ಉತ್ತಮ ಮಳೆ, ಬೆಳೆಗಾಗಿ ಮರಗಮ್ಮದೇವಿಗೆ ಪ್ರಾರ್ಥನೆ

KannadaprabhaNewsNetwork |  
Published : May 29, 2024, 12:54 AM IST
೨೮ಬಿಎಸ್ವಿ೦೧- ಬಸವನವಬಾಗೇವಾಡಿ ಮರಗಮ್ಮದೇವಿ ದೇವಸ್ಥಾನದ ಜಾತ್ರೆಯಂಗವಾಗಿ ಮಂಗಳವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು. | Kannada Prabha

ಸಾರಾಂಶ

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ: ಪಟ್ಟಣದ ಮರಗಮ್ಮದೇವಿ ದೇವಸ್ಥಾನದ ಜಾತ್ರಾಮಹೋತ್ಸವ ಹಾಗೂ ಉಡಿ ತುಂಬುವ ಕಾರ್ಯಕ್ರಮ ಮಂಗಳವಾರ ಶ್ರದ್ಧಾ-ಭಕ್ತಿಯಿಂದ ನಡೆಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ಮರಗಮ್ಮದೇವಿಗೆ ಬೆಳಗ್ಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ:ಪಟ್ಟಣದ ಮರಗಮ್ಮದೇವಿ ದೇವಸ್ಥಾನದ ಜಾತ್ರಾಮಹೋತ್ಸವ ಹಾಗೂ ಉಡಿ ತುಂಬುವ ಕಾರ್ಯಕ್ರಮ ಮಂಗಳವಾರ ಶ್ರದ್ಧಾ-ಭಕ್ತಿಯಿಂದ ನಡೆಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ಮರಗಮ್ಮದೇವಿಗೆ ಬೆಳಗ್ಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಉತ್ತಮ ಮಳೆ ಹಾಗೂ ಬೆಳೆಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಜನರು ಕೂಡ ಕುಟುಂಬ ಸಮೇತರಾಗಿ ಆಗಮಿಸಿ ದೇವಿ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿಗಾಗಿ ದೇವರಿಗೆ ಪ್ರಾರ್ಥಿಸಿದರು.

ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಗ್ಗೆ ದೇವಸ್ಥಾನದಿಂದ ಪಲ್ಲಕ್ಕಿ ಹಾಗೂ ದೇವಸ್ಥಾನದ ಕಳಸವು ಬಸವೇಶ್ವರ ದೇವಸ್ಥಾನದ ಬಸವ ತೀರ್ಥ ಬಾವಿಗೆ ವಾದ್ಯಮೇಳದೊಂದಿಗೆ ಗಂಗಾಸ್ಥಳಕ್ಕೆ ತೆರಳಿತು. ಗಂಗಾಸ್ಥಳ ಪೂಜೆ ನಂತರ ಪಲ್ಲಕ್ಕಿ ಉತ್ಸವ ಹಾಗೂ ಕಳಸವು ಅದ್ದೂರಿ ಮೆರವಣಿಗೆ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ದೇವಸ್ಥಾನಕ್ಕೆ ಮರಳಿತು.ಮೆರವಣಿಗೆ ದೇವಸ್ಥಾನಕ್ಕೆ ಮರಳಿದ ನಂತರ ಕಳಸಾರೋಹಣ ನೆರವೇರಿಸಿ ಮರಗಮ್ಮದೇವಿಗೆ ಭಕ್ತರ ಸಮ್ಮುಖದಲ್ಲಿ ಉಡಿ ತುಂಬಿ ಭಕ್ತರಿಗೆ ಸುಖ-ನೆಮ್ಮದಿ ನೀಡಲೆಂದು ಪ್ರಾರ್ಥನೆ ಸಲ್ಲಿಸಲಾಯಿತು. ಪಲ್ಲಕ್ಕಿ ಉತ್ಸವದ ಮೆರವಣಿಗೆಯಲ್ಲಿ ಸುತ್ತಟ್ಟಿಯ ಜಾಂಜ್‌ ಮೇಳ, ಬಸವನಬಾಗೇವಾಡಿಯ ಡೊಳ್ಳು ಮೇಳ, ಚಿಮ್ಮಲಗಿಯ ಕರಡಿ ಮಜಲು ಸೇರಿದಂತೆ ವಿವಿಧ ಜೋಗಮ್ಮರ ಕುಣಿತ ಮೆರಗು ತಂದಿತು. ಈ ವೇಳೆ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಪಲ್ಲಕ್ಕಿ ಉತ್ಸವದಲ್ಲಿ ಯರನಾಳದ ಮಹಾದೇವ ಪೂಜಾರಿ, ಮಸಬಿನಾಳದ ನಿಂಗಪ್ಪ ಪೂಜಾರಿ, ಸುರೇಶ ಪಡಶೆಟ್ಟಿ, ಬಸವರಾಜ ಚಿಂಚೋಳಿ, ಗಣಪತಿ ಬಡಿಗೇರ, ಲಕ್ಷ್ಮಣ ಅಂಬಿಗೇರ, ಅರ್ಜುನ ಜಾಧವ, ಸಂಗಮೇಶ ಕುಂಬಾರ, ಶಿವಾನಂದ ಮಡಿಕೇಶ್ವರ, ಶರಣಬಸು ಚಿಂಚೋಳಿ, ರಾಜು ಹಾರಿವಾಳ, ಗಿರೀಶ ಮೇಟಿ, ಮಲ್ಲು ಪೂಜಾರಿ, ಲಕ್ಷ್ಮಣ ಪವಾರ, ಮಹಾಂತೇಶ ಚಿಂಚೋಳಿ, ಸಂತೋಷ ಚಿಂಚೋಳಿ, ಮಲ್ಲು ಕುಂಬಾರ, ಪ್ರಶಾಂತ ಬಿಜಾಪುರ, ಆನಂದ ನಾಯ್ಕೋಡಿ, ಸಂಗು ಪಡಶೆಟ್ಟಿ, ಕಲ್ಲವ್ವ ಸಾರವಾಡ, ರೇಖಾ ಮಾಲಗಾರ, ಉಜಮಾನ ನದಾಫ, ಗಂಗವ್ವ ದಂಡಿನ, ಲಕ್ಷ್ಮೀ ಸಾರವಾಡ, ಬಸಮ್ಮ ಆಲಗೊಂಡ, ಗೀತಾ ಪಡಶೆಟ್ಟಿ, ನಿರ್ಮಲಾ ಪಡಶೆಟ್ಟಿ, ತುಳಜಾ ರಜಪೂತ, ಸವಿತಾ ಮಾಲಗಾರ, ನೀಲವ್ವ ಚಿಂಚೋಳಿ, ಲಕ್ಷ್ಮೀಬಾಯಿ ಮೇಟಿ, ಸುಜಾತಾ ಉಪ್ಪಲದಿನ್ನಿ, ಅನ್ನಕ್ಕ ಚಿಂಚೋಳಿ ಇತರರು ಭಾಗವಹಿಸಿದ್ದರು.

PREV

Recommended Stories

ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ
ಮಾಧ್ಯಮ ಸಾಧಕರಿಗೆ ನ್ಯೂ ಇಂಡಿಯನ್‌ ಟೈಮ್ಸ್‌ ಪ್ರಶಸ್ತಿ