ಕನ್ನಡಪ್ರಭ ವಾರ್ತೆ ಬಾದಾಮಿ
ಜಿಲ್ಲೆಯ ಬಾದಾಮಿ ತಾಲೂಕಿನ ಪಟ್ಟದಕಲ್ಲು ದೇವಾಲಯಗಳ ಸಮುಚ್ಛಯದಲ್ಲಿ ಭಾರತೀಯ ಪುರಾತತ್ವ ಇಲಾಖೆ ಆಯೋಜಿಸಿದ್ದ ವಿಶ್ವ ಪರಂಪರೆ ದಿನಾಚರಣೆಯಲ್ಲಿ ಮಾತನಾಡಿ, ಚಾಲುಕ್ಯರು ತಮ್ಮ ಆಡಳಿತಾವಧಿಯಲ್ಲಿ ನಾಗರ, ದ್ರಾವಿಡ, ವೇಸರ ಶಿಖರಗಳ ದೇವಾಲಯಗಳನ್ನು ನಿರ್ಮಿಸಿದರು. ಇವುಗಳು ಒಂದೇ ಸಮೂಹದಲ್ಲಿ ಕಾಣಸಿಗುವುದು ಪಟ್ಟದಕಲ್ಲಿದಲ್ಲಿ ಮಾತ್ರ. ಇದರಿಂದ ಪಟ್ಟದಕಲ್ಲು ವಿಶ್ವ ಪರಂಪರೆ ತಾಣವಾಗಿದೆ. ಇಲಾಖೆಯ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರಿಂದ ಶಿಸ್ತು ಮತ್ತು ಸ್ವಚ್ಛತೆ ಮೂಲಕ ಪ್ರವಾಸಿಗರಿಗೆ ಉತ್ತಮ ವಾತವಾರಣ ನಿರ್ಮಿಸಿದ್ದು, ಸ್ಮಾರಕಗಳು ನಮ್ಮ ಪರಂಪರೆ ಬಿತ್ತರಿಸುತ್ತವೆ. ಅವುಗಳಲ್ಲಿನ ವೈಭವವನ್ನು ಸಂಭ್ರಮಿಸುತ್ತ ಮುಂದಿನ ಪೀಳಿಗೆಗೆ ಕೊಡಮಾಡಬೇಕು ಎಂದು ಹೇಳಿದರು.
ಧಾರವಾಡ ಕೆಸಿಡಿ ನಿವೃತ್ತ ರಿಜಿಸ್ಟ್ರಾರ್ ಡಾ.ಎಸ್. ರಾಜಶೇಖರ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ,ಚಾಲುಕ್ಯರ ಸ್ಮಾರಕಗಳ ಅಧ್ಯಯನದಲ್ಲಿ ಬಹಳಷ್ಟು ಆಳವಾದ ವಿಷಯಗಳಿವೆ. ಇಂದಿನ ವಿದ್ಯಾರ್ಥಿಗಳು ಪ್ರವಾಸಿ ತಾಣ ಮತ್ತು ಸ್ಮಾರಕಗಳ ಅಡಿಯಲ್ಲಿಯೇ ಸಾಕಷ್ಟು ಅಧ್ಯಯನ ಮಾಡುವ ಮೂಲಕ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಬೇಕು. ಪಟ್ಟದಕಲ್ಲಿನ ಸ್ಮಾರಕಗಳು ಕೇವಲ ದೇಶಕ್ಕೆ ಸೀಮಿತವಿಲ್ಲ. ಇದು ಜಗತ್ತಿನ ಮಾನವನ ಬದುಕು ಒಳಗೊಂಡಿರುವ ಅತ್ಯದ್ಭುತ ಶಿಲ್ಪಕಲೆಯ ಸೊಬಗಿನ ಸಮೂಹವಾಗಿದೆ ಎಂದು ಹೇಳಿದರು.
ಭಾರತೀಯ ಪುರಾತತ್ವ ಇಲಾಖೆಯ ಧಾರವಾಡ ವಲಯ ಎಸ್‌ಎ ಅಧಿಕಾರಿ ರಮೇಶ ಮೂಲಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ಬಿಎಂ ಪದವಿ ಕಾಲೇಜಿನ ಉಪನ್ಯಾಸಕ ಎಸ್.ಎಸ್. ದೊಡಮನಿ, ಪುರಾತತ್ವಿದ ಡಾ. ಶ್ರೀಗುರು ಭಾಗಿ ಸೇರಿದಂತೆ ಇಲಾಖೆಯ ಅಧಿಕಾರಿಗಳಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಕೊಡಮಾಡಲಾಯಿತು. ಅಧಿಕಾರಿ ದೇವರಾಜ ಸ್ವಾಗತಿಸಿ ವಂದಿಸಿದರು.