;Resize=(412,232))
ಬೆಂಗಳೂರು : ನಕಲಿ ಔಷಧ ದಂಧೆ ಪ್ರಕರಣದಲ್ಲಿ ಬಂಧಿತ ಆರೋಪಿ ಪ್ರಶಾಂತ್ ಫೈಜರ್ ಕಂಪನಿ ಔಷಧದ ಒರಿಜನಲ್ ಲೇಬಲ್ ತರಲು ವರ್ಷಕ್ಕೆ ಹತ್ತಾರು ಬಾರಿ ಟರ್ಕಿ ದೇಶಕ್ಕೆ ಹೋಗುತ್ತಿದ್ದ ಅಂಶ ವಿಚಾರಣೆ ವೇಳೆ ಬಯಲಾಗಿದೆ.
ಪ್ರಕರಣದ ಕಿಂಗ್‌ಪಿನ್ ಕೂಡ ಆಗಿರುವ ಪ್ರಶಾಂತ್‌ನನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ತೀವ್ರ ವಿಚಾರಣೆಗೆ ಒಳಪಡಿಸಿದ ವೇಳೆ ಈ ಕಳ್ಳಾಟ ಗೊತ್ತಾಗಿದೆ. ಈ ರೀತಿ ಟರ್ಕಿಯಿಂದ ತಂದ ಅಸಲಿ ಲೇಬಲ್‌ಗಳನ್ನು ಬಳಸಿ ನಕಲಿ ಔಷಧಿಗಳನ್ನು ಮಾರಾಟ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ.
ಈ ರೀತಿ ವಿದೇಶದಿಂದ ಅಸಲಿ ಲೇಬಲ್ ತಂದು ನಕಲಿ ಔಷಧಿ ಬಾಟಲ್‌ಗಳಿಗೆ ಅಂಟಿಸಿ ಒರಿಜಿನಲ್ ಔಷಧಿಗಳ ಜತೆ ಇಟ್ಟು ಸರಬರಾಜು ಮಾಡಿ ಕೋಟ್ಯಂತರ ರು. ಸಂಪಾದಿಸುತ್ತಿದ್ದ ಎಂಬುದು ತನಿಖೆ ವೇಳೆ ಬಯಲಾಗಿದೆ.
ನಕಲಿ ಔಷಧಿ ದಂಧೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್‌ನನ್ನು ಎಸ್‌ಐಟಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬಾಲಸುಬ್ರಮಣಿಯನ್, ಪ್ರಶಾಂತ್‌ನ ಡಮ್ಮಿ(ನಕಲಿ) ಕಂಪನಿಗೆ ಮಾಲೀಕನಾಗಿದ್ದ.
- ಇತ್ತೀಚೆಗೆ ಬಿಡದಿ ಸೇರಿ ಹಲವೆಡೆ ಆರೋಗ್ಯ ಇಲಾಖೆ ಅಧಿಕಾರಿಗಳ ದಾಳಿ
- ಈ ವೇಳೆ ಬಹುರಾಷ್ಟ್ರೀಯ ಫೈಜರ್ ಸೇರಿ ಹಲವು ನಕಲಿ ಔಷಧಿಗಳು ಪತ್ತೆ
- ಪ್ರಕರಣ ಸಂಬಂಧ ಕಿಂಗ್‌ಪಿನ್ ಪ್ರಶಾಂತ್ ಇತ್ತೀಚೆಗೆ ಬಂಧನಕ್ಕೊಳಗಾಗಿದ್ದ
- ತನಿಖೆ ವೇಳೆ ಫೈಜರ್‌ನ ಅಸಲಿ ಲೇಬಲ್ ತರಲು ಟರ್ಕಿ ಭೇಟಿ ಬಗ್ಗೆ ಮಾಹಿತಿ
- ಇಂಥ ಯತ್ನದ ವೇಳೆ ಸಿಕ್ಕಿಬಿದ್ದ ಬಳಿಕ ಟರ್ಕಿ ಸರ್ಕಾರದಿಂದ ವೀಸಾ ರದ್ದು
- ಹೀಗಾಗಿ ಅಜರ್‌ಬೈಜಾನ್‌ಗೆ ತೆರಳಿ ಅಲ್ಲಿಗೆ ಟರ್ಕಿ ಲೇಬಲ್ ತರಿಸಿಕೊಳ್ಳುತ್ತಿದ್ದ