ದಾಬಸ್‍ಪೇಟೆ: 2025-26ನೇ ಸಾಲಿನ ಸಾಲಿನ ಅತ್ಯುತ್ತಮ ಸರ್ಕಾರಿ ಕನ್ನಡ ಮಾಧ್ಯಮಿಕ ಹಿರಿಯ ಪ್ರಾಥಮಿಕ ಶಾಲಾ ಪ್ರಶಸ್ತಿಗೆ ನೆಲಮಂಗಲ ತಾಲೂಕು ವೀರರಾಘವನಪಾಳ್ಯ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಭಾಜನವಾದರೆ, ಇದೇ ಶಾಲೆಯ ಮುಖ್ಯ ಶಿಕ್ಷಕ ಹೊನ್ನಹನುಮಯ್ಯ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿ ಪ್ರಶಸ್ತಿ ಸ್ವೀಕರಿಸಿದ್ದಾರೆ.
12 ವರ್ಷದ ಶ್ರಮ:
ಮುಖ್ಯಶಿಕ್ಷಕ ಹೊನ್ನಹನುಮಯ್ಯ ಶಿಕ್ಷಕ ವೃತ್ತಿಯಲ್ಲಿ 35 ವರ್ಷ ಸೇವೆ ಸಲ್ಲಿಸಿದ್ದಾರೆ. ವೀರರಾಘವನಪಾಳ್ಯ ಸರ್ಕಾರಿ ಶಾಲೆಯಲ್ಲಿ ಸತತ 12 ವರ್ಷ ಶಿಕ್ಷಕರಾಗಿ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇವರ ಪರಿಶ್ರಮ ಎಸ್‍ಡಿಎಂಸಿ, ಗ್ರಾಮದ ಜನರ ಬೆಂಬಲ, ಶಿಕ್ಷಣ ಇಲಾಖೆ ಸಹೋದ್ಯೋಗಿಗಳ ಸಹಕಾರ, ದಾನಿಗಳ ಕೊಡುಗೆಗಳ ಫಲ ಪ್ರಶಸ್ತಿಗೆ ದಾರಿ ಮಾಡಿದೆ. ಸಿಎಸ್‍ಆರ್ ಅನುದಾನ, ದಾನಿಗಳ ಕೊಡುಗೆಗಳಿಂದಾಗಿ 1ರಿಂದ 8 ನೇ ತರಗತಿವರೆಗಿನ ಶಾಲೆಗೆ ಹೈಸ್ಕೂಲ್ ಆರಂಭಿಸುವ ಅವಕಾಶ ಲಭಿಸಿದೆ. ಸರ್ಕಾರದಿಂದ ಆದೇಶ ಬಂದಿದ್ದು ಮುಂದಿನ ಶೈಕ್ಷಣಿಕ ಸಾಲಿನಿಂದ ಹೈಸ್ಕೂಲ್ ಆರಂಭವಾಗಲಿದೆ. ಪ್ರಸ್ತುತ ಎಲ್‍ಕೆಜಿ, ಯುಕೆಜಿ ತರಗತಿಗಳು ಆರಂಭವಾಗಿವೆ. ಆಂಗ್ಲ ಮಾಧ್ಯಮವೂ ಆರಂಭವಾಗಿದ್ದು ಮಕ್ಕಳ ಸಂಖ್ಯೆ 200 ದಾಟಿದೆ.ಶಾಲೆ ಬೆಳೆದು ಬಂದ ದಾರಿ:
ಕೋಟ್..............
-ರಮೇಶ್, ಬಿಇಒ, ನೆಲಮಂಗಲ
ಜಿಲ್ಲಾಮಟ್ಟದ ಪಿಎಂಶ್ರೀ ಪ್ರಶಸ್ತಿ ಪಡೆದಿರುವ ವೀರರಾಘವನ ಪಾಳ್ಯ ಸರ್ಕಾರಿ ಶಾಲೆಗೆ ಪ್ರಸಕ್ತ ಸಾಲಿನ ಅತ್ಯುತ್ತಮ ಶಾಲಾ ಪ್ರಶಸ್ತಿ ದೊರೆತಿರುವುದು ಅತೀವ ಸಂತಸ ತಂದಿದೆ. ಇದಕ್ಕೆ ಶಾಲೆಯ ಸಹದ್ಯೋಗಿ ಶಿಕ್ಷಕರು, ಶಿಕ್ಷಣ ಇಲಾಖೆ ಮಿತ್ರರು, ಎಸ್‍ಡಿಎಂಸಿ, ಗ್ರಾಮದ ಜನತೆ ದಾನಿಗಳ ಕೊಡುಗೆ ಎಲ್ಲವೂ ಕಾರಣವಾಗಿದೆ. ನನಗೆ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿರುವುದು ನನ್ನ ವೃತ್ತಿ ಜೀವನದ ಸಾರ್ಥಕತೆ ಎನಿಸಿದೆ.
ಪೋಟೋ 8: 2025-26ನೇ ಸಾಲಿನ ಸಾಲಿನ ಅತ್ಯುತ್ತಮ ಸರ್ಕಾರಿ ಕನ್ನಡ ಮಾಧ್ಯಮಿಕ ಹಿರಿಯ ಪ್ರಾಥಮಿಕ ಶಾಲಾ ಪ್ರಶಸ್ತಿಗೆ ಆಯ್ಕೆಯಾದ ವೀರರಾಘವನಪಾಳ್ಯ ಶಾಲೆ