ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ವತಿಯಿಂದ ಪದವಿ ನಂತರ ಮುಂದೇನು? ಎಂಬ ನಾಗರಿಕ ಸೇವಾ ಪರೀಕ್ಷೆಗಳನ್ನು ಕುರಿತಂತೆ ಆಯೋಜಿಸಿದ್ದ ವಿಶೇಷ ಉಪನ್ಯಾಸ ಮತ್ತು ಸಂವಾದದಲ್ಲಿ ಮಾತನಾಡಿದರು.
ದೇಹ ರಚನೆಯಲ್ಲಿ ಮಾತ್ರ ಹೆಣ್ಣು ಮತ್ತು ಗಂಡು ಎನ್ನುವ ಭಿನ್ನತೆ ಇದೆ. ಆದರೆ, ನಮ್ಮ ದೇಹದಲ್ಲಿರುವ ಆತ್ಮಕ್ಕೆ ಲಿಂಗವಿಲ್ಲ. ಜಾತಿ ಮತ್ತು ಧರ್ಮವಿಲ್ಲ. ಆತ್ಮ ಎನ್ನುವುದು ನಮ್ಮೊಳಗಿನ ಚೈತನ್ಯ. ನಮ್ಮ ಅಂತಃಸತ್ವವನ್ನು ವಿಕಸನಗೊಳಿಸಿಕೊಳ್ಳುವ ಮೂಲಕ ನಾವು ಸಾಧಕರಾಗಬೇಕು ಎಂದು ಕರೆ ನೀಡಿದರು.ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕಿನಲ್ಲಿ 15 ರಿಂದ 25 ವಯೋಮಾನ ಕಲಿಯಲು ಪ್ರಶಸ್ತವಾದದ್ದು. ಈ ವಯೋಮಾನದಲ್ಲಿ ನಾವು ನಮ್ಮ ಕಲಿಕಾ ಚೈತನ್ಯವನ್ನು ಕ್ರಿಯಾಶೀಲಗೊಳಿಸಿಕೊಳ್ಳಬೇಕು. ವಿದ್ಯಾರ್ಥಿಗಳು ನಿತ್ಯ 6 ಗಂಟೆಗಳ ಕಾಲವನ್ನು ತಮ್ಮ ಕಲಿಕಾ ಅಧ್ಯಯನಕ್ಕೆ ಮೀಸಲಿಟ್ಟರೆ ಸಾಕು, ಅವರು ಜಗತ್ತಿನ ಜ್ಞಾನ ಭಂಡಾರಗಳಾಗಿ ರೂಪುಗೊಳ್ಳುತ್ತಾರೆ. ಇದಕ್ಕಾಗಿ ಕಲಿಕಾ ಟೈಮ್ ಟೇಬಲ್ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜ್ಞಾನ ಗಳಿಕೆ ಜೊತೆಗೆ ಅಕ್ಷರ ದೋಷಗಳಿಲ್ಲದ ವಾಕ್ಯ ರಚನೆ ಮತ್ತು ಶುದ್ಧ ಬರವಣಿಗೆಗೆ ಹೆಚ್ಚು ಒತ್ತು ನೀಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಬರವಣಿಗೆ ಅತಿಮುಖ್ಯ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡಬೇಕಾದರೆ ಇತಿಹಾಸ, ಅರ್ಥಶಾಸ್ತ್ರ, ಸಾಂವಿಧಾನಿಕ ತಿಳಿವಳಿಕೆ, ಭೂಗೋಳ, ಬೇಸಿಕ್ ಸೈನ್ಸ್ ಮತ್ತು ಟೆಕ್ನಾಲಜಿಗಳ ಗ್ರಹಿಕೆಗೆ ಹೆಚ್ಚು ಆಧ್ಯತೆ ನೀಡಬೇಕು ಎಂದು ತಿಳಿಸಿದರು.