ಕನ್ನಡಪ್ರಭ ವಾರ್ತೆ ಕುಶಾಲನಗರ ನದಿ ಮೂಲ ಹಾಗೂ ಜಲಮೂಲಗಳು ಯಾವುದೇ ರೀತಿಯಲ್ಲಿ ಕಲುಷಿತ ಗೊಳ್ಳದಂತೆ ಸಂರಕ್ಷಣೆ, ಜಾಗೃತಿ ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕುಶಾಲನಗರ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎನ್ ಟಿ ನಾರಾಯಣ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಶಾಲನಗರ ಕಾವೇರಿ ಆರತಿ ಕ್ಷೇತ್ರದಲ್ಲಿ ನಮಾಮಿ ಕಾವೇರಿ ಆಶ್ರಯದಲ್ಲಿ ನಡೆದ 174ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ನದಿ ಹಾಗೂ ಪರಿಸರ ಸಂರಕ್ಷಣೆಯ ಸಂಬಂಧ ಲಯನ್ಸ್ ಕ್ಲಬ್ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರಿಗೆ ಅರಿವು ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದಾಗಿ ಅವರು ತಿಳಿಸಿದರು.ಕಾವೇರಿ ಮಹಾ ಆರತಿ ಬಳಗದ ಮೂಲಕ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ನದಿ ಪರಿಸರ ಸಂರಕ್ಷಣೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಗುರುಪೂರ್ಣಿಮೆಯ ಅಂಗವಾಗಿ ನಡೆದ ಆರತಿ ಕಾರ್ಯಕ್ರಮದಲ್ಲಿ ಅರ್ಚಕರಾದ ಆದಿತ್ಯ ಭಟ್ ಅವರು ಕುಂಕುಮಾರ್ಚನೆ ಅಷ್ಟೋತ್ತರ ನಂತರ ನದಿಗೆ ಆರತಿ ಬೆಳಗಿದರು. ಈ ಸಂದರ್ಭ ಕುಶಾಲನಗರ ಲಯನ್ಸ್ ಕ್ಲಬ್ ಕಾರ್ಯದರ್ಶಿ ಎಂ ಜಿ ಕಿರಣ್, ಉಪಾಧ್ಯಕ್ಷರಾದ ಕೆಎನ್ ಪವನ್ ಕುಮಾರ್, ನಿತಿನ್ ಗುಪ್ತ, ಮಾಜಿ ಅಧ್ಯಕ್ಷರಾದ ಕೊಡಗನ ಹರ್ಷ, ಕೆ ಎಸ್ ಸತೀಶ್ ಕುಮಾರ್, ಟಿ ಕೆ ರಾಜಶೇಖರ್, ವಿ ಎಸ್ ಸುಮನ್ ಬಾಲಚಂದ್ರ, ಎಂ ಎಸ್ ಚಿಣ್ಣಪ್ಪ, ಡಾ ಪ್ರವೀಣ್ ದೇವರಗುಂಡ, ನಮಾಮಿ ಕಾವೇರಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಮಂಡೆಪಂಡ ಬೋಸ್ ಮೊಣ್ಣಪ್ಪ, ಧರಣಿ ಸೋಮಯ್ಯ ಬಳಬಂಡ ಪೊನ್ನು ಮತ್ತು ಆರತಿ ಬಳಗ ಹಾಗೂ ಲಯನ್ಸ್ ಕ್ಲಬ್ ಸದಸ್ಯರು ಇದ್ದರು.ಹುಣ್ಣಿಮೆ ಅಂಗವಾಗಿ ಕುಶಾಲನಗರ ಕೊಪ್ಪ ಗಡಿಭಾಗದ ಕಾವೇರಿ ಪ್ರತಿಮೆಗೆ ಅಭಿಷೇಕ ಕಾರ್ಯಕ್ರಮ ಜರುಗಿತು. ರವಿಚಂದ್ರನ್ ಕನ್ನಡ ಸಂಘದ ಬಬಿಂದ್ರ ಪ್ರಸಾದ್, ರವೀಂದ್ರ ಪ್ರಸಾದ್ ಮತ್ತಿತರರು ಇದ್ದರು.