ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ವೃಕ್ಷಥಾನ್ ಹೆರಿಟೇಜ್ ರನ್- 2023 ಪೂರ್ವ ಸಿದ್ಧತೆಗಳ ಕುರಿತು ನಡೆದ ಕೋರ್ ಕಮೀಟಿ ಸಭೆಯಲ್ಲಿ ಮಾತನಾಡಿದರು. ಓಟದಲ್ಲಿ ಪಾಲ್ಗೊಳ್ಳುತ್ತಿರುವ ಫೇಸರ್, ಅಂಬಾಸೀಡರ್ ಮತ್ತು ಪ್ರಮುಖ ಕ್ರೀಡಾಪಟುಗಳು ಈ ಬಾರಿಯ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ನೀಡುತ್ತಿದ್ದಾರೆ. ಕ್ರೀಡಾಪಟುಗಳು ಓಡುವ ಮಾರ್ಗದಲ್ಲಿ ಅಲ್ಲಲ್ಲಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಸಂಗೀತ ಮತ್ತು ನೃತ್ಯ ಪ್ರದರ್ಶನ ಮೂಲಕ ಓಟಗಾರರಿಗೆ ಪ್ರೋತ್ಸಾಹ ನೀಡಲಿದ್ದಾರೆ. ಕೋರ್ ಕಮಿಟಿಯ ಎಲ್ಲ ಪದಾಧಿಕಾರಿಗಳು ಮತ್ತು ಜಿಲ್ಲಾಡಳಿತದ ಸಹಕಾರದಿಂದ ಹೆರಿಟೇಜ್ ರನ್‌ಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಈ ಬಾರಿಯ ಕಾರ್ಯಕ್ರಮ ರಾಜ್ಯವಷ್ಟೇ ಅಲ್ಲ, ದೇಶಾದ್ಯಂತ ಗಮನ ಸೆಳೆಯುತ್ತಿದ್ದು, ಸಂಪೂರ್ಣ ಯಶಸ್ವಿಯಾಗಲಿದೆ ಎಂದು ಹೇಳಿದರು.
ಸಭೆಯಲ್ಲಿ ಖ್ಯಾತ ಓಟಗಾರರಾದ ರಾಜಿಂದರ್ ಕೌರ್, ಶೋಭಾ ನರೇಂದ್ರಕುಮಾರ ನಾಗಶೆಟ್ಟಿ ಕೂಡ ಪಾಲ್ಗೊಂಡಿದ್ದರು. ಸಿ.ಆರ್.ಡಿ.ಎಸ್. ಫೌಂಡೇಶನ್ ಸಂಸ್ಥಾಪಕ ನಿರ್ದೇಶಕಿಯೂ ಆಗಿರುವ ಶೋಭಾ ನರೇಂದ್ರಕುಮಾರ ನಾಗಶೆಟ್ಟಿ ಮಾತನಾಡಿ, ರಾಷ್ಟ್ರಮತ್ತು ಅಂತಾರಾಷ್ಟ್ರೀಯ ಓಟಗಾರರು ಈ ವೃಕ್ಷಥಾನ್ ಹೆರಿಟೇಜ್ ರನ್- 2023 ನಲ್ಲಿ ಪಾಲ್ಗೊಳ್ಳುತ್ತಿರುವುದು ಈ ಬಾರಿಯ ಕಾರ್ಯಕ್ರಮದ ಜನಪ್ರೀಯತೆಗೆ ಸಾಕ್ಷಿಯಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ವಿಜಯಪುರ ಜಿಲ್ಲೆಯ ಜನತೆ ಮ್ಯಾರಾಥಾನ್‌ಗಳಲ್ಲಿ ಪಾಲ್ಗೊಳ್ಳಲು ಸ್ಫೂರ್ತಿಯಾಗಿದೆ ಎಂದು ಹೇಳಿದರು.ಅಂತಾರಾಷ್ಟ್ರೀಯ ಖ್ಯಾತಿಯ ಅಲ್ಟ್ರಾ ಮ್ಯಾರಾಥಾನ್ ಕ್ರೀಡಾಪಟು 53 ವರ್ಷದ ರಾಜಿಂದರ್ ಕೌರ್ ಮಾತನಾಡಿ, ನಾನು ಈ ಮುಂಚೆ ದೇಶ ಮತ್ತು ವಿದೇಶಗಳಲ್ಲಿ ಹಲವಾರು ಓಟಗಳಲ್ಲಿ ಪಾಲ್ಗೊಂಡಿದ್ದೇನೆ. ಆದರೆ, ವೃಕ್ಷಥಾನ್ ಹೆರಿಟೇಜ್ ರನ್ ನಲ್ಲಿ ಪಾಲ್ಗೊಳ್ಳಲು ಸಾವಿರಾರು ಜನ ಹೆಸರು ನೋಂದಾಯಿಸಿರುವುದು ಅಚ್ಚರಿ ಹಾಗೂ ಸಂತಸ ಉಂಟುಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಉದ್ಯಮಿ ಚಂದ್ರಕಾಂತ ಶೆಟ್ಟಿ ಮಾತನಾಡಿ, ಕಾರ್ಯಕ್ರಮ ಆಯೋಜನೆ ಕುರಿತು ಕೈಗೊಳ್ಳಲಾದ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಿದರು.
ನಾವೇದ ನಾಗಠಾಣ, ಕೋರ್ ಕಮೀಟಿಯ ಮುಖಂಡರಾದ ಸಂಕೇತ ಬಗಲಿ, ಶಿವನಗೌಡ ಪಾಟೀಲ, ಸಂಗಮೇಶ ಬಬಲೇಶ್ವರ, ಶಾಂತೇಶ ಕಳಸಗೊಂಡ, ಸಂತೋಷ ಔರಸಂಗ, ಶಿವಾನಂದ ಯರನಾಳ, ಅಮೀತ ಬಿರಾದಾರ, ನಾವೀದ ನಾಗಠಾಣ, ಸೋಮು ಮಠ, ಆಕಾಶ ಚೌಕಿಮಠ, ಮಹೇಶ ವಿ. ಶಟಗಾರ, ಜಗದೀಶ ಪಾಟೀಲ ಇತರರು ಉಪಸ್ಥಿತರಿದ್ದರು.