ಐತಿಹಾಸಿಕ ಬಸವೇಶ್ವರ ಜಾತ್ರೆಗೆ ಭರದ ಸಿದ್ಧತೆ

KannadaprabhaNewsNetwork |  
Published : Aug 09, 2025, 12:28 AM IST
೭ಬಿಎಸ್ವಿ೦೩- ಬಸವನಬಾಗೇವಾಡಿಯ ಬಸವೇಶ್ವರ ದೇವಾಲಯ ಅಂತರಾಷ್ಟ್ರೀಯ ಶಾಲಾ ಆವರಣದಲ್ಲಿರುವ ನಂದೀಶ್ವರ ರಂಗಮಂದಿರದಲ್ಲಿ ಮೂಲನಂದೀಶ್ವರ(ಬಸವೇಶ್ವರ) ದೇವರ ಜಾತ್ರೆಯಂಗವಾಗಿ ಗುರುವಾರ ಸಂಜೆ ಜರುಗಿದ ಪೂರ್ವಭಾವಿ ಸಭೆಯಲ್ಲಿ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ ಜಾತ್ರಾಮಹೋತ್ಸವ ಆ.೧೧ರಿಂದ ೧೫ ರವರೆಗೆ ಐದು ದಿನಗಳ ಕಾಲ ನಡೆಯಲಿದ್ದು, ಯಶಸ್ವಿಗೆ ಸಾರ್ವಜನಿಕರು ಸೇರಿ ಎಲ್ಲ ಇಲಾಖೆಗಳು ಸಹಕಾರ ಅಗತ್ಯ ಎಂದು ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ ಜಾತ್ರಾಮಹೋತ್ಸವ ಆ.೧೧ರಿಂದ ೧೫ ರವರೆಗೆ ಐದು ದಿನಗಳ ಕಾಲ ನಡೆಯಲಿದ್ದು, ಯಶಸ್ವಿಗೆ ಸಾರ್ವಜನಿಕರು ಸೇರಿ ಎಲ್ಲ ಇಲಾಖೆಗಳು ಸಹಕಾರ ಅಗತ್ಯ ಎಂದು ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.ಪಟ್ಟಣದ ನಂದೀಶ್ವರ ರಂಗಮಂದಿರದ ಮುಂಭಾಗದಲ್ಲಿ ನಡೆದ ಜಾತ್ರಾಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ಬಸವೇಶ್ವರ ದೇವಾಲಯ ಸರ್ಕಾರದ ಸರ್ಕಾರದ ಸಪರ್ದಿಯಲ್ಲಿದ್ದರೂ ಪಟ್ಟಣದ ಎಲ್ಲ ಹಿರಿಯರು ಸೇರಿದಂತೆ ಎಲ್ಲರು ಸೇರಿ ಜಾತ್ರೆಯನ್ನು ಪ್ರತಿವರ್ಷ ಶ್ರಾವಣ ಮಾಸದಲ್ಲಿ ಮಾಡಿಕೊಂಡು ಬರಲಾಗುತ್ತಿದೆ. ಜಾತ್ರೆಯಲ್ಲಿ ಯಾರಿಗೂ ಅಸಮಾಧನವಾಗದಂತೆ ನೋಡಿಕೊಳ್ಳಲಾಗುತ್ತಿದೆ. ಈ ವರ್ಷದ ಜಾತ್ರೆ ಉತ್ಸವ ಸಮಿತಿ ಅಧ್ಯಕ್ಷರನ್ನಾಗಿ ಬಂಜಾರ ಸಮುದಾಯದ ರವಿ ರಾಠೋಡ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಈ ಸಮಿತಿಯಲ್ಲಿ ಎಲ್ಲ ಜನಾಂಗದ ಜನರನ್ನು ಪದಾಧಿಕಾರಿಗಳನ್ನಾಗಿ ಮಾಡಲಾಗಿದೆ. ಜಾತ್ರೆಗೆ ಬರುವ ಎಲ್ಲರಿಗೂ ಕುಡಿಯುವ ನೀರು, ದಾಸೋಹ ಸೇರಿ ಎಲ್ಲ ಸೌಲಭ್ಯ ಒದಗಿಸಿಕೊಡಲಾಗುವದು. ಈಗಾಗಲೇ ಜಾತ್ರೆ ಯಶಸ್ವಿಗೆ ಸಿದ್ಧತೆ ಭರದಿಂದ ನಡೆದಿದ್ದಾಗಿ ತಿಳಿಸಿದರು.ಜಾತ್ರೆಯಲ್ಲಿ ಅಂಗಡಿಗಳನ್ನು ಹಾಕಲು ಬೆಸ್ಕಾಂ ತಾತ್ಕಲಿಕವಾಗಿ ಕಂಬಗಳನ್ನು ಹಾಕಿ ಮಾರಾಟಗಾರರಿಗೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಹೇಳಿದರು. ಪುರಸಭೆ ಮುಖ್ಯಾಧಿಕಾರಿಗಳು ಆ.೧೦ ರಿಂದ ಹತ್ತು ದಿನಗಳ ಕಾಲ ಬಸವೇಶ್ವರ ದೇವಸ್ಥಾನದ ಸುತ್ತಲಿನ ಮಾರುಕಟ್ಟೆ ಪ್ರದೇಶದಲ್ಲಿ ಬೀದಿ ಬದಿಯಲ್ಲಿನ ಹಣ್ಣು-ತರಕಾರಿ ಅಂಗಡಿಗಳನ್ನು ತಾತ್ಕಾಲಿಕವಾಗಿ ಬೇರೆಡೆ ವ್ಯವಸ್ಥೆ ಮಾಡುವ ಮೂಲಕ ಜನರು ಹಾಗೂ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ತಿಳಿಸಿದರು.

ತಹಸೀಲ್ದಾರ ವೈ.ಎಸ್. ಸೋಮನಕಟ್ಟಿ ಮಾತನಾಡಿ, ಆ.11 ರಿಂದ 15ರವರೆಗೆ ನಡೆಯುವ ಜಾತ್ರೆಯು ಇತರರಿಗೆ ಮಾದರಿಯಾಗುವಂತೆ ನಡೆಯಬೇಕು. ಜಾತ್ರೆಗೆ ಎಲ್ಲ ರೀತಿಯ ಸಹಕಾರ ತಾಲೂಕಾಡಳಿತದಿಂದ ನೀಡಲಾಗುವುದು. ಶಾಂತಿಯುತವಾಗಿ ಜಾತ್ರೆ ನಡೆಯುವಂತೆ ಉತ್ಸವ ಸಮಿತಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಜಾತ್ರೆಗೆ ಭಂಗ ತರುವ ವ್ಯಕ್ತಿಗಳು ಕಂಡು ಬಂದರೆ ತಕ್ಷಣ ಪೊಲೀಸ್ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕೆಂದರು.

ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಮಾತನಾಡಿ, ಜಾತ್ರೆಯಲ್ಲಿ ಟ್ರಾಫಿಕ್ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಈ ವರ್ಷ ಜಾತ್ರೆಗೆ ಹೆಚ್ಚು ಜನರು ಬರುವ ನಿರೀಕ್ಷೆಯಿದೆ. ಜಾತ್ರೆಯಲ್ಲಿ ಏನಾದರೂ ಗಲಾಟೆ ಮಾಡುವವರು ಕಂಡುಬಂದರೆ ಅಂತಹವರ ಮೇಲೆ ಇಲಾಖೆ ಕ್ರಮ ತೆಗೆದುಕೊಳ್ಳುತ್ತದೆ. ಜಾತ್ರಾ ಉತ್ಸವ ಸಮಿತಿ ಸ್ವಯಂ ಸೇವಕರನ್ನು ನಿಯೋಜಿಸಬೇಕು. ಜಾತ್ರೆಗೆ ನಮ್ಮ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದರು.

ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿ, ಜಾತ್ರೆಗೆ ಹೆಚ್ಚಿನ ಜನರು ಆಗ್ರಮಿಸುವುದರಿಂದ ಪುರಸಭೆ ಆಯಕಟ್ಟಿನಲ್ಲಿ ಸ್ಥಳಗಳಲ್ಲಿ ಮೊಬೈಲ್ ಶೌಚಾಲಯ ವ್ಯವಸ್ಥೆ, ಆರೋಗ್ಯ ಇಲಾಖೆಯಿಂದ ಮೊಬೈಲ್ ಕ್ಲಿನಿಕ್ ವ್ಯವಸ್ಥೆ ಮಾಡಬೇಕು. ಜಾತ್ರೆಗೆ ಎಲ್ಲ ಇಲಾಖೆಗಳು ಸಹಕಾರ ನೀಡಬೇಕು ಎಂದರು.

ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಜಾತ್ರೆಯಲ್ಲಿ ದಾಸೋಹ ವ್ಯವಸ್ಥೆ ಸರಿಯಾಗಿ ನಡೆಯಬೇಕು. ಭಕ್ತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.

ಬಸವೇಶ್ವರ ಸೇವಾ ಸಮಿತಿ ಎಂ.ಜಿ. ಆದಿಗೊಂಡ ಜಾತ್ರೆಯಲ್ಲಿನ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಬಸವರಾಜ ಹಾರಿವಾಳ, ಸುರೇಶಗೌಡ ಪಾಟೀಲ, ಸಂಗಣ್ಣ ಕಲ್ಲೂರ, ಶೇಖರಗೌಡ ಪಾಟೀಲ, ಶೇಖರ ಗೊಳಸಂಗಿ, ಸಂಕನಗೌಡ ಪಾಟೀಲ, ಪುರಸಭೆ ಮುಖ್ಯಧಿಕಾರಿ ವಿದ್ಯಾಧರ ಕಲಾದಗಿ, ಉತ್ಸವ ಸಮಿತಿ ಪದಾಧಿಕಾರಿಗಳು, ಅಧಿಕಾರಿಗಳು ಇದ್ದರು. ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ರವಿ ರಾಠೋಡ ಸ್ವಾಗತಿಸಿ, ನಿರೂಪಿಸಿದರು. ಸಂಗಮೇಶ ಓಲೇಕಾರ ವಂದಿಸಿದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ