ದೇಶದ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳ ಸಿದ್ಧಪಡಿಸಿ: ಸುರೇಶಗೌಡ ಪಾಟೀಲ

KannadaprabhaNewsNetwork |  
Published : Jun 17, 2025, 11:46 PM IST
ಸಮಾರಂಭವನ್ನು ಬಿಇಎಸ್ ಕಾಲೇಜು ಅಧ್ಯಕ್ಷ ಹಾಗೂ ಮಾಜಿ ಶಾಸಕ ಸುರೇಶಗೌಡ ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ಅವಕಾಶಗಳನ್ನು ನಾವೇ ಹುಡುಕಿಕೊಂಡು ಭವಿಷ್ಯದಲ್ಲಿ ಗುರಿ ಸಾಧಿಸಬೇಕಾಗಿದ್ದು, ಕಾಲೇಜು ಹಂತದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಸಿದ್ಧತೆ ಮಾಡಿಕೊಳ್ಳಬೇಕು.

ಬ್ಯಾಡಗಿ: ದೇಶದ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಕೆಲಸ ಪದವಿ ಕಾಲೇಜುಗಳಿಂದ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಯುವಕರೂ ಅನಗತ್ಯವಾಗಿ ಸಮಯ ವ್ಯರ್ಥ ಮಾಡದೇ ಭವಿಷ್ಯ ರೂಪಿಸಿಕೊಳ್ಳಲು ಕಠಿಣ ಪರಿಶ್ರಮಪಡುವಂತೆ ಬಿಇಎಸ್ ಕಾಲೇಜು ಅಧ್ಯಕ್ಷ ಹಾಗೂ ಮಾಜಿ ಶಾಸಕ ಸುರೇಶಗೌಡ ಪಾಟೀಲ ಮನವಿ ಮಾಡಿದರು.

ಪಟ್ಟಣದ ಬಿಇಎಸ್ ಪದವಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಪಠ್ಯೇತರ ಚಟುವಟಿಕೆಗಳ ಮುಕ್ತಾಯ ಸಮಾರಂಭ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ನಿರಂತರ ಅಧ್ಯಯನಗಳತ್ತ ಗಮನ ನೀಡಿದಲ್ಲಿ ಸಾಧನೆಗೆ ಪೂರಕವಾಗಲಿದ್ದು, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಂಡು ಉನ್ನತ ಶ್ರೇಣಿ ಪಡೆಯುವ ಮೂಲಕ ದೇಶದ ಹೊರೆಯನ್ನು ಇಳಿಸುವಂತೆ ಸಲಹೆ ನೀಡಿದರು.

ಎಲ್ಲರೂ ಪ್ರತಿಭಾವಂತರೆ: ಹಾವೇರಿ ವಿವಿ ಕುಲಸಚಿವ ಎಸ್.ಡಿ. ಬಾಗಲಕೋಟಿ ಮಾತನಾಡಿ, ಎಲ್ಲರಲ್ಲಿಯೂ ಪ್ರತಿಭೆಗಳಿದ್ದು, ಸಕಾಲಕ್ಕೆ ಸೂಕ್ತ ಮಾರ್ಗದರ್ಶನ ಕೊರತೆಯಿಂದ ಹಿನ್ನೆಡೆಯಾಗಬಹುದು. ಅಷ್ಟಕ್ಕೂ ಅವಕಾಶಗಳನ್ನು ನಾವೇ ಹುಡುಕಿಕೊಂಡು ಭವಿಷ್ಯದಲ್ಲಿ ಗುರಿ ಸಾಧಿಸಬೇಕಾಗಿದ್ದು, ಕಾಲೇಜು ಹಂತದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಸ್.ಜಿ. ವೈದ್ಯ ಮಾತನಾಡಿದರು. ಉಪನ್ಯಾಸಕರಾದ ಡಾ. ಎನ್.ಎಸ್. ಪ್ರಶಾಂತ, ಡಾ. ಪ್ರಭು ದೊಡ್ಮನಿ, ಡಾ. ಸುರೇಶಕುಮಾರ ಪಾಂಗಿ, ಡಾ. ಎ.ಎಸ್. ರಶ್ಮಿ, ಶಿವನಗೌಡ ಪಾಟೀಲ, ಜ್ಯೋತಿ ಹಿರೇಮಠ, ನಿವೇದಿತ ವಾಲಿಶೆಟ್ಟರ, ವಾಣಿಶ್ರೀ ಬಂಕೊಳ್ಳಿ, ಕಿರಣ ಡಂಬರಮತ್ತೂರ, ನಿಂಗಪ್ಪ ಕುಡುಪಲಿ, ಪ್ರವೀಣ ಬಿದರಿ, ಅಂಬಿಕಾ ನವಲೆ, ಸಿ.ಬಿ. ಗೂರಣ್ಣವನರ, ಕುಮಾರ ಮಾಳಗಿ, ಮಲ್ಲೇಶ ಮುಧೋಳಕರ, ಶಶಿಧರ ಮಾಗೋಡ, ಸಿಬ್ಬಂದಿಗಳಾದ ಸಂತೋಷ ಉದ್ಯೋಗಣ್ಣನವರ, ಮಲ್ಲಿಕಾರ್ಜುನ ಕೋಡಿಹಳ್ಳಿ, ಬಸಮ್ಮ ಸೇರಿದಂತೆ ಇತರರಿದ್ದರು.ಸವಾಲುಗಳ ಮೆಟ್ಟಿ ನಿಂತಾಗ ಉತ್ತಮ ಭವಿಷ್ಯ

ಹಿರೇಕೆರೂರು: ಸ್ಪರ್ಧಾತ್ಮಕ ಜಗತ್ತಿನಲ್ಲಿ ಸವಾಲುಗಳನ್ನು ಸ್ವೀಕರಿಸಿ ಮುನ್ನಡೆದಾಗಲೇ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಹಾವೇರಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಡಾ. ರೇಣುಕಾ ಮೇಟಿ ತಿಳಿಸಿದರು.ಹಿರೇಕೆರೂರಿನ ಬಿ.ಆರ್. ತಂಬಾಕದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ವಿದ್ಯಾರ್ಜನೆ ಮಾಡಬೇಕು. ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಬಿ. ತಿಪ್ಪಣ್ಣನವರ ಅವರು, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಶಿಸ್ತಿಗೆ ಬದುಕನ್ನು ಬದಲಾಯಿಸುವ ಶಕ್ತಿ ಇದೆ ಎಂದರು.ಕಾಲೇಜು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಜೆ.ಬಿ. ತಂಬಾಕದ, ವಿನಿತಾ ತಂಬಾಕದ, ಏಕೆಶಣ್ಣ ಬಣಕಾರ, ಪ್ರಾಂಶುಪಾಲರಾದ ಡಾ. ಎಸ್.ಬಿ. ಚನ್ನಗೌಡ್ರ ಮಾತನಾಡಿದರು. ಹಿರಿಯ ಉಪನ್ಯಾಸಕರಾದ ಸಿ.ಆರ್‌. ದೂದಿಹಳ್ಳಿ, ಪಿ.ಎಂ. ವಿಜಯಕುಮಾರ, ಆರ್‌.ಎಫ್‌. ದೊಡ್ಡಮನಿ, ಲಿಂಗರಾಜ ಹಲವಾಲದ, ವಿರುಪಾಕ್ಷಪ್ಪ ಎಸ್.ಕೆ., ಸತೀಶ ಲಮಾಣಿ, ಕೆ.ಟಿ. ಕಾರಗಿ, ಸುನಿತಾ ಡಿ., ಚೇತನಾ ನರೆಗೌಡ್ರ, ಶಶಿಕುಮಾರ ಕಡೂರ, ಪ್ರವೀಣ ಅಂಗಡಿ, ಪ್ರವೀಣ ಕೂರಗೆರ, ಕಿರಣ ಬಾಗಲರ, ಪ್ರಶಾಂತ ಎಂ. ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ