ದಾವಣಗೆರೆ: 12ನೇ ಶತಮಾನದಲ್ಲಿನ ಪ್ರಮುಖ ಶರಣರಾದ ಶ್ರೀ ಮಡಿವಾಳ ಮಾಚಿದೇವ ಅವರ ಹೆಸರಿನಲ್ಲಿ ಸ್ಥಾಪಿತವಾದ ಚಿತ್ರದುರ್ಗದ ಜಗದ್ಗುರು ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದಲ್ಲಿ ಜ.6ರಂದು ಕಾಯಕ ಜನೋತ್ಸವ-2026 ಕಾರ್ಯಕ್ರಮ ಚಿತ್ರದುರ್ಗದ ಹಳೆ ರಾಷ್ಟ್ರೀಯ ಹೆದ್ದಾರಿಯ ದಾವಣಗೆರೆ ರಸ್ತೆಯಲ್ಲಿ ಬರುವ ಜಗದ್ಗುರು ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದಲ್ಲಿ ನಡೆಯಲಿದೆ.
ಕಾಯಕ ಜನೋತ್ಸವವು ಮಠದ ಶಂಕುಸ್ಥಾಪನೆಯ 17ನೇ ವಾರ್ಷಿಕೋತ್ಸವ, ಮಹಾಸ್ವಾಮಿಗಳ ಜಂಗಮದೀಕ್ಷೆಯ 27ನೇ ವಾರ್ಷಿಕೋತ್ಸವ, ಶ್ರೀಗಳ 42ನೇ ಜನ್ಮದಿನ ಮತ್ತು ಜಗದ್ಗುರು ಡಾ.ಶ್ರೀಬಸವ ಮಾಚಿದೇವ ಮಹಾಸ್ವಾಮಿಗಳ 8ನೇ ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಆಯೋಜಿಸಲಾಗಿದೆ.
ಕಾಯಕ ಜನೋತ್ಸವದಲ್ಲಿ ಶ್ರೀ ಮಾಚಿದೇವರ ಜೀವನ ಮೌಲ್ಯಗಳ ಕುರಿತು ವಿಶೇಷ ಉಪನ್ಯಾಸ, ಸಾಮೂಹಿಕ ಕಲ್ಯಾಣ ಮಹೋತ್ಸವ, ವಧು-ವರರ ಸಮಾವೇಶ, ವಚನ ಸಾಹಿತ್ಯ ಸಂರಕ್ಷಕ ಹಾಗೂ ವೀರಗಣಾಚಾರಿ ಶ್ರೀ ಮಡಿವಾಳ ಮಾಚಿದೇವರ ಮೂರ್ತಿ ಮತ್ತು ವಚನ ಪಲ್ಲಕ್ಕಿ ಉತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ. ವಚನ ಪಲ್ಲಕ್ಕಿ ಉತ್ಸವವನ್ನು ಸಕಲ ಕಲಾಮೇಳಗಳೊಂದಿಗೆ ನಡೆಸಲಾಗುವುದು.ಜಗದ್ಗುರು ಡಾ. ಶ್ರೀ ಬಸವ ಮಾಚಿದೇವ ಮಹಾಸ್ವಾಮೀಜಿ ನೇತೃತ್ವದಲ್ಲಿ ಕಾಯಕ ಜನೋತ್ಸವ ನಡೆಯಲಿದೆ. ನಾಡಿನ ಜನಪ್ರತಿನಿಧಿಗಳು, ಚಿಂತಕರು, ಸಾಹಿತಿಗಳು ಮತ್ತು ಸಮಾಜ ಮುಖಂಡರು ಭಾಗವಹಿಸಲಿದ್ದಾರೆ. ಸಮಾಜದ ಎಲ್ಲ ಕುಲಬಾಂಧವರು ಭಾಗವಹಿಸಿ, ತನು-ಮನ-ಧನದಿಂದ ಸಹಕಾರ ನೀಡಲು ಶ್ರೀಗಳು ಕೋರಿದ್ದಾರೆ.
- - --2ಕೆಡಿವಿಜಿ32: ಡಾ.ಶ್ರೀ ಬಸವ ಮಾಚಿದೇವ ಮಹಾಸ್ವಾಮೀಜಿ