- ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಬೈರಿಮಡ್ಡಿ ಮಾಹಿತಿ
ಕನ್ನಡಪ್ರಭ ವಾರ್ತೆ ಸುರಪುರಬರಗಾಲದ ತೀವ್ರತೆ ಹಿನ್ನಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ಸುರಪುರ ತಾಲೂಕು ಘಟಕದಿಂದ ಈ ಬಾರಿ 22ನೇ ಕರವೇ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಕರವೇ ತಾಲೂಕು ಅಧ್ಯಕ್ಷ ವೆಂಕಟೇಶನಾಯಕ ಬೈರಿಮಡ್ಡಿ ತಿಳಿಸಿದ್ದಾರೆ.
ನಗರದ ಅಪ್ಪಾಜಿ ಕಾಂಪ್ಲೆಕ್ಸ್‌ನ ಕರವೇ ಕಾರ್ಯಾಲಯದಲ್ಲಿ ಸೋಮವಾರ ನಡೆದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷೆತೆ ವಹಿಸಿ ಮಾತನಾಡಿದ ಅವರು, ನ.5ರಂದು ರಂಗಂಪೇಟೆ ದೊಡ್ಡ ಬಜಾರ್ ಮಾರ್ಕೆಟ್ ಆವರಣದಲ್ಲಿ ಕರವೇ ರಾಜ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.ವಿವಿಧ ಕ್ಷೇತ್ರಗಳಲ್ಲಿ ಸಾಧನಗೈದ ಸಾಧಕರಿಗೆ ಕುವೆಂಪು ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬರಗಾಲದ ಹಿನ್ನೆಲೆ ಅದ್ಧೂರಿ ಆಚರಣೆ ಹಾಗೂ ಶೋಭಾಯಾತ್ರೆ ಕೈಬಿಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಪದಾಧಿಕಾರಿಗಳಾದ ನಾಗೇಂದ್ರ ದೊರೆ ಚಂದಲಾಪುರ, ಹಣಮಂತಗೌಡ ಶಖಾಪುರ, ಶ್ರೀನಿವಾಸ ಲಕ್ಷ್ಮೀಪುರ, ರಂಗನಾಥ ನಾಯಕ ಲಕ್ಷ್ಮೀಪುರ, ಮಲ್ಲು ವಿಷ್ಣುಸೇನೆ, ಲಕ್ಷ್ಮಣ ಬೋವಿಗಲ್ಲಿ, ಹಣಮಂತ ಹಾಲಗೇರಿ, ಮಲ್ಲು ಬೇವಿನಾಳ, ವಿನೋದನಾಯಕ, ಕಾರ್ಮಿಕ ಘಟಕದ ನಿಂಗಣ್ಣ ಮಾಲಗತ್ತಿ, ಕೆಂಭಾವಿ ವಲಯದ ಅಧ್ಯಕ್ಷ ಕುಮಾರ ಮೋಪಗಾರ, ಗ್ರಾಮ ಶಾಖೆಯ ಪದಾಧಿಕಾರಿಗಳಾದ ಭಾಷಾ ಪರಸನಳ್ಳಿ, ಆನಂದ ರತ್ತಾಳ, ಚಂದ್ರು ಚಂದಲಾಪುರ, ಪ್ರಭು ಮಂಗಿಹಾಳ, ಆಂಜನೇಯ ಅಡ್ಡೊಡಗಿ, ಮರೆಪ್ಪ ಅಡ್ಡೊಡಗಿ, ಮಲ್ಲಣ್ಣ ಹಸನಾಪುರ, ಭಾಗಣ್ಣ ಗುಡ್ಡಕಾಯಿ, ಶ್ರೀಶೈಲ್ ರತ್ತಾಳ, ದೇವು ರತ್ತಾಳ, ಭೀಮು ಜಾಲಿಬೆಂಜಿ, ಹಬೀಬ ರಂಗಂಪೇಟೆ ಯಮನಪ್ಪ ಗದ್ವಾಲ, ರಾಮನಗೌಡ, ಮಹಾರಾಜ, ಬಲಭೀಮ ಬೊಮ್ಮನಹಳ್ಳಿ, ನಿಂಗಣ್ಣ ಪರಸನಳ್ಳಿ, ರಾಮುಲು ಬೇವಿನಾಳ, ರಘವೀರ ದೇಸಾಯಿ ಸೂಗೂರು, ಅಂಬ್ರೇಶ ದೇವಿಕೇರಿ, ಪರಶುರಾಮ ಮಲ್ಲಾ, ಬಸವಾಜ ಮಲ್ಲಾ, ರಾಮಯ್ಯ ಅಜ್ಜಕೊಲ್ಲಿ, ಷಣ್ಮಖ ಅಡ್ಡೊಡಗಿ, ಭೀಮಣ್ಣ ಬಾದ್ಯಾಪುರ, ತಿಪ್ಪಣ್ಣ ಬಾದ್ಯಾಪುರ, ಮಲ್ಲಿಕಾರ್ಜುನ ಬಾದ್ಯಾಪುರ ಇದ್ದರು.
5ವೈಡಿಆರ್7 : ಸುರಪುರ ಕರವೇ ಕಾರ್ಯಾಲಯದಲ್ಲಿ ನಡೆದ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ತಾಲೂಕು ಅಧ್ಯಕ್ಷ ವೆಂಕಟೇಶನಾಯಕ ಬೈರಿಮಡ್ಡಿ ಅವರು ಮಾತನಾಡಿದರು.