ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ರಾಮಪುರದ ಶ್ರೀದಾನೇಶ್ವರಿ ಸಮುದಾಯ ಭವನದಲ್ಲಿ ಭಾನುವಾರ ಜರುಗಿದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಾಗೂ ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ, ಪಿಯು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಲಾಠಿ, ಬೆದರಿಕೆಗೆ ನಾವು ಜಗ್ಗಲ್ಲ. ರಕ್ತ ಹರಿಸಿಯಾದರೂ ಈ ಬಾರಿ ರಾಜ್ಯದ ೨ಎ ಮೀಸಲಾತಿ ಪಡದೇ ತೀರುತ್ತೇವೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಬೇಡಿಕೆಗೆ ಸರ್ಕಾರ ಸ್ಪಂದಿಸಲೇಬೇಕು. ಈಗಾಗಲೇ ಜಾತಿಗಣತಿಯಲ್ಲಿ ಕಡ್ಡಾಯವಾಗಿ ಪಂಚಮಸಾಲಿ ಎಂದೇ ಜಾತಿ ಕಾಲಂನಲ್ಲಿ ಬರೆಸಬೇಕೆಂದು ಸಮುದಾಯ ಬಾಂಧವರಿಗೆ ಮಾಹಿತಿ ನೀಡಿದರು.
ಗಳಿಸಿದ ಸಂಪತ್ತನ್ನು ಬಡಪ್ರತಿಭಾವಂತರಿಗೆ ದಾನ ಮಾಡಿದ್ದಲ್ಲಿ ಶ್ರೇಷ್ಠ ದಾನವಾಗಿದೆ. ಈ ದಾನ ಪ್ರತಿರೂಪವಾಗಿ ಮತ್ತೊಬ್ಬರಿಗೆ ದೊರಕುವುದು. ಪ್ರಸಕ್ತ ಉಪಯೋಗ ಪಡೆದಿರುವ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಇಂತಹ ದಾನ ನಿರಂತರವಾಗಿ ಮುನ್ನಡೆದಲ್ಲಿ ಬಡತನ ಹಾಗೂ ಸಮಸ್ಯೆಗಳ ನಿವಾರಣೆಗೆ ಕಡಿವಾಣದೊಂದಿಗೆ ನೈಜ ಪ್ರತಿಭೆಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಉತ್ತಮ ದೇಶ ನಿರ್ಮಿಸಲು ಸಾಧ್ಯವೆಂದರು.ದೇವ, ಋಷಿ, ಪಿತೃ, ಮನುಷ್ಯ ಹಾಗೂ ಭೂತ ಋಣ ತೀರಿಸುವದು ಧಾರ್ಮಿಕ ಕರ್ತವ್ಯ ಇವುಗಳ ಪಾಲನೆ ಪ್ರತಿಯೊಬ್ಬರದ್ದಾಗಬೇಕು. ಪಂಚಮಸಾಲಿ ಕಾನೂನು ಸಮಿತಿ ರಚನೆಯಾಗಿದ್ದು, ಇದೀಗ ವ್ಯಾಪಾರಸ್ಥರ ಸಂಘವೂ ಸಹಿತ ತಾಲೂಕಾಧ್ಯಕ್ಷ ಶ್ರೀಶೈಲ ದಲಾಲ ನೇತೃತ್ವದಲ್ಲಿ ಜಾರಿಯಾಗಿದ್ದು, ವ್ಯವಸಾಯದ ಜೊತೆಗೆ ವ್ಯವಹಾರವೂ ಸಮಾಜದಿಂದ ಉತ್ತೇಜನ ದೊರಕಬೇಕೆಂದು ಶ್ರೀಗಳು ತಿಳಿಸಿದರು.
ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ಆರ್ಥಿಕ ಸಮಸ್ಯೆಯಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಮಕ್ಕಳನ್ನು ದತ್ತು ಪಡೆಯುವ ಮೂಲಕ ಅವರ ಹೆಚ್ಚಿನ ವ್ಯಾಸಾಂಗಕ್ಕೆ ಸಹಕರಿಸುವುದಾಗಿ ತಿಳಿಸಿದರು.
ಸಮುದಾಯ ಭವನ ನಿರ್ಮಾಣ: ರಬಕವಿ-ಬನಹಟ್ಟಿ ತಾಲೂಕಾ ಪಂಚಮಸಾಲಿ ಸಮುದಾಯ ಭವನಕ್ಕೆ ಸಭೆ ಕಾರಣವಾಯಿತು. ಕೋಟ್ಯಾಂತರ ರೂ.ಗಳ ವೆಚ್ಚದಲ್ಲಿ ಮಾದರಿ ಸಮುದಾಯ ಭವನ ನಿರ್ಮಾಣಕ್ಕೆ ಸಭೆ ತೀರ್ಮಾನಿಸಿತು.