ಕನ್ನಡಪ್ರಭ ವಾರ್ತೆ, ತುಮಕೂರುಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ವರ ಬೆಲೆ ಹೆಚ್ಚಳ ಮಾಡಿದ್ದು, ಅಪ್ಪ, ಅಮ್ಮನ ಜಗಳದಲ್ಲಿ ಕೂಸು ಬಡವಾದಂತಹ ಸ್ಥಿತಿ ಭಾರತೀಯರಿದ್ದಾಗಿದೆ. ಬೆಲೆ ಏರಿಕೆ ನೆಪದಲ್ಲಿ ಹೊಟೇಲ್ ಮತ್ತಿತರರ ಉದ್ದಿಮೆಗಳು ಜನರನ್ನು ಲೂಟಿ ಮಾಡುತ್ತಿವೆ ಎಂದು ಎಐಟಿಯುಸಿಯ ರಾಜ್ಯ ಕಾರ್ಯದರ್ಶಿ ಗಿರೀಶ್ ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯ ಸರ್ಕಾರ ಹಾಲು ಮತ್ತು ಬಸ್ ಪ್ರಯಾಣದರ ಹೆಚ್ಚಳ ಮಾಡಿದರೆ, ಹೊಟೇಲ್ ಮಾಲೀಕರು ಕಾಫಿ, ಟೀ ಇನ್ನಿತರ ಉತ್ಪನ್ನಗಳಿಗೆ ದುಪ್ಪಟ್ಟು ವಸೂಲಿ ಮಾಡುವ ಮೂಲಕ ಹಗಲು ದರೋಡೆಗೆ ಇಳಿದಿದ್ದು, ಜನಸಾಮಾನ್ಯರಿಗೆ ಹೊರೆಯಾಗುತ್ತಿರುವ ಬೆಲೆ ಹೆಚ್ಚಳದ ಬಗ್ಗೆ ಸರ್ಕಾರಗಳು ನಿಗಾವಹಿಸಬೇಕು.ಈ ನಿಟ್ಟಿನಲ್ಲಿ ಸರ್ಕಾರಗಳ ಜನವಿರೋಧಿ ನೀತಿಗಳನ್ನು ಖಂಡಿಸಿ ಎಐಟಿಯುಸಿ ನವೆಂಬರ್ 22 ರಿಂದ 26 ರವರೆಗೆ ಬೆಂಗಳೂರಿನ ಫ್ರೀಡ್ರಂ ಪಾರ್ಕಿನಲ್ಲಿ ಎಐಟಿಯುಸಿಯ 43ನೇ ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದರು.ಲೀಟರ್ ಹಾಲಿಗೆ ಎಂಟುರೂ ಹೆಚ್ಚಳವಾದರೆ, ಕ್ಯಾಂಟೀನ್ ಮತ್ತು ಹೊಟೇಲ್ ಮಾಲೀಕರು ಒಂದು ಟೀ, ಅಥವಾ ಕಾಫೀಯ ಬೆಲೆಯನ್ನು ಐದುರು ಹೆಚ್ಚಳ ಮಾಡುವ ಮೂಲಕ ಗ್ರಾಹಕರನ್ನು ಶೋಷಣೆ ಮಾಡುತ್ತಿವೆ. ಹಾಗೆಯೇ ಬಸ್ ಪ್ರಯಾಣದರವನ್ನು ಹೆಚ್ಚಳ ನೆಪ ಮಾಡಿ, ಬೆಳೆ, ಬೆಲ್ಲ, ಅಕ್ಕಿ, ಸಕ್ಕರೆ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದರು.ಎಐಟಿಯುಸಿ 100 ವರ್ಷ ತುಂಬಿದ ಹಳೆಯ ಕಾರ್ಮಿಕ ಸಂಘಟನೆಯಾಗಿದೆ. ಸ್ವಾತಂತ್ರ ಹೋರಾಟದಲ್ಲಿಯೂ ಪಾಲ್ಗೊಂಡಿದ್ದ ನಮ್ಮ ಸಂಘಟನೆ, ಸ್ವಾತಂತ್ರ ನಂತರದಲ್ಲಿಯೂ ಅಡಳಿತ ಪಕ್ಷಗಳ ತಪ್ಪನ್ನು ಪ್ರಶ್ನಿಸುವ ಮೂಲಕ ನಿಜವಾದ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಾ ಬಂದಿದೆ ಎಂದರು.ಎಐಟಿಯುಸಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಶ್ವಥ ನಾರಾಯಣ ಮಾತನಾಡಿ,ಎಐಟಿಯುಸಿ ದೇಶದ ಅತ್ಯಂತ ಹಿರಿಯ ಮತ್ತು ಪ್ರಥಮಕಾರ್ಮಿಕ ಸಂಘಟನೆಯಾಗಿದೆ.ಇದರ 43 ನೇ ರಾಷ್ಟ್ರೀಯ ಸಮ್ಮೇಳನ ಸುಮಾರು 40 ವರ್ಷಗಳ ನಂತರ ಬೆಂಗಳೂರಿನಲ್ಲಿ ನಡೆಯುತ್ತಿದ್ದು,ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ಅಶ್ವಥನಾರಾಯಣ, ರಾಜ್ಯ ಸಮಿತಿ ಸದಸ್ಯರಾದ ಆರ್.ಗೋವಿಂದರಾಜು,ಸಿ.ಎಸ್.ಗೋವಿಂದರಾಜು,ಮುಖಂಡರಾದ ಮಂಜುನಾಥ್.ಹೆಚ್.ಆರ್., ಕಿಶೋರ್, ರಾಜೇಶ್ ಮತ್ತಿತರರಿದ್ದರು.