ಯಕ್ಷಗಾನ ಉಳಿದರೆ ಸಂಸ್ಕೃತಿ, ಪರಂಪರೆಯ ಉಳಿವು: ಲೋಕೇಶ ಗುಣವಂತೆ

KannadaprabhaNewsNetwork |  
Published : Nov 06, 2026, 02:30 AM IST
ಯಕ್ಷಗುರು ಲೋಕೇಶ ಗುಣವಂತೆ ಅವರನ್ನು ಪಾಲಕರು ಹಾಗೂ ಊರ ನಾಗರಿಕರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. | Kannada Prabha

ಸಾರಾಂಶ

ಕಲಿಕಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಅತ್ಯಂತ ಆಸಕ್ತಿ ಹಾಗೂ ಉತ್ಸಾಹದಿಂದ ಯಕ್ಷಗಾನ ಕಲಿತು, ಮಾದರಿಯಾಗುವ ರೀತಿಯಲ್ಲಿ ರಂಗಪ್ರದರ್ಶನ ನೀಡುತ್ತಿರುವುದು ಸಂತಸದ ಸಂಗತಿ

ಅಂಕೋಲಾ: ಯಕ್ಷಗಾನದ ಕಲಿಕೆ, ಅಭ್ಯಾಸ ಹಾಗೂ ರಂಗಪ್ರದರ್ಶನದ ಮೂಲಕ ಕರಾವಳಿಯ ಶ್ರೀಮಂತ ಕಲಾ ಪರಂಪರೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ನಿಟ್ಟಿನಲ್ಲಿ ಗೋಕರ್ಣದ ಗಂಗೆಕೊಳ್ಳದ ಶ್ರೀ ಗುರುಕೃಪಾ ಯಕ್ಷಗಾನ ಕಲಿಕಾ ಕೇಂದ್ರದ ವಿದ್ಯಾರ್ಥಿಗಳು ನೀಡಿದ ರಂಗಪ್ರವೇಶ ಹಾಗೂ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮವು ಪ್ರೇಕ್ಷಕರ ಮನಸೂರೆಗೊಂಡಿತು.

ಈ ಸಂದರ್ಭದಲ್ಲಿ ಯಕ್ಷಗುರು ಲೋಕೇಶ ಗುಣವಂತೆ ಅವರನ್ನು ಪಾಲಕರು ಹಾಗೂ ಊರ ನಾಗರಿಕರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಲೋಕೇಶ ಗುಣವಂತೆ, ಯಕ್ಷಗಾನ ಕಲೆಯ ಉಳಿವಿನೊಂದಿಗೆ ನಮ್ಮ ಸಂಸ್ಕೃತಿ, ಜಾನಪದ ಪರಂಪರೆ ಹಾಗೂ ಸಾಂಪ್ರದಾಯಿಕ ಮೌಲ್ಯಗಳನ್ನು ಉಳಿಸಿ ಬೆಳೆಸಲು ಸಾಧ್ಯವಿದೆ. ಈ ಉದ್ದೇಶದಿಂದ ಆರಂಭಗೊಂಡಿರುವ ಕಲಿಕಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಅತ್ಯಂತ ಆಸಕ್ತಿ ಹಾಗೂ ಉತ್ಸಾಹದಿಂದ ಯಕ್ಷಗಾನ ಕಲಿತು, ಮಾದರಿಯಾಗುವ ರೀತಿಯಲ್ಲಿ ರಂಗಪ್ರದರ್ಶನ ನೀಡುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಕಲಿಕಾ ಕೇಂದ್ರದ ರೂವಾರಿ ಶರತ್ ಜಿ. ನಾಯ್ಕ ಹಾಗೂ ಕಲಿಕಾ ಕೇಂದ್ರಕ್ಕೆ ಸ್ಥಳಾವಕಾಶ ಒದಗಿಸಿದ ಮಂಜುನಾಥ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಂತರ ಕಲಿಕಾ ಕೇಂದ್ರದ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ''''''''''''''''ಜಾಂಬವತಿ ಕಲ್ಯಾಣ'''''''''''''''' ಯಕ್ಷಗಾನ ಪ್ರಸಂಗವು ಯಕ್ಷಗಾನ ಪ್ರೇಮಿಗಳ ಮನತಣಿಸಿತು. ಮಂಜುನಾಥ ಗೌಡ ಕಾರ್ಯಕ್ರಮ ನಿರೂಪಿಸಿದರು. ಶಿವದುರ್ಗಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಶಾಂತಾ ನಾರಾಯಣ ನಾಯ್ಕ ಕುಟುಂಬದವರು ಕಾರ್ಯಕ್ರಮಕ್ಕೆ ವಿಶೇಷ ಸಹಕಾರ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಳಸಿದ ಕಪ್‌ನಲ್ಲೇ ಪೆಪ್ಸಿ ಸರ್ವ್‌ ಮಾಡಿದ ಪಿವಿಆರ್ ತಿನಿಸು ಮಳಿಗೆ
ಬಿಎಂಟಿಸಿ ಬಸ್‌ ಪಾಸ್‌ ದರ ಹೆಚ್ಚಳ!