ಅವಧಿಪೂರ್ವ ಸಾಲ ಪಾತಿಸಿದಲ್ಲಿ ರೈತರಿಗೆ ಅಧಿಕ ಪ್ರಯೋಜನ: ಬಿ.ಕೆ. ಬರಡ್ಡಿ

KannadaprabhaNewsNetwork |  
Published : Jun 17, 2024, 01:39 AM IST
16 ರೋಣ 1. ರೋಣ ತಾಲೂಕಿನ ಮುಗಳಿ ಗ್ರಾಮದ ಶರಣ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ ರೋಣ ಶಾಖೆ ವತಿಯಿಂದ ರೈತ ಸಂಪರ್ಕ ಸಭೆ ಜರುಗಿತು. | Kannada Prabha

ಸಾರಾಂಶ

ರೋಣ ತಾಲೂಕಿನ ಮುಗಳಿ ಗ್ರಾಮದ ಶರಣ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಭಾರತೀಯ ಸ್ಠೇಟ್ ಬ್ಯಾಂಕ ( ಎಸ್.ಬಿ.ಐ) ವತಿಯಿಂದ ಜರುಗಿದ ರೈತ ಸಂಪರ್ಕ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ರೋಣ

ಬ್ಯಾಂಕಗಳ ಮೂಲಕ ಪಡೆದಿರುವ ಸರ್ಕಾರಿ ಸಾಲ ಸೌಲಭ್ಯವನ್ನು ಅವಧಿಪೂರ್ವ ಅಥವಾ ಸಕಾಲಕ್ಕೆ ಮರು ಪಾವತಿಸಿದಲ್ಲಿ ರೈತರಿಗೆ ಹೆಚ್ಚಿನ ಪ್ರಯೋಜನ ದೊರೆಯುವ ಜೊತೆಗೆ ಆರ್ಥಿಕವಾಗಿ ಬ್ಯಾಂಕ್ ಮತ್ತು ರೈತರು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ. ಈ ದಿಶೆಯಲ್ಲಿ ರೈತರ ಸಹಕಾರ ಅತೀ ಮುಖ್ಯವಾಗಿದೆ ಎಂದು ರೋಣ ಎಸ್‌ಬಿಐ ಬ್ಯಾಂಕ್‌ ವ್ಯವಸ್ಥಾಪಕ ಬಿ.ಕೆ. ಬರಡ್ಡಿ ಹೇಳಿದರು.

ತಾಲೂಕಿನ ಮುಗಳಿ ಗ್ರಾಮದ ಶರಣ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಭಾರತೀಯ ಸ್ಠೇಟ್ ಬ್ಯಾಂಕ ( ಎಸ್.ಬಿ.ಐ) ವತಿಯಿಂದ ಜರುಗಿದ ರೈತ ಸಂಪರ್ಕ ಸಭೆಯಲ್ಲಿ ಮಾತನಾಡಿದರು.

ರೈತರಿಗಾಗಿ ಬ್ಯಾಂಕ್ ಮತ್ತು ಸರ್ಕಾರದಿಂದ ಅನೇಕ ಸವಲತ್ತುಗಳು ಇರುತ್ತವೆ. ರೈತರು ಅವುಗಳ ಬಗ್ಗೆ ತಿಳಿದು, ಅವುಗಳನ್ನು ಪಡೆಯಲು ಏನು ಮಾಡಬೇಕು ಎಂಬುದನ್ನು ಅರಿಯಬೇಕು. ಬ್ಯಾಂಕ್‌ಗಳಲ್ಲಿ ಪಡೆದ ಸಾಲವನ್ನು ಸಕಾಲಕ್ಕೆ ಅಥವಾ ಅವಧಿ ಪೂರ್ವದಲ್ಲಿ ಮರು ಪಾವತಿ ಮಾಡುವುದು ಅತೀ ಸೂಕ್ತವಾಗಿದೆ. ಇದರಿಂದ ತಮ್ಮದೇ ಸಿಬಿಲ್ ಸ್ಕೋರ್ ಹೆಚ್ಚಳವಾಗಿ. ಶೇ. 3ರಷ್ಟು ಅಧಿಕ ಸೌಲಭ್ಯಗಳು ಸೀಗುತ್ತವೆ. ಮುದ್ರಾ, ಸ್ಟಾಂಡಪ್ ಇಂಡಿಯಾ ಯೋಜನೆ, ಸ್ಟಾರ್ಟಪ್ ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಮೂಲಕ ಬ್ಯಾಂಕ್‌ನಲ್ಲಿ ಸಾಲ ಸೌಲಭ್ಯ ಸಿಗಲಿದ್ದು, ರೈತರು ಈ ಕುರಿತು ತಿಳಿದುಕೊಳ್ಳಬೇಕು ಎಂದರು.

ಆರ್ಥಿಕ ಸಾಕ್ಷರತಾ ಸಲಹೆಗಾರ ಮಲ್ಲಿಕಾರ್ಜುನ‌ ಕುಲಕರ್ಣಿ ಮಾತನಾಡಿ, ಸಾಮಾಜಿಕ ಸುರಕ್ಷತಾ ಯೋಜನೆಗಳಾದ ಪ್ರಧಾನಮಂತ್ರಿ ಜನಧನ, ಪ್ರಧಾನಮಂತ್ರಿ ಜೀವನ ಜ್ಯೋತಿ, ಪ್ರಧಾನಮಂತ್ರಿ ಸುರಕ್ಷಾ ಯೋಜನೆ, ಅಟಲ್ ಪೆನ್ಸನ್ ಯೋಜನೆ ಕುರಿತು ರೈತರು ತಿಳಿದು, ಅವುಗಳ ಪ್ರಯೋಜನ ಪಡೆಯಬೇಕು ಎಂದರು.

ಸಭೆಯಲ್ಲಿ ರೈತ ಮುಖಂಡ ಮಲ್ಲಸರ್ಜಾ ದೇಸಾಯಿ, ಶೌಖತಲಿ ನದಾಫ್‌, ಯಲ್ಲಪ್ಪ ಕುರಿ, ಬಸನಗೌಡ ಉಸಲಕೊಪ್ಪ, ಭೀಮನಗೌಡ ಉಸಲಕೊಪ್ಪ, ಬ್ಯಾಂಕ್‌ ಸಿಬ್ಬಂದಿ ಮಲ್ಲಪ್ಪ ಸಂಗಳದ, ಜಾವೀದ್ ಮುರಗಿಕಟ್ಟಿ, ಮಲ್ಲಿಕ ಹೊಸೂರ, ಅಶ್ವಿನಿ ಕಿತ್ತಲಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ