ಅಮೆರಿಕದಲ್ಲಿ ಮಂಡ್ಯ ಗಿರೀಶ್‌ರವರ ಕನ್ನಡ ಕೃತಿಗಳ ಲೋಕಾರ್ಪಣೆ

KannadaprabhaNewsNetwork |  
Published : Jun 22, 2026, 01:30 AM IST
೨೧ಕೆಎಂಎನ್‌ಡಿ-೬ಉಪನ್ಯಾಸಕ ಕವಿಮಿತ್ರ ಮಂಡ್ಯ ಗಿರೀಶ್‌ರವರು ಅಮೇರಿಕಾದ ಪೆನ್ಸಿಲ್ವೇನಿಯಾದಲ್ಲಿ ತಮ್ಮ ಕೃತಿಗಳಾದ ಸೊಬಗಲಿ ಕಾವ್ಯಕಾಲ ಕವನ  ಸಂಕಲನ  ಮತ್ತು ಗುಬ್ಬಿ ಹಾಡು ಚುಟುಕು ಸಂಕಲನಗಳನ್ನು ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಮಂಡ್ಯ ಗಿರೀಶ್ ರವರ ಸೊಬಗಲಿ ಕಾವ್ಯ ಕಾಲ ಕವನ ಸಂಕಲನ ರಮ್ಯಭಾವದ ವಸ್ತು ವಿಚಾರವನ್ನು ಒಳಗೊಂಡ ಕವಿತೆಗಳ ಗುಚ್ಛವಾಗಿದ್ದು ಕನ್ನಡ ನವೋದಯ ಪರಂಪರೆಗೆ ಹತ್ತಿರವಾದ ಚಿತ್ತ ವೃತ್ತಿಗಳನ್ನು ತುಂಬಿಕೊಂಡಿದೆ.ಅವರ ಗುಬ್ಬಿ ಹಾಡು ನಾಲ್ಕು ಮತ್ತು ಆರು ಸಾಲುಗಳನ್ನು ಹೊಂದಿರುವ ಪುಟ್ಟ ಪುಟ್ಟ ಕವಿತೆಗಳ ಸಂಕಲನ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರವಾಸ ನಿಮಿತ್ತ ಅಮೆರಿಕಗೆ ತೆರಳಿರುವ ಉಪನ್ಯಾಸಕ ಕವಿಮಿತ್ರ ಮಂಡ್ಯ ಗಿರೀಶ್‌ರವರು ಅಮೆರಿಕಾದ ಪೆನ್ಸಿಲ್ವೇನಿಯ ರಾಜ್ಯದಲ್ಲಿರುವ ತಮ್ಮ ಮಗ ಚಿರಾಗ್ ಹಾಗೂ ಸೊಸೆ ಅನುಷಾ ಅವರ ಮನೆ ಬೆಳಗುವಿನಲ್ಲಿ ತಮ್ಮ ಕೃತಿಗಳಾದ ಸೊಬಗಲಿ ಕಾವ್ಯಕಾಲ ಕವನ ಸಂಕಲನ ಮತ್ತು ಗುಬ್ಬಿ ಹಾಡು ಚುಟುಕು ಸಂಕಲನಗಳನು ತಮ್ಮದೆ ಹಿಮಗಿರಿ ಪ್ರಕಾಶನ ಸಂಸ್ಥೆಯ ವತಿಯಿಂದ ಪ್ರಕಟಿಸಿ ಲೋಕಾರ್ಪಣೆಗೊಳಿಸುವ ಮೂಲಕ ತಮ್ಮ ಅರವತ್ತನೇ ವರ್ಷದ ಜನ್ಮದಿನದ ಸಂಭ್ರಮವನ್ನು ವಿನೂತನವಾಗಿ ಆಚರಿಸಿಕೊಂಡರು.

ಮಂಡ್ಯ ಗಿರೀಶ್ ರವರ ಸೊಬಗಲಿ ಕಾವ್ಯ ಕಾಲ ಕವನ ಸಂಕಲನ ರಮ್ಯಭಾವದ ವಸ್ತು ವಿಚಾರವನ್ನು ಒಳಗೊಂಡ ಕವಿತೆಗಳ ಗುಚ್ಛವಾಗಿದ್ದು ಕನ್ನಡ ನವೋದಯ ಪರಂಪರೆಗೆ ಹತ್ತಿರವಾದ ಚಿತ್ತ ವೃತ್ತಿಗಳನ್ನು ತುಂಬಿಕೊಂಡಿದೆ.ಅವರ ಗುಬ್ಬಿ ಹಾಡು ನಾಲ್ಕು ಮತ್ತು ಆರು ಸಾಲುಗಳನ್ನು ಹೊಂದಿರುವ ಪುಟ್ಟ ಪುಟ್ಟ ಕವಿತೆಗಳ ಸಂಕಲನ. ಇಲ್ಲಿನ ಚುಟುಕುಗಳು ಹಿತ ಮಿತ ಶಬ್ಧಗಳ ಮೂಲಕ ಸಾಮಾಜಿಕ ಬದುಕಿನ ಹಲವು ಹತ್ತು ಸಂಗತಿಗಳನ್ನು ಹಾಸ್ಯ, ವ್ಯಂಗ್ಯಗಳ ಮೂಲಕ ವಿಡಂಬಿಸುತ್ತವೆ.

ಕಾರ್ಯಕ್ರಮದಲ್ಲಿ ಉಮಾ ಗಿರೀಶ್, ಚಿರಾಗ್, ಅನುಷಾ, ಓಹನ್, ಸುಮಾ, ಸುಖಿ, ಮಮತಾ ಚೈತನ್ಯ ಹಾಗೂ ಸ್ಥಳೀಯ ಕನ್ನಡ ನಿವಾಸಿಗಳು ಉಪಸ್ಥಿತರಿದ್ದರು.ಇಂದು ಬೈಲಮಂಗಲ ಚಲೋ ಬೃಹತ್ ಪಾದಯಾತ್ರೆ: ಬಡಗಲಪುರ ನಾಗೇಂದ್ರಮೇಲುಕೋಟೆ:ರಾಜ್ಯ ರೈತ ಸಂಘದಿಂದ ಬಿಡದಿ ಟೌನ್‌ ಶಿಪ್ ಯೋಜನೆಗೆ ಫಲವತ್ತಾದ ಭೂಮಿ ಸ್ವಾಧೀನ ಪಡಿಸಿಕೊಳ್ಳುತ್ತಿರುವುದನ್ನು ಕೈ ಬಿಡುವಂತೆ ಆಗ್ರಹಿಸಿ ಜೂನ್ 22ರಂದು ಬೈಲಮಂಗಲ ಚಲೋ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ. ಮೇಲುಕೋಟೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಿಂದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ರೈತಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಸೇರಿದಂತೆ ಎಲ್ಲಾ ಮುಖಂಡರು ಸೇರಿದಂತೆ ರೈತಸಂಘದ ಎಲ್ಲಾ ಪದಾದಿಕಾರಿಗಳು ಭಾಗವಹಿಸಲಿದ್ದಾರೆ.ಬೆಳಗ್ಗೆ 9ಗಂಟೆಗೆ ರಾಮನಗರದ ಎಪಿಎಂಸಿಯಿಂದ ಬೈಕ್ ಜಾಥಾ ಹೊರಡಲಿದೆ. ಬಿಡದಿಯ ಬಿ.ಜಿ.ಎಸ್ ವೃತ್ತದಿಂದ ಬೈರಮಂಗಲ ಚಲೋ ಆರಂಭವಾಗಲಿದೆ. ಸರ್ಕಾರ ವಾಮ ಮಾರ್ಗದಿಂದ ರೈತರ ಫಲವತ್ತಾದ ಭೂಮಿಯನ್ನು ಪಡೆಯಲು ಮುಂದಾಗಿದೆ. ಇದನ್ನು ತಡೆಗಟ್ಟದಿದ್ದಲ್ಲಿ 26 ಗ್ರಾಮಗಳ ರೈತಕುಟುಂಬಗಳು ಮತ್ತು ಕಾರ್ಮಿಕ ಕುಟುಂಬಗಳು ಬೀದಿಪಾಲಾಗುತ್ತವೆ.ಬೆಂಗಳೂರಿಗೆ ಸರಬರಾಜಾಗುತ್ತಿದ್ದ ತರಕಾರಿ ಹಾಲು, ಮೊಸರು, ಬೆಣ್ಣೆ ಇತರೆ ಉತ್ಪನ್ನಗಳು ನಿಂತು ಹೋಗುತ್ತವೆ. ಅವೈಜ್ಞಾನಿಕವಾದ ಭೂ ಸ್ವಾಧೀನವನ್ನು ತಡೆಯೋಣ ರೈತರನ್ನು ರಕ್ಷಿಸೋಣ ನಮ್ಮೊಡನೆ ಕನ್ನಡಪರ ಸಂಘಟನೆಗಳು, ದಲಿತಪರ ಸಂಘಟನೆಗಳು, ವಿಚಾರವಾದಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ವ ರೋಗಕ್ಕೂ ಯೋಗ ದಿವ್ಯೌಷಧ: ಡಿ.ಎನ್.ಶ್ರೀಪಾದು
ಯೋಗ ಸಂಸ್ಕೃತಿ-ಪರಂಪರೆಯ ಪ್ರತೀಕ: ಕೇಂದ್ರ ಸಚಿವ ಎಚ್‌ಡಿಕೆ