ಕನ್ನಡಪ್ರಭ ವಾರ್ತೆ ರಾಮದುರ್ಗ
ಪಟ್ಟಣದ ವಿದ್ಯಾಚೇತನ ಆವರಣದ ಬಿಆರ್‌ಸಿಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ರಾಮದುರ್ಗ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಣ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ 48 ಸಾವಿರ ಶಿಕ್ಷಕರ ನೇಮಕಾತಿಗೆ ಸರ್ಕಾರ ಕ್ರಮ ಕೈಗೊಳ್ಳವ ಮೂಲಕ ಕನ್ನಡ ಶಾಲೆ ಉಳಿಸುವ ಕಾರ್ಯ ಸರ್ಕಾರ ಮಾಡಲಿ ಎಂದು ಒತ್ತಾಯಿಸಿದರು.ಸಾಹಿತಿ ವೀರಣ್ಣ ಮಡಿವಾಳರ ಗುಣಾತ್ಮಕ ಶಿಕ್ಷಣ ಮತ್ತು ಶಿಕ್ಷಕರು ಎಂಬ ವಿಷಯದ ಕುರಿತು ಮಾತನಾಡಿ, ಶಿಕ್ಷಕರಿಗೆ ಅನ್ಯಕಾರ್ಯಗಳ ಹೊರೆ ಹೆಚ್ಚಾಗಿ ಗುಣಮಟ್ಟದ ಶಿಕ್ಷಣ ನೀಡುವುದು ಗಗನ ಕುಸುಮವಾಗಿದೆ. ಶಾಲೆಯ ಕೆಲಸ ಬಿಟ್ಟು ಬೇರೆ ಕೆಲಸ ಮಾಡದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಕಿ ಭುವನೇಶ್ವರಿ ಅಂಗಡಿ, ಶಾಲೆಗಳಲ್ಲಿ ಕಚೇರಿ ಕಾರ್ಯಕ್ಕೆ ಸಹಾಯಕರ ಹುದ್ದೆಗಳನ್ನು ನೀಡಬೇಕೆಂದು ಹೇಳಿದರು.
ಮಕ್ಕಳು ಮತ್ತು ಕಲಿಕೆ ವಿಷಯದ ಬಗ್ಗೆ ಧಾರವಾಡದ ಸಕ್ಕೂ ರಾಯಣ್ಣವರ ವಿಷಯ ಮಂಡನೆ ಮಾಡಿ, ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಅವರಿಗೆ ಕಲಿಸುವ ಅವಧಿಗಳು ಕಡಿಮೆಯಾಗಿ ಮಕ್ಕಳ ಕಲಿಕೆ ಕುಂಠಿತವಾಗುತ್ತದೆ ಎಂದು ತಿಳಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಗದುಗಿನ ಶಿಲ್ಪಾ ಹಳ್ಳಿಕೇರಿ ಮತ್ತು ಶಿಕ್ಷಣ ಸಂಯೋಜಕ ಶ್ರೀಕಾಂತ ಕರಲಿಂಗಪ್ಪನವರ, ಮಕ್ಕಳಿಗೆ ಕಲಿಸುವುದು ಎಷ್ಟು ಮುಖ್ಯವೋ ಹಾಗೆಯೇ ಏನು ಕಲಿಸಬೇಕು, ಎಷ್ಟು ಕಲಿಸಬೇಕು ಮತ್ತು ಹೇಗೆ ಕಲಿಸಬೇಕು ಎಂಬ ಸ್ಪಷ್ಟತೆ ಶಿಕ್ಷಕರಿಗೆ ಇದ್ದರೆ ಕಲಿಕೆ ಚೆನ್ನಾಗಿ ನಡೆಯುತ್ತದೆ ಎಂದರು.
ಪದಾಧಿಕಾರಿಗಳನ್ನು ಆಯ್ಕೆ
ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಮದುರ್ಗ ತಾಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕೆ.ಎನ್.ಯಡ್ರಾವಿ (ಗೌರವಾಧ್ಯಕ್ಷ), ತಿಮ್ಮಣ್ಣ ಬಂಡಿವಡ್ಡರ (ಅಧ್ಯಕ್ಷ), ಎಸ್.ಐ.ಪಾಟೀಲ, ಟಿ.ಜಿ.ಕರದೀನ (ಉಪಾಧ್ಯಕ್ಷರು), ಶ್ರೀನಿವಾಸ ಬಾಣಕಾರ(ಕಾರ್ಯದರ್ಶಿ), ಆರ್.ಎಲ್.ಮೇತ್ರಿ (ಖಜಾಂಚಿ), ಟಿ.ಸಿ.ಹುಗ್ಗಿ, ಎನ್.ಟಿ.ಹಳ್ಳಿಕೇರಿ (ಸಹಕಾರ್ಯದರ್ಶಿ) ಐ.ಎಸ್.ಮುರನಾಳ, ಸಿ.ಎನ್.ಕಲ್ಲೂರ, ಬಿ.ಎಚ್.ಕಾನನ್ನವರ, ಭುವನಾ ಅಂಗಡಿ, ಎಸ್.ಎಸ್.ಚೌಡಕಿ, ಆರ್.ಎಂ.ಮೂಲಿಮನಿ ಸಮತಾ (ಆಡಳಿತ ಮಂಡಳಿ ಸದಸ್ಯರು) ಸಂಚಾಲಕಿಯಾಗಿ ಜನಾಬಾಯಿ ಚವಲಾರ ಅವರು ಆಯ್ಕೆಯಾದರು.