ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಸ್ವತಂತ್ರ್ಯೋತ್ಸವ ಆಚರಣೆಯ ಪೂರ್ವಭಾವಿ ಸಭೆಯ ಆದ್ಯಕ್ಷತೆ ವಹಿಸಿ ಮಾತನಾಡಿದರು. ವಿವಿಧ ಇಲಾಖಾ ಅಧಿಕಾರಿಗಳಿಗೆ ನೀಡಿರುವ ಜವಾಬ್ದಾರಿಗಳನ್ನು ಚಾಚೂ ತಪ್ಪದೇ ನಿರ್ವಹಿಸುವಂತೆ ತಿಳಿಸಿ, ಅಧಿಕಾರಿಗಳು ಮತ್ತು ವಿವಿಧ ಸಂಘಸಂಸ್ಥೆಗಳ ಸಹಕಾರವನ್ನು ಕೋರಿದರು. ಆಗಸ್ಟ್ 15ರ ಶುಕ್ರವಾರ ಬೆಳಗ್ಗೆ ಎಂಟು ಗಂಟೆಗೆ ಗಣ್ಯ ವ್ಯಕ್ತಿಗಳ ಭಾವಚಿತ್ರಗಳು, ವಿವಿಧ ಇಲಾಖೆಗಳ ೫ ಸ್ತಬ್ಧ ಚಿತ್ರಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಒಳಗೊಂಡ ಪಥ ಸಂಚಲನ ಚೆನ್ನಾಂಬಿಕ ವೃತ್ತದಿಂದ ಹೊರಟು ಮುಖ್ಯ ರಸ್ತೆಗಳಲ್ಲಿ ನಡೆಸುವ ಮೂಲಕ ಬಯಲು ರಂಗಮಂದಿರಕ್ಕೆ ಆಗಮಿಸುವುದು. ಒಂಬತ್ತು ಗಂಟೆಗೆ ಮಾನ್ಯ ಶಾಸಕರ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ಮಾಡಲು ನಿರ್ಣಯಿಸಲಾಯಿತು. ಧ್ವಜಾರೋಹಣಕ್ಕೆ ಸಂಬಧಿಸಿದಂತೆ ಮೆರವಣಿಗೆ, ಬ್ಯಾಂಡ್ ಸೆಟ್, ಬಂದೋಬಸ್ತ್, ಸ್ವಚ್ಛತೆ, ವೇದಿಕೆ ಕಾರ್ಯಕ್ರಮ, ಮುಖ್ಯ ಭಾಷಣಕಾರ ಮಾಹಿತಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಐದು ಜನರನ್ನು ಗೌರವಿಸುವ ಬಗ್ಗೆ ಚರ್ಚಿಸಲಾಯಿತು. ಸರ್ಕಾರಿ ಕಟ್ಟಡಗಳಿಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲು ಸರ್ಕಾರಿ ಅಧಿಕಾರಿಗಳಿಗೆ ಸೂಚಿಸಲಾಯಿತು. ಪಟ್ಟಣದ ಸೋಷಿಯಲ್ ಕ್ಲಬ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾಗುವ ವಿದ್ಯಾರ್ಥಿಗಳು, ಅಧಿಕಾರಿಗಳು, ನೌಕರರು ಹಾಗೂ ಸಾರ್ವಜನಿಕರಿಗೆ ಬೆಳಗ್ಗೆ ೮ ಗಂಟೆಯಿಂದ ೧೦.೩೦ರ ತನಕ ಉಪಹಾರದ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.
ಇಒ ಮುನಿರಾಜು, ಪ್ರಾಂಶುಪಾಲ ದೇವರಾಜು, ನಿ.ಪಾಂಶುಪಾಲ ಪುಟ್ಟಸೋಮಪ್ಪ, ಉಪ ತಹಸೀಲ್ದಾರ್ ರೂಪೇಶ್, ಉಪ ನೊಂಧಣಾಧಿಕಾರಿ ರಾಕೇಶ್, ಮೀನುಗಾರಿಕೆ ಇಲಾಖೆಯ ಅಧಿಕಾರಿ ಸುಮಾ, ಟಿಎಚ್‌ಒ ರಾಜೇಶ್, ವಲಯ ಅರಣ್ಯಾಧಿಕಾರಿ ಶೃತಿ, ಕಂದಾಯ ಇಲಾಖೆಯ ಉದಯಕುಮಾರ್, ಲಕ್ಷ್ಮೀ, ಪ್ರಸಾದ್ ಹಾಗೂ ರೋಷನ್, ಸೋಷಿಯಲ್ ಕ್ಲಬಿನ ಶಂಕರನಾರಾಯಣ ಐತಾಳ್, ಇತರರು ಇದ್ದರು.ದೇವೇಗೌಡರ ಹೆಸರಿನ ಸಭಾಂಗಣಕ್ಕೆ ಕಾಂಗ್ರೆಸಿಗರ ಆಕ್ಷೇಪ, ಖಂಡನೆ: