ನೋಂದಣಾಧಿಕಾರಿ ಕಚೇರಿಯಲ್ಲಿನ ಅಕ್ರಮ ತಡೆಗಟ್ಟಿ

KannadaprabhaNewsNetwork |  
Published : Jun 20, 2024, 01:07 AM IST
ನೋಂದಣಾಧಿಕಾರಿ ಕಚೇರಿಯಲ್ಲಿನ ಅಕ್ರಮ ತಡೆಗಟ್ಟುವಂತೆ ಜಿಲ್ಲಾಧಿಕಾರಿಗೆ ಮನವಿ ನೀಡಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ. | Kannada Prabha

ಸಾರಾಂಶ

ಕಳೆದ ಏಳು ವರ್ಷಗಳಿಂದ ಜಿಲ್ಲೆಯ ನೋಂದಣಾಧಿಕಾರಿಗಳು ವಿಜಯಪುರ ನಗರದಲ್ಲಿ ಕಾರ್ಯನಿರ್ವಹಿಸಿದ್ದು, ಅಕ್ರಮ ಪ್ರಕರಣಗಳಿಗೆ ಕುಮಕ್ಕು ನೀಡುತ್ತಿದ್ದಾರೆ. ಇವರ ಜೊತೆ ಹಲವಾರು ಜನ ಕೈ ಜೋಡಿಸಿ ಅಮಾಯಕ ಬಡ ಜನರ ನಕಲಿ ದಾಖಲೆ ಸೃಷ್ಟಿಸಿ ಕೊಳ್ಳೆ ಹೊಡೆಯುತ್ತಿದ್ದು, ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಾಲೂಕು ಮತ್ತು ಜಿಲ್ಲೆಯಲ್ಲಿ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿ ತಕ್ಷಣದಿಂದ ಕಾರ್ಯ ಪ್ರವೃತ್ತರಾಗಬೇಕು ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ಇದಕ್ಕೂ ಮೊದಲು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಅಕ್ರಮವಾಗಿ ನಕಲಿ ಭೂ-ದಾಖಲೆ ಸೃಷ್ಟಿ ಮಾಡಿ ಜನರನ್ನು ವಂಚಿಸುತ್ತಿರುವ ಜಾಲ ದೊಡ್ಡ ಪ್ರಮಾಣದಲ್ಲಿ ಬೀಡು ಬಿಟ್ಟಿದ್ದು, ಇದನ್ನು ಜಿಲ್ಲಾಡಳಿತ ತಕ್ಷಣವೇ ಮಟ್ಟ ಹಾಕಬೇಕು. ಇದರಲ್ಲಿ ನೂರಾರು ಜನ ತಮ್ಮ ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ. ಇವತ್ತಿನ ದಿನಮಾನದಲ್ಲಿ ಇದರ ಮೊತ್ತ ನೂರಾರು ಕೋಟಿ ರುಪಾಯಿ ಆಗಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು ಇದನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಜಿಲ್ಲೆಯ ಜನರ ಪರವಾಗಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ನಾಗರಾಜ ಲಂಬು, ಪ್ರಕಾಶ ಮಿರ್ಜಿ, ಗೋಪಾಲ ಘಟಕಾಂಬಳೆ, ಅಡಿವೆಪ್ಪ ಸಾಲಗಲ್ಲ, ಭೀಮಾಶಂಕರ ಹದನೂರ, ಈರಣ್ಣ ಪಟ್ಟಣಶೆಟ್ಟಿ, ರಮೇಶ ರೇಷ್ಮೆ, ರಾಜು ಹಿರೇಮಠ, ಪರಶುರಾಮ ಹೊಸಮನಿ, ಮಹೇಶ ಬಿದನೂರ, ಬಾಬು ಏಳಗಂಟಿ, ಸೈಯದ್ ನಿಲೋನಿ, ಬಸವರಾಜ ಹಳ್ಳಿ, ವೈದ್ಯನಾಥ ಬೂಬಶೆಟ್ಟಿ, ಪ್ರವೀಣ ವಾರದ, ಸಾಗರ ಅಡಿಕೆ, ಶ್ರೀಧರ ಪವಾರ, ಸಂತೋಷ ಜಾಧವ, ಬಾಬು ಜಗದಾಳೆ, ಬಸವರಾಜ ತೊನಶ್ಯಾಳ, ಸಿದ್ದು ಮಲ್ಲಿಕಾರ್ಜುನಮಠ, ವಿಜಯಕುಮಾರ ಹೂವಳ್ಳಿ, ಗುರು ಗೋಲಗೇರಿ, ಶಿವಾನಂದ ಪಾಟೀಲ, ಶೀಪು ಕಾಳಗಿ, ಕಲ್ಲು ರೂಗಿ, ಶ್ರೀಕಾಂತ ಶಿಂಧೆ, ವಿನಾಯಕ ದಹಿಂಡಿ, ಕಲ್ಲುಗೌಡ ಹರ್ನಾಳ, ಸದಾಶಿವ ಚಲವಾದಿ, ಮಹೇಶ ಕುಂಬಾರ, ಪ್ರಫುಲ್ ಪವಾರ, ರಾಘವೇಂದ್ರ ಕಾಪ್ಸೆ, ಶಾಂತು ಕಂಬಾರ, ಅನಿಲ ಉಪ್ಪಾರ, ಆನಂದ ಮುಚ್ಚಂಡಿ, ಗಣೇಶ ಅಜರಿ, ನಿಖಿಲ, ರುದ್ರಗೌಡ ಪಾಟೀಲ, ರಮೇಶ ಕೊಡಗನೂರ, ರವಿ ಬಾಗಲಕೋಟೆ, ಸತೀಶ ಪಾಟೀಲ, ಜಗದೀಶ ಮುಚ್ಚಂಡಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದು 2028ರವರೆಗೂ ಸಿಎಂ, ಇಳಿಸಲು ಆಗೋಲ್ಲ: ಜಮೀರ್‌
ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ