ಭಕ್ತರು, ದಾನಿಗಳು ಹಾಗೂ ಸಮಾಜದ ಸರ್ವರ ಸಹಕಾರದೊಂದಿಗೆ ಪಂಚಮ ವರ್ಷದ ಉಡುಪಿ-ಉಚ್ಚಿಲ ದಸರಾ 2026 ಅನ್ನು ಈ ಬಾರಿ ಅತ್ಯಂತ ಶಿಸ್ತುಬದ್ಧವಾಗಿ, ಅಚ್ಚುಕಟ್ಟಾಗಿ ಹಾಗೂ ವೈಭವೋಪೇತವಾಗಿ ಆಚರಿಸಲಾಗುತ್ತದೆ ಎಂದು ಈ ದಸರಾ ರೂವಾರಿ ನಾಡೋಜ ಡಾ. ಜಿ. ಶಂಕರ್ ಹೇಳಿದರು.
ಕಾಪು: ಭಕ್ತರು, ದಾನಿಗಳು ಹಾಗೂ ಸಮಾಜದ ಸರ್ವರ ಸಹಕಾರದೊಂದಿಗೆ ಪಂಚಮ ವರ್ಷದ ಉಡುಪಿ-ಉಚ್ಚಿಲ ದಸರಾ 2026 ಅನ್ನು ಈ ಬಾರಿ ಅತ್ಯಂತ ಶಿಸ್ತುಬದ್ಧವಾಗಿ, ಅಚ್ಚುಕಟ್ಟಾಗಿ ಹಾಗೂ ವೈಭವೋಪೇತವಾಗಿ ಆಚರಿಸಲಾಗುತ್ತದೆ ಎಂದು ಈ ದಸರಾ ರೂವಾರಿ ನಾಡೋಜ ಡಾ. ಜಿ. ಶಂಕರ್ ಹೇಳಿದರು.
ಉಚ್ಚಿಲ ಶ್ರೀ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆದ ಉಡುಪಿ–ಉಚ್ಚಿಲ ದಸರಾ ಸಮಿತಿಯ ಸರ್ವ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವರ್ಷದಿಂದ ವರ್ಷಕ್ಕೆ ಈ ಉತ್ಸವವು ದೇಶ-ವಿದೇಶಗಳ ಭಕ್ತರ ಗಮನ ಸೆಳೆಯುತ್ತಿದ್ದು, ಪಂಚಮ ವರ್ಷದ ದಸರಾ ಉತ್ಸವವನ್ನು ಇನ್ನಷ್ಟು ವೈಭವದಿಂದ, ವ್ಯವಸ್ಥಿತವಾಗಿ, ವೈವಿಧ್ಯಮಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಶಿಷ್ಟ ವಸ್ತು ಪ್ರದರ್ಶನ, ವಿದ್ಯುದ್ದೀಪಾಲಂಕಾರ, ನಿತ್ಯ ಅನ್ನಸಂತರ್ಪಣೆಯೊಂದಿಗೆ ಆಚರಿಸಲಾಗುತ್ತದೆ ಎಂದರು.
ಉದ್ಯಮಿ ಆನಂದ್ ಸಿ. ಕುಂದರ್ ಮಾತನಾಡಿ, ಬೆಲೆ ಏರಿಕೆಯಿಂದ ಕಾರ್ಯಕ್ರಮದ ಖರ್ಚುವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಸೂಕ್ತ ಗಮನ ಹರಿಸಿ ಕಾರ್ಯಕ್ರಮಗಳನ್ನು ಯೋಜನಾಬದ್ಧವಾಗಿ ಸಂಯೋಜಿಸಬೇಕಾಗಿದೆ. ಈ ವರ್ಷದ ದಸರಾ ಉತ್ಸವಕ್ಕೂ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ದ.ಕ. ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಮಾತನಾಡಿ, ಪಂಚಮ ವರ್ಷದ ಉಡುಪಿ–ಉಚ್ಚಿಲ ದಸರಾವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸರ್ವ ಭಕ್ತರು ಸಹಕಾರ ನೀಡುವಂತೆ ಮನವಿ ಮಾಡಿದರು.
ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಶಾಸಕ ಯಶ್ ಪಾಲ್ ಸುವರ್ಣ, ಪ್ರಮುಖರಾದ ಮೋಹನ್ ಬೆಂಗ್ರೆ, ಶರಣ್ ಕುಮಾರ್ ಮಟ್ಟು, ವಿನಯ್ ಕರ್ಕೇರ, ರಾಘವೇಂದ್ರ ಉಪಾಧ್ಯಾಯ, ಗಿರಿಧರ ಸುವರ್ಣ ಮೂಳೂರು, ಹರಿಯಪ್ಪ ಆರ್ ಕೋಟ್ಯಾನ್, ಯುವರಾಜ್ ಸಾಲಿಯಾನ್ ಮಸ್ಕತ್, ಸತೀಶ್ ಅಮೀನ್ ಬಾರ್ಕೂರು, ಉದಯ್ ಕುಮಾರ್ ಹಟ್ಟಿಯಂಗಡಿ, ರತ್ನಾಕರ್ ಸಾಲ್ಯಾನ್ ಮಲ್ಪೆ, ನಾಗರಾಜ ಸುವರ್ಣ ಮಲ್ಪೆ, ಶ್ರೀಪತಿ ಭಟ್ ಉಚ್ಚಿಲ, ಕವಿತಾ ಕಾಂಚನ್, ಸುಗುಣ ಕರ್ಕೇರ, ಸುಧೀರ್ ಉಳ್ಳಾಲ, ಮನೋಜ್ ಕಾಂಚನ್ ಎರ್ಮಾಳು, ಮನೋಜ್ ಉಳ್ಳಾಲ, ರಾಜೇಶ್ ಪುತ್ರನ್ ಉಳ್ಳಾಲ, ಸತೀಶ್ ಕುಂದರ್ ಮಲ್ಪೆ, ರವೀಶ್ ಎಸ್. ಕೊರವಡಿ, ಗೌತಮ್ ಕೋಡಿಕಲ್, ಗುಂಡು ಬಿ. ಅಮೀನ್ ಕಿದಿಯೂರು, ವಾಸುದೇವ ಸಾಲ್ಯಾನ್ ಕಟಪಾಡಿ, ಸುಧಾಕರ್ ಕುಂದರ್ ಮಲ್ಪೆ, ದಿನೇಶ್ ಎರ್ಮಾಳ್, ಚೇತನ್ ಬೆಂಗ್ರೆ, ಶಿವರಾಮ ಕೋಟ, ಕಿರಣ್ ಕುಮಾರ್ ಪಿತ್ರೋಡಿ ಉಪಸ್ಥಿತರಿದ್ದರು. ದಸರಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಕುಂದರ್ ಮಲ್ಪೆ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.