ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಬಳಿಯ ಸೂರ್ಯಕಮಲ್ ಮಹಲ್ ಸಭಾಭವನದಲ್ಲಿ ಭಾನುವಾರ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ವತಿಯಿಂದ ಬೆಳ್ತಂಗಡಿ ತಾಲೂಕು ಸಮಿತಿ ಹಾಗೂ ತಾಲೂಕು ಮಹಿಳಾ ಘಟಕದ ಸಹಯೋಗದಲ್ಲಿ ‘ಸಾಹಿತ್ಯದಲ್ಲಿ ಭಾರತೀಯ ಮಹಿಳೆ’ ವಿಷಯದಲ್ಲಿ ಜರಗಿದ ರಾಜ್ಯ ಮಹಿಳಾ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ದಿಕ್ಸೂಚಿ ಭಾಷಣ ನೆರವೇರಿಸಿದ ಸಂಶೋಧಕಿ ಡಾ. ಪ್ರಮೀಳಾ ರಾವ್, ಸಂಪ್ರದಾಯಸ್ತವಾದ ನಮ್ಮ ರಾಷ್ಟ್ರದಲ್ಲಿ ಮಾತೃ ಪ್ರೇಮ ಕಾಣುವ ಸಂಸ್ಕೃತಿ ಇದೆ. ಉತ್ತಮ ಅಂಶಗಳನ್ನು ಮೈಗೂಡಿಸಿ ಸಾಹಿತ್ಯ ರಚಿಸುವ ಜಾಣ್ಮೆಯನ್ನು ಮೈಗೂಡಿಸಿಕೊಳ್ಳಬೇಕು. ಸಾಹಿತ್ಯದಿಂದ ಸಮಾಜವನ್ನು ತಿದ್ದುವ ಕೆಲಸವಾಗಬೇಕು ಎಂದರು.ಅ.ಭಾ.ಸಾ.ಪ. ಮಹಿಳಾ ಪ್ರಮುಖ್ ವಿನುತಾ ಕೆ.ಆರ್. ಪ್ರಾಸ್ತಾವಿಕ ಮಾತನಾಡಿ,
ಸ್ವಾಗತ ಸಮಿತಿ ಅಧ್ಯಕ್ಷೆ ಸೋನಿಯಾ ವರ್ಮಾ ಸ್ವಾಗತಿಸಿದರು. ದಿವ್ಯಾ ಹೆಗಡೆ ಕಬ್ಬಿನಗದ್ದೆ ನಿರೂಪಿಸಿದರು. ಸ್ವಾಗತ ಸಮಿತಿ ಕಾರ್ಯದರ್ಶಿ ವಿದ್ಯಾಶ್ರೀ ಅಡೂರು ಹಾಗೂ ಪದಾಧಿಕಾರಿಗಳು ಸಹಕರಿಸಿದರು.
ಸಾಹಿತಿ ಶೈಲಜಾ ಗೋರನಮನೆ ಶಿರಸಿ ಅವಲೋಕನದಲ್ಲಿ ನಡೆದ ಕವಯತ್ರಿ ಸಮ್ಮಿಲನದಲ್ಲಿ ರಾಜ್ಯದ ಕವಿಯಿತ್ರಿಯರಾದ ಅರ್ಚನಾ ಹೆಬ್ಬಾರ್ ಬೆಂಗಳೂರು, ಶೀಲಾ ಅರಕಲಗೂಡು, ಮೇಧಾ ಪ್ರಹ್ಲಾದಾಚಾರ್ಯ, ಜಯಂತಿ ಎಂ.ಎನ್., ಗುಣವತಿ ಕೆ.ಪಿ.,ಪ್ರೇಮಾ ಆರ್. ಶೆಟ್ಟಿ, ವಿನುತಾ ಗೌಡ, ಆಶಾ ಅಡೂರು, ಉಮಾಶಂಕರಿ ಮರಿಕೆ, ವಿಮಲಾರುಣ ಪಡ್ಡಂಬೈಲು, ಸುಜಾತಾ ಆರ್. ರಾವ್, ವಿಜಯಲಕ್ಷ್ಮೀ ಚೆಕ್ಕೆ, ನಂದಾ ಪ್ರೇಮ ಕುಮಾರ್, ಮಂಜುಳಾ ಪ್ರಸಾದ್, ವೀಣಾ ಕೃಷ್ಣಮೂರ್ತಿ, ವೀಣಾ ಬರಗಿ , ಮಂಗಳಾ ಭಾಗ್ವತ್, ಮಹಾದೇವಿ ಗೌಡ, ದಾಕ್ಷಾಯಿಣಿ ವಿಜಯಪುರ ಮೊದಲಾದ ಕವಯತ್ರಿಯರು ಸ್ವ-ರಚಿತ ಕವನಗಳನ್ನು ವಾಚಿಸಿದರು.
ಸಂಜೆ ಸಾಹಿತಿ, ಗಮಕ ವ್ಯಾಖ್ಯಾನಕಾರೆ ಬೆಂಗಳೂರಿನ ಶ್ರೀಮತಿ ಶಾಂತಾ ನಾಗಮಂಗಲ ಸಮಾರೋಪ ಸಮಾರಂಭದಲ್ಲಿ ಮಹಿಳೆಯರಿಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಮಾನ ಅವಕಾಶ ದೊರೆಯಬೇಕು ಎಂದು ಅಭಿಪ್ರಾಯಪಟ್ಟರು. ಅಭಾಸಾಪ ತಾಲೂಕು ಮಹಿಳಾ ಪ್ರಕಾರದ ಪ್ರಮುಖ್ ವಿದ್ಯಾಶ್ರೀ ಅಡೂರ್ ವಂದಿಸಿದರು.