ಆರೋಪಿಗಳ ಬಂಧನಕ್ಕೆ ಆಗ್ರಹ

KannadaprabhaNewsNetwork |  
Published : Aug 12, 2025, 02:02 AM IST
28 | Kannada Prabha

ಸಾರಾಂಶ

ಯಾವುದೇ ಸಮುದಾಯದ ವಿರುದ್ಧ ಯಾರೇ ಮಾತನಾಡಿದರು ಅದು ತಪ್ಪೇಯಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರುಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನ ಮಾಡಿದ ಮಂಡ್ಯದ ವ್ಯಕ್ತಿಗಳ ವಿರುದ್ಧ ಮೈಸೂರಿನಲ್ಲೂ ಕುರುಬರ ರಾಜ್ಯ ಸಂಘದಿಂದ ದೂರು ನೀಡಲಾಯಿತು.ನಗರದ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಮತ್ತು ಅಹಿಂದ ಒಕ್ಕೂಟಗಳ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ನೇತೃತ್ವದಲ್ಲಿ ಸಿದ್ಧಾರ್ಥನಗರದ ಕನಕಭವನದಲ್ಲಿ ಕುರುಬರ ಸಮುದಾಯದ ಸಭೆ ನಡೆಸಿದರು. ಈ ವೇಳೆ ಮಂಡ್ಯದಲ್ಲಿ ಹಾಲುಮತಸ್ಥ ಸಮುದಾಯದ ವಿರುದ್ಧ ಮಾತನಾಡಿರುವುದನ್ನು ಖಂಡಿಸಿದರು. ಸಭೆ ಬಳಿಕ ನಿಯೋಗವೊಂದು ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಅವಹೇನಕಾರಿ ಮಾತುಗಳನ್ನಾಡಿದವರ ವಿರುದ್ಧ ದೂರು ದಾಖಲಿಸಿದರು.ಕರ್ನಾಟಕ ರಾಜ್ಯ ಕುರುಬರ ಸಂಘದ ಮಾಜಿ ರಾಜ್ಯಾಧ್ಯಕ್ಷ ಬಿ. ಸುಬ್ರಹ್ಮಣ್ಯ ಮಾತನಾಡಿ, ಯಾವುದೇ ಸಮುದಾಯದ ವಿರುದ್ಧ ಯಾರೇ ಮಾತನಾಡಿದರು ಅದು ತಪ್ಪೇಯಾಗಿದೆ. ಅದರಲ್ಲೂ ಹಾಲು ಮತಸ್ಥ ಸಮುದಾಯದ ಬಗ್ಗೆ ಮಾತನಾಡುವುದು ಅಕ್ಷಮ್ಯ ಅಪರಾಧ. ಏ. 8 ರಂದು ಮಾತನಾಡಿರುವ ದುಷ್ಕರ್ಮಿಗಳ ವಿರುದ್ಧ ಇದುವರೆವಿಗೂ ಯಾವುದೇ ಕಾನೂನು ಕ್ರಮ ಆಗಿಲ್ಲ‌ ಎಂದರು.ಈ ಹಿನ್ನೆಲೆಯಲ್ಲಿ ಆ. 12 ರಂದು ಮದ್ದೂರು ತಾಲೂಕು ಬಸರಾಳು ಗ್ರಾಮ ಬಂದ್ ಗೆ ಕರೆ ನೀಡಿದ್ದೇವೆ. ಅದಾಗಿಯೂ ಅವಹೇಳನಕಾರಿ ಹೇಳಿಕೆ ನೀಡಿದವರನ್ನು ಬಂಧಿಸಿ, ಗಡಿಪಾರು ಮಾಡದಿದ್ದರೆ ಅವರ ವಿರುದ್ಧ ರಾಜ್ಯ ಬಂದ್ ಗೂ ಕರೆ ನೀಡಲು ತಯಾರಿ ಮಾಡುವುದಾಗಿ ಅವರು ಎಚ್ಚರಿಸಿದರು.ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನುದಾನ ತಾರತಮ್ಯದ ವಿರುದ್ಧ ಮುಕ್ತವಾಗಿ ಅಂಕಿ ಅಂಶಗಳ ಮೂಲಕ ಮಾತನಾಡುವ ಏಕೈಕ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ ಆಗಿದ್ದಾರೆ. ಹೀಗಾಗಿ ಅಂತಹ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಮಾತನಾಡುವ ಹಾಗೂ ಷಡ್ಯಂತ್ರ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.ಈ ವೇಳೆ ಕುರುಬ ಸಮುದಾಯದ ಜಿಲ್ಲಾಧ್ಯಕ್ಷ ನಂಜೇಗೌಡ, ತಾಲೂಕು ಅಧ್ಯಕ್ಷ ಕೋಟೆ ಆನಂದ್, ಕೆಂಪಣ್ಣ, ಕುನ್ನೇಗೌಡ, ಬಸವರಾಜು, ನಗರ ಪಾಲಿಕೆ ಮಾಜಿ ಸದಸ್ಯ ಜಿ. ಗೋಪಿ, ರವಿ, ಶೋಭಾ, ಛಾಯಾ, ಮುಖಂಡರಾದ ವಕೀಲ ಪುಟ್ಟಸ್ವಾಮಿ, ಜಯಸ್ವಾಮಿ, ಬಿಬಿಎಂಪಿ ಮಾಜಿ ಸದಸ್ಯ ಗಡ್ಡ ಕೃಷ್ಣಮೂರ್ತಿ, ಅಭಿ, ರವಿ, ಅಪ್ಪುಗೌಡ, ಕೃಷ್ಣ, ಧರ್ಮೇಂದ್ರ, ಡಿ. ಹುಚ್ಚೇಗೌಡ, ಎಚ್.ಕೆ. ಗೋಪಾಲ್, ಹಿನಕಲ್ ಉದಯ್, ಮಹೇಶ್, ಕಾಡನಹಳ್ಳಿ ಸ್ವಾಮಿಗೌಡ, ಅಭಿ ಸೇರಿದಂತೆ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಯ ತಾಲೂಕು ಕುರುಬ ಸಂಘದ ಅಧ್ಯಕ್ಷರು, ಪದಾಧಿಕಾರಿಗಳಾದ ಕುರಿಹುಂಡಿ ರಾಜು, ಜೈಸ್ವಾಮಿ, ಹಿನಕಲ್ ಉದಯ್, ಮೋಹನ್, ಆನಂದ್, ಬಸವಣ್ಣ, ಪರಮೇಶ್, ಮಹೇಶ್, ರವಿ, ಅಪ್ಪುಗೌಡ, ಚಿಕ್ಕಣ್ಣ ಸೇರಿದಂತೆ ಮೂರು ಜಿಲ್ಲೆಯ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ