ಸಂಸ್ಕೃತಿ ಉಳಿದರೆ ಸಮಾಜಕ್ಕೆ ಶಕ್ತಿ: ಶ್ರೀ ರಂಭಾಪುರಿ ಜಗದ್ಗುರು

KannadaprabhaNewsNetwork |  
Published : Sep 17, 2026, 01:15 AM IST
ಹಳಿಯೂರು ಗ್ರಾಮದಲ್ಲಿ ನೆಡೆದ ಜನಜಾಗೃತಿ ಧರ್ಮ ಸಮಾರಂಭ ಕಾರ್ಯಕ್ರಮ   | Kannada Prabha

ಸಾರಾಂಶ

ತರೀಕೆರೆಭಾರತೀಯ ಸಂಸ್ಕೃತಿಯಲ್ಲಿ ದೇವಸ್ಥಾನಗಳಿಗೆ ಬಹಳಷ್ಟು ಪ್ರಾಮುಖ್ಯತೆ ಇದೆ. ದೇವಾಲಯಗಳು ಕೇವಲ ಪೂಜಾ ಕೇಂದ್ರ ಗಳಾಗದೇ ಜನಜಾಗೃತಿ, ಸಮಾಜ ಜಾಗೃತಿ ಕೇಂದ್ರಗಳಾಗಬೇಕು. ಧರ್ಮದಿಂದ ಸಂಸ್ಕೃತಿ ಉಳಿದರೆ ಸಂಸ್ಕೃತಿಯಿಂದ ಸಮಾಜಕ್ಕೆ ಹೆಚ್ಚಿನ ಬಲ ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.

ಹಳಿಯೂರು ಗ್ರಾಮದಲ್ಲಿ ನಡೆದ ಜನಜಾಗೃತಿ ಧರ್ಮ ಸಮಾರಂಭ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ತರೀಕೆರೆ

ಭಾರತೀಯ ಸಂಸ್ಕೃತಿಯಲ್ಲಿ ದೇವಸ್ಥಾನಗಳಿಗೆ ಬಹಳಷ್ಟು ಪ್ರಾಮುಖ್ಯತೆ ಇದೆ. ದೇವಾಲಯಗಳು ಕೇವಲ ಪೂಜಾ ಕೇಂದ್ರ ಗಳಾಗದೇ ಜನಜಾಗೃತಿ, ಸಮಾಜ ಜಾಗೃತಿ ಕೇಂದ್ರಗಳಾಗಬೇಕು. ಧರ್ಮದಿಂದ ಸಂಸ್ಕೃತಿ ಉಳಿದರೆ ಸಂಸ್ಕೃತಿಯಿಂದ ಸಮಾಜಕ್ಕೆ ಹೆಚ್ಚಿನ ಬಲ ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.

ಬುಧವಾರ ತಾಲೂಕಿನ ಹಳಿಯೂರು ಗ್ರಾಮದ ಶ್ರೀ ಬಯಲು ಬಸವೇಶ್ವರಸ್ವಾಮಿ ಹಾಗೂ ಶ್ರೀ ಉಮಾಮಹೇಶ್ವರಸ್ವಾಮಿ ಉತ್ಸವ ಮೂರ್ತಿಗಳ ಪುನರ್ ಪ್ರತಿಷ್ಠಾಪನೆ ಮಹೋತ್ಸವ ಅಂಗವಾಗಿ ನಡೆದ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಇಂದಿನ ಯುವ ಜನಾಂಗ ಆಧುನಿಕ ಶಿಕ್ಷಣ ಮತ್ತು ತಂತ್ರಜ್ಞಾನದಲ್ಲಿ ಮುನ್ನಡೆಯುತ್ತಿರುವ ಸಂದರ್ಭದಲ್ಲಿ ಧರ್ಮ ಸಂಸ್ಕೃತಿ ಪರಂಪರೆ ಮತ್ತು ಆಧ್ಯಾತ್ಮಿಕ ಮೌಲ್ಯ ಮರೆಯಬಾರದು, ವಿಜ್ಞಾನ ಸ್ವೀಕರಿಸಿ ಆದರೆ ಸಂಸ್ಕಾರ ಕಳೆದುಕೊಳ್ಳಬಾರದು. ಆಧುನಿಕತೆ ಅಪ್ಪಿಕೊಳ್ಳೋಣ ಆದರೆ ಧಾರ್ಮಿಕ ಪರಂಪರೆ ನಿರ್ಲಕ್ಷಿಸಬಾರದು. ದೇವರ ಮುಂದೆ ಎಲ್ಲರೂ ಸಮಾನರು. ಜಾತಿ ವರ್ಗ ಆರ್ಥಿಕ ಸ್ಥಿತಿ ಎಂಬ ಭೇದ ಮೀರಿ ಪರಸ್ಪರ ಪ್ರೀತಿ ಸಹೋದರತ್ವ ಮತ್ತು ಸೌಹಾರ್ದದಿಂದ ಬದುಕುವುದು ನಿಜವಾದ ಧರ್ಮಾಚರಣೆ. ಮಕ್ಕಳಿಗೆ ಸಂಸ್ಕಾರ ನೀಡೋಣ. ಯುವಕರಲ್ಲಿ ಧರ್ಮ ಪ್ರಜ್ಞೆ ಬೆಳೆಸೋಣ. ಗುರು ಹಿರಿಯರನ್ನು ಗೌರವಿಸೋಣ ಎಂದರು.

ಹಳಿಯೂರು ಗ್ರಾಮದ ಸದ್ಭಕ್ತರು ಸುಂದರ ದೇವಾಲಯ ನಿರ್ಮಿಸಿ ಬಯಲು ಬಸವೇಶ್ವರ ಮತ್ತು ಉಮಾಮಹೇಶ್ವರ ಉತ್ಸವ ಮೂರ್ತಿ ಪ್ರತಿಷ್ಠಾಪಿ ಸಿರುವುದು ತಮಗೆ ಅತ್ಯಂತ ಸಂತೋಷ ತಂದಿದೆ ಎಂದರು.

ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿ ಸಮಾರಂಭ ಉದ್ಘಾಟಿಸಿ ಮಾತನಾಡಿ ದೇವಾಲಯಗಳು ಪೂಜೆ ಆಚರಣೆಗೆ ಸೀಮಿತವಾಗದೆ ನುಡಿ ಸಂಸ್ಕಾರ ಮತ್ತು ಬದುಕಿನ ಮಾರ್ಗವಾಗಿಸಿ ಸಮಾಜದ ಏಕತೆ ಕೇಂದ್ರ ಗಳಾಗಬೇಕೆಂದರು.

ಶಾಸಕ ಜಿ.ಎಚ್.ಶ್ರೀನಿವಾಸ್ ರಂಭಾಪುರಿ ಬೆಳಗು ಡಿಜಿಟಲ್ ಮಾಸಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ,ಯುವ ಜನಾಂಗಕ್ಕೆ ಧರ್ಮ ಗುರು ಪರಂಪರೆ ಸಂಸ್ಕೃತಿ ಸಂಸ್ಕಾರ ಕೊಡುವ ಕೇಂದ್ರಗಳಾಗಬೇಕು. ಜನ ಜಾಗೃತಿ ವಿದ್ಯೆ ಸಂಸ್ಕಾರ ಸೇವೆ ಮತ್ತು ಏಕತೆ ಪವಿತ್ರ ಕೇಂದ್ರಗಳಾಗಬೇಕು ಎಂದು ಹೇಳಿದರು.

ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ ದೇವರ ಪ್ರತಿಷ್ಠಾಪನೆ ಜೊತೆಗೆ ಧರ್ಮವನ್ನು ನಮ್ಮ ಬದುಕಿನಲ್ಲಿ ಅಳವಡಿಸಿ ಕೊಳ್ಳೋಣ. ದೇವಾಲಯಗಳನ್ನು ಕಟ್ಟುವ ಜೊತೆಗೆ ಸದ್ಗುಣಗಳ ಸಮಾಜ ಕಟ್ಟೋಣ ಎಂದರು.

ಸಮಾರಂಭಕ್ಕೂ ಮುನ್ನ ಹಳಿಯೂರು ಗ್ರಾಮದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ವೈಭವದಿಂದ ನಡೆಯಿತು. ಸಾಂಸ್ಕೃತಿಕ ಕಲಾತಂಡ ಹಾಗೂ ವೀರಗಾಸೆ ಕಲಾವಿದರ ನೃತ್ಯ ಎಲ್ಲರ ಗಮನ ಸೆಳೆಯಿತು.ತರೀಕೆರೆ ಜಗದೀಶ ಶಿವಾಚಾರ್ಯ ಸ್ವಾಮಿ ನೇತೃತ್ವ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ಕೆ.ಆರ್.ಧೃವಕುಮಾರ್, ಕಾಂಗ್ರೆಸ್ ಮುಖಂಡ ಎಚ್.ಎಂ.ಗೋಪಿಕೃಷ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹುಣಸಘಟ್ಟ ಗುರುಮೂರ್ತಿ ಶ್ರೀ, ಬೀರೂರು ರುದ್ರಮುನಿ ಶ್ರೀ, ನಂದಿಪುರ ನಂದೀಶ್ವರ ಶ್ರೀ, ಹಣ್ಣೆ ಮರುಳಸಿದ್ಧ ಪಂಡಿತಾರಾಧ್ಯ ಶ್ರೀ, ಪುರಸಭೆ ಸದಸ್ಯ ಕುಮಾರಪ್ಪ, ಪುರಸಭಾ ಮಾಜಿ ಅಧ್ಯಕ್ಷ ಎಂ.ನರೇಂದ್ರ ಗ್ರಾಮಸ್ಥರು ಇದ್ದರು.16ಕೆಟಿಆರ್.ಕೆ.2ಃ

ಹಳಿಯೂರು ಗ್ರಾಮದಲ್ಲಿ ಜನಜಾಗೃತಿ ಧರ್ಮ ಸಮಾರಂಭದಲ್ಲಿ ಬಾಳೆ ಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ವಹಿಸಿ ಆಶೀರ್ವಚನ ನೀಡಿದರು. ಶಾಸಕ ಜಿ.ಎಚ್. ಶ್ರೀನಿವಾಸ್, ಮಾಜಿ ಶಾಸಕ ಡಿ.ಎಸ್.ಸುರೇಶ್ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಇಒ ಕಚೇರಿ ವಿರುದ್ಧದ ಆರೋಪಗಳ ತನಿಖೆಗೆ ಲೋಕಾಯುಕ್ತಕ್ಕೆ ಲಿಖಿತ ದೂರು
ಆಸ್ಪತ್ರೆ, ಕಾಲೇಜು ಜಾಗದ ಖರಾಬು ಭೂಮಿ ಮಾಯ..!