ಬೆಲೆ ಏರಿಕೆ- ಬದುಕಿನ ಜೊತೆ ಚೆಲ್ಲಾಟವಾಡಬೇಡಿ: ಕ್ಯಾ. ಬ್ರಿಜೇಶ್ ಚೌಟ

KannadaprabhaNewsNetwork |  
Published : Nov 05, 2026, 02:30 AM IST
ಕ್ಯಾ.ಬ್ರಿಜೇಶ್‌ ಚೌಟ  | Kannada Prabha

ಸಾರಾಂಶ

ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಜನಸಾಮಾನ್ಯರಿಗೆ ನೆಮ್ಮದಿಯ ಬದುಕು ಎನ್ನುವುದೇ ಮರೀಚಿಕೆಯಾಗುತ್ತಿದೆ. ಮೊದಲು ಹಾಲಿನ ಬೆಲೆ ಏರಿಕೆ, ಅದರ ಬೆನ್ನಲ್ಲೇ ಮೊಸರಿನ ದರ ಏರಿಕೆ, ಇದೀಗ ರಾಜ್ಯದ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಏರಿಕೆ. ಜನರ ಬದುಕಿನ ಪ್ರತಿಯೊಂದು ಹಂತದಲ್ಲೂ ಬೆಲೆ ಏರಿಕೆಯ ಬರೆ ಎಳೆಯುತ್ತಿರುವ ಸರ್ಕಾರಕ್ಕೆ ಸಾಮಾನ್ಯ ಜನರ ಸಂಕಷ್ಟ ಕಾಣಿಸುತ್ತಿಲ್ಲವೇ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಮಂಗಳೂರು ; ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಜನಸಾಮಾನ್ಯರಿಗೆ ನೆಮ್ಮದಿಯ ಬದುಕು ಎನ್ನುವುದೇ ಮರೀಚಿಕೆಯಾಗುತ್ತಿದೆ. ಮೊದಲು ಹಾಲಿನ ಬೆಲೆ ಏರಿಕೆ, ಅದರ ಬೆನ್ನಲ್ಲೇ ಮೊಸರಿನ ದರ ಏರಿಕೆ, ಇದೀಗ ರಾಜ್ಯದ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಏರಿಕೆ. ಜನರ ಬದುಕಿನ ಪ್ರತಿಯೊಂದು ಹಂತದಲ್ಲೂ ಬೆಲೆ ಏರಿಕೆಯ ಬರೆ ಎಳೆಯುತ್ತಿರುವ ಸರ್ಕಾರಕ್ಕೆ ಸಾಮಾನ್ಯ ಜನರ ಸಂಕಷ್ಟ ಕಾಣಿಸುತ್ತಿಲ್ಲವೇ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ನವೆಂಬರ್ 1ರಿಂದ ಜಾರಿಗೆ ಬಂದಿರುವ ನಂದಿನಿ ಹಾಲಿನ ದರ ಏರಿಕೆಯಿಂದ ಟೋನ್ಡ್ ಹಾಲಿನ ಬೆಲೆ ಲೀಟರ್‌ಗೆ ₹ 46ರಿಂದ ₹ 54ಕ್ಕೆ ಏರಿಕೆಯಾಗಿದೆ. ವಿಶೇಷ ಟೋನ್ಡ್ ಮತ್ತು ಶುಭಂ ಹಾಲಿನ ದರ ₹ 52ರಿಂದ ₹ 64ಕ್ಕೆ ಹೆಚ್ಚಳವಾಗಿದೆ. ಮೊಸರಿನ ಬೆಲೆಯೂ ಲೀಟರ್‌ಗೆ ಬರೋಬ್ಬರಿ ₹ 14 ಹೆಚ್ಚುವರಿ ಹಣ ತೆರಬೇಕಾಗಿದೆ.ಇಷ್ಟಕ್ಕೇ ಜನರ ಸಂಕಷ್ಟ ಮುಗಿದಿಲ್ಲ. ಇದೀಗ ಸಾರಿಗೆ ಸಚಿವ ಭೈರತಿ ಸುರೇಶ್ ಅವರು ಮೂರು ಸಾರಿಗೆ ನಿಗಮಗಳ ಪ್ರಯಾಣ ದರವನ್ನು ಸರಾಸರಿ ಶೇ.23ರಷ್ಟು ಹೆಚ್ಚಿಸಿರುವುದಾಗಿ ಪ್ರಕಟಿಸಿದ್ದಾರೆ. ಬಿಎಂಟಿಸಿ ಸಾಮಾನ್ಯ ಬಸ್‌ನ ಕನಿಷ್ಠ ಪ್ರಯಾಣ ದರ ₹ 6 ರಿಂದ ₹ 10ಕ್ಕೆ, ಗರಿಷ್ಠ ದರ ₹ 35ರಿಂದ ₹ 45ಕ್ಕೆ ಏರಿಕೆಯಾಗಿದೆ. ನಿಮ್ಮ ಆಡಳಿತ ಹಾಗೂ ವಿತ್ತೀಯ ನಿರ್ವಹಣೆಯ ವೈಫಲ್ಯದ ಹೊರೆಯನ್ನು ಜನರ ಮೇಲೆ ಹಾಕುತ್ತಿದ್ದೀರಿ ಎಂದು ಸಂಸದ ಚೌಟ ಅಸಮಾಧಾನ ಹೊರಹಾಕಿದ್ದಾರೆ.

ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಅನುಕೂಲ ಮಾಡುತ್ತಿದ್ದೇವೆ ಎಂದು ಬೆನ್ನು ತಟ್ಟಿಕೊಳ್ಳುವ ಕಾಂಗ್ರೆಸ್ ಸರ್ಕಾರ, ಮತ್ತೊಂದೆಡೆ ಅದೇ ಜನರ ಜೇಬಿಗೆ ಒಂದರ ಮೇಲೊಂದು ಕತ್ತರಿ ಹಾಕುತ್ತಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ‘ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ’ ಎನ್ನುತ್ತೀರಿ. ಹಾಗಾದರೆ ಜನರಿಗಾಗಿ ನೀವು ಮಾಡುತ್ತಿರುವ ಕೆಲಸಗಳಾದರೂ ಯಾವುವು ಎಂಬುದನ್ನು ತಿಳಿಸಿ ಎಂದು ಕ್ಯಾ. ಚೌಟ ಪತ್ರಿಕಾ ಹೇಳಿಕೆಯಲ್ಲಿ ಸವಾಲು ಹಾಕಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳನ್ನು ಲವ್‌ ಮಾಡಿದ್ದಕ್ಕೆ ಕೆಲಸಗಾರನ ಹತ್ಯೆ
ಡೇಟಿಂಗ್‌ ಆ್ಯಪಲ್ಲಿ ಪರಿಚಯವಾದಯುವಕನ ದರೋಡೆ: ನಾಲ್ವರ ಸೆರೆ