತಲಿನ ಪ್ರದೇಶದ ಮಹಿಳೆಯರು ಅನ್ನಪ್ರಸಾದ ಕಾರ್ಯದಲ್ಲಿ ಕೈಗೂಡುವ ಮೂಲಕ ವಿನಾಯಕನಿಗೆ ತಮ್ಮ ಸೇವೆ ಅರ್ಪಿಸುತ್ತಾರೆ.
ಉಚಿತ ಕಣ್ಣು ತಪಾಸಣೆ: ಆ. 31ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ಬೃಹತ್ ರಕ್ತದಾನ ಶಿಬಿರವನ್ನು ಮಂಡಳಿ ನೆರವೇರಿಸಿದೆ. ಸೆ.1 ರಿಂದ ಏಳುದಿನ ಪ್ರತಿದಿನ ಸಂಜೆ 6ರಿಂದ 10ರ ವರೆಗೆ 75 ಜನರಿಗೆ ವೇದಾಂತ ಆಪ್ಟಿಕಲ್ಸ್ ಹುಬ್ಬಳ್ಳಿ ಅವರ ಸಹಯೋಗದೊಂದಿಗೆ ಉಚಿತ ಕಣ್ಣು ತಪಾಸಣೆ ಹಾಗೂ ಉಚಿತವಾಗಿ ಕನ್ನಡಕದ ಫ್ರೇಮ್ ವಿತರಿಸುವ ಶಿಬಿರ ಹಮ್ಮಿಕೊಂಡಿದೆ.ಇಂತಹ ವಿಭಿನ್ನ ಕಾರ್ಯಗಳಲ್ಲಿ ಮಂಡಳಿ ಅಧ್ಯಕ್ಷ ಗೋಪಾಲಕೃಷ್ಣ ಸವಣೂರು, ಕಾರ್ಯದರ್ಶಿಗಳಾದ ಪವನ್ ಶಿರೋಳ, ಅಭಿನಂದನ್ ಟಿಕ್ಕನವರ, ಮಲ್ಲಿಕಾರ್ಜುನ ಶಿರಗುಪ್ಪಿ, ಸಂದೀಪ ಸವಣೂರ, ರಾಹುಲ್ ಗಾರೆ, ಹರ್ಷ ಶಿರೋಳ, ವಿನಾಯಕ ಕಾಳೇಕರ, ಮಂಜು ಹವಳಪ್ಪನವರ, ಆಶೀಷ್ ಸವಣೂರ ಸೇರಿದಂತೆ ಅನೇಕರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
----1ಎಚ್‌ಯುಬಿ22
ಕಂಚಗಾರ ಓಣಿಯ ಹಿರೇಪೇಟೆ, ಭೂಸಪೇಟೆ ಶ್ರೀ ಗಣೇಶೋತ್ಸವ ಮಂಡಳಿ ವತಿಯಿಂದ ಗಣೇಶೋತ್ಸವ ಪ್ರಯುಕ್ತ ಉಚಿತ ಕಣ್ಣಿನ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.1ಎಚ್‌ಯುಬಿ23
ಕಂಚಗಾರ ಓಣಿಯ ಹಿರೇಪೇಟೆ, ಭೂಸಪೇಟೆ ಶ್ರೀ ಗಣೇಶೋತ್ಸವ ಮಂಡಳಿ ವತಿಯಿಂದ ಗಣೇಶೋತ್ಸವ ಪ್ರಯುಕ್ತ ಪ್ರಯಾಗರಾಜ್ ಕುಂಭಮೇಳ ಮಾದರಿ ಸನ್ನಿವೇಶ ವೀಕ್ಷಿಸುತ್ತಿರುವ ಭಕ್ತರು.1ಎಚ್‌ಯುಬಿ24
ಪ್ರಯಾಗರಾಜ್ ಕುಂಭಮೇಳದಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮ ಸ್ಥಾನದ ಸನ್ನಿವೇಶದ ಒಂದು ದೃಶ್ಯ.