ಹರಿಹರ: ನಗರದಲ್ಲಿ ಮಾ.18ರಿಂದ 22ರವರೆಗೆ ನಡೆಯುವ ಗ್ರಾಮದೇವತೆ ಉತ್ಸವದಲ್ಲಿ ಅರೆ ಬೆತ್ತಲೆ ಬೇವಿನ ಉಡುಗೆ, ಕೋಣ ಬಲಿ ಹಾಗೂ ಮನೋರಂಜನೆ ಹೆಸರಲ್ಲಿ ಜಾತ್ರೆಯಲ್ಲಿ ಜೂಜು ಅಡ್ಡಗಳನ್ನು ನಡೆಸುವುದನ್ನು ತಡೆಯುವಂತೆ ಆಗ್ರಹಿಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಯಿತು.
ಹರಿಹರ: ನಗರದಲ್ಲಿ ಮಾ.18ರಿಂದ 22ರವರೆಗೆ ನಡೆಯುವ ಗ್ರಾಮದೇವತೆ ಉತ್ಸವದಲ್ಲಿ ಅರೆ ಬೆತ್ತಲೆ ಬೇವಿನ ಉಡುಗೆ, ಕೋಣ ಬಲಿ ಹಾಗೂ ಮನೋರಂಜನೆ ಹೆಸರಲ್ಲಿ ಜಾತ್ರೆಯಲ್ಲಿ ಜೂಜು ಅಡ್ಡಗಳನ್ನು ನಡೆಸುವುದನ್ನು ತಡೆಯುವಂತೆ ಆಗ್ರಹಿಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಸಂಘದ ಪಧಾದಿಕಾರಿಗಳು ಮಾರ್ಚ್ 18 ರಿಂದ 22ರವರೆಗೆ ಹರಿಹರ ನಗರದಲ್ಲಿ ಗ್ರಾಮದೇವತೆ ಉತ್ಸವ ಅತಿ ವಿಜೃಂಭಣೆ, ಶ್ರದ್ಧಾ ಭಕ್ತಿಯಿಂದ ನಡೆಯುತ್ತಿರುವುದು ಹರ್ಷದಾಯಕ ವಿಷಯವಾಗಿದೆ ಎಂದರು.ಉತ್ಸವದ ಸಂದರ್ಭದಲ್ಲಿ ಆಚರಣೆಯ ನೆಪದಲ್ಲಿ ಕೆಲವರು ನಡೆಸುವ ಮೌಢ್ಯಾಚರಣೆಗಳನ್ನು ತಡೆಯುವುದು ಪ್ರಜ್ಞಾವಂತರ ಕರ್ತವ್ಯವಾಗಿದೆ. ಈ ಹಿನ್ನಲೆಯಲ್ಲಿ ನಗರದಲ್ಲಿ ನಡೆಯುವ ಉತ್ಸವದ ವೇಳೆ ಅರೆ ಬೆತ್ತಲೆ ಬೇವಿನ ಉಡುಗೆ ತೊಡುವುದು ಹಾಗೂ ಕೋಣ ಬಲಿ ನೀಡುವುದನ್ನು ತಡೆಯಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ ಎಂದರು.ಅಲ್ಲದೆ ಜಾತ್ರೆಯ ವೇಳೆ ಅಲ್ಲಲ್ಲಿ ಆಟಿಕೆ ಸಮಾನುಗಳ ಮತ್ತು ವಿವಿಧ ಸಲಕರಣೆಗಳ ಮಾರಾಟದ ಅಂಗಡಿಗಳನ್ನು ತೆರೆಯುವುದು ಸಹಜ. ಈ ಆವಕಾಶವನ್ನೇ ಬಳಸಿಕೊಂಡು ಬಾಲ್ ಹೊಡೆಯುವುದು, ರಿಂಗ್ ಹಾಕುವುದು (ಹಣ ಕಟ್ಟಿ) ಅಂಗಡಿಗಳನ್ನು ತೆರೆಯಲು ಆವಕಾಶ ನೀಡಲಾಗುತ್ತಿದೆ ಎನ್ನುವ ಆಂಶ ಕಳವಳಕಾರಿಯಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.ಹಬ್ಬದ ಆಚರಣೆಗೆ ಬಂದವರು ಹಣದ ಆಸೆಗಾಗಿ ಆಟ ಆಡಿ ಹಣ ಕಳೆದುಕೊಂಡು ಊರಿಗೆ ತೆರಳಲು ಹಣವಿಲ್ಲದೆ ಪರದಾಡುವಂತ ಆನೇಕ ಉದಾಹರಣೆಗಳು ನಾವು ಕಂಡಿದ್ದೇವೆ. ಈ ಹಿನ್ನಲೆಯಲ್ಲಿ ಕಾನೂನು ಪ್ರಕಾರ ಕೋಣ ಬಲಿ, ಅರೆಬೆತ್ತಲೆ ಬೇವಿನ ಉಡಿಗೆ ಹಾಗೂ ಜೂಜಾಡವುದು ನಿಷೇದಿಲ್ಪಟ್ಟಿದ್ದು, ಇಂತಹ ಆಚರಣೆ ಅವಕಾಶ ನೀಡದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಈ ಮೂಲಕ ಸಂಘದ ವತಿಯಿಂದ ಆಗ್ರಹಿಸುತ್ತೇವೆ ಎಂದರು.ಸಂಘದ ಅಧ್ಯಕ್ಷೆ ಶಾಂಭವಿ ನಾಗರಾಜ್, ಕಾರ್ಯದರ್ಶಿ ಹೆಚ್.ಸಿ. ಕೀರ್ತಿಕುಮಾರ್, ಆರ್. ಮಂಜುನಾಥ್, ಚಿದಾನಂದ ಕಂಚಿಕೇರಿ, ಜಿ.ಕೆ. ಪಂಚಾಕ್ಷರಿ, ವಿಶ್ವನಾಥ್ ಮೈಲಾಳ್, ಮಂಜುನಾಥ್ ರಾಜನಹಳ್ಳಿ, ಚಂದ್ರಶೇಖರ್ ಕುಂಬಾರ್, ಅನಂದ್‍ಕುಮಾರ್, ಹೆಚ್. ಶಿವಪ್ಪ, ಬಿ.ಎಂ. ಚಂದ್ರಶೇಖರ್ ಹಾಗೂ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.