ನೂತನ ಕೃಷಿ ತಂತ್ರಜ್ಞಾನ ಅಳವಡಿಸಿಕೊಳ್ಳಿ

KannadaprabhaNewsNetwork |  
Published : Aug 18, 2025, 12:00 AM IST
57 | Kannada Prabha

ಸಾರಾಂಶ

ಕೃಷಿಯನ್ನು ನಂಬಿದ ರೈತರ ಪರಿಸ್ಥಿತಿ ಇಂದು ತೀರ ಹದಗೆಡುತ್ತಿದ್ದು, ಅವರ ಮಕ್ಕಳು ಕೃಷಿಯನ್ನು ತೊರೆದು ನಗರ ಪ್ರದೇಶದತ್ತ ಬೇರೆ ಉದ್ಯೋಗದ ಕಡೆಗೆ ಮುಖ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಬನ್ನೂರುಕೃಷಿ ವಿಧಾನದಲ್ಲಿ ನೂತನ ತಂತ್ರಜ್ಞಾನಗಳು, ಆವಿಷ್ಕಾರಗಳು ರೂಪುಗೊಳ್ಳುತ್ತಿದ್ದು, ರೈತರು ಹಳೆ ಮಾದರಿ ಕೃಷಿ ವಿಧಾನವನ್ನು ಬಿಟ್ಟು ನೂತನ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಬೆಳೆ ಬೆಳೆಯಬಹುದು. ಆ ಮೂಲಕ ಉತ್ತಮ ಆದಾಯ ಪಡೆದುಕೊಳ್ಳಬಹುದು ಎಂದು ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್. ಶಂಕರೇಗೌಡ ತಿಳಿಸಿದರು.ಪಟ್ಟಣದ ಯಾಚೇನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ವಿಸ್ತರಣಾ ಶಿಕ್ಷಣ ಘಟಕ, ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾದ ಟೊಮೋಟೊ ಬೆಳೆಯ ಕ್ಷೇತ್ರೋತ್ಸವ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕೃಷಿಯನ್ನು ನಂಬಿದ ರೈತರ ಪರಿಸ್ಥಿತಿ ಇಂದು ತೀರ ಹದಗೆಡುತ್ತಿದ್ದು, ಅವರ ಮಕ್ಕಳು ಕೃಷಿಯನ್ನು ತೊರೆದು ನಗರ ಪ್ರದೇಶದತ್ತ ಬೇರೆ ಉದ್ಯೋಗದ ಕಡೆಗೆ ಮುಖ ಮಾಡುತ್ತಿದ್ದಾರೆ. ಆದರೆ ಕೆಲವರು ಕೃಷಿಯಲ್ಲಿ ನೂತನ ತಂತ್ರಜ್ಞಾನ, ನೂತನ ಕೃಷಿಯ ವಿಧಾನವನ್ನು ಅಳವಡಿಸಿಕೊಂಡು ಕೃಷಿಯಲ್ಲಿಯೇ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಯಾರೂ ಕೃಷಿಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೋ ಅಂತಹವರನ್ನು ಭೇಟಿ ನೀಡಿ ಅವರು ಅಳವಡಿಸಿಕೊಂಡ ಕೃಷಿ ವಿಧಾನವನ್ನು ರೈತರು ಅಳವಡಿಸಿಕೊಂಡರೇ ಉತ್ತಮ ಬೆಳೆಯನ್ನು ಬೆಳೆಯಲು, ಕೃಷಿಯಲ್ಲಿ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುತ್ತದೆ ಎಂದರು.ಸಮಾಜ ಸೇವಕ ವೈ.ಎಸ್. ರಾಮಸ್ವಾಮಿ ಮಾತನಾಡಿ, ಕೃಷಿಯ ಜೊತೆಗೆ ರೈತರು ಉಪಕಸುಬುಗಳನ್ನು ರೂಢಿಸಿಕೊಳ್ಳಬೇಕು. ಕೃಷಿಯಲ್ಲಿ ಧೀರ್ಘಕಾಲಿಕ ಬೆಳೆ ಬೆಳೆಯುವುದರ ಜೊತೆಗೆ ವಾಣಿಜ್ಯ ಬೆಳೆಯನ್ನು ಬೆಳೆಯಲು ಸಿದ್ದರಾಗಿರಬೇಕು. ಕೃಷಿಯ ಭೂಮಿಯ ಮಣ್ಣನ್ನು ಪರೀಕ್ಷೆ ಮಾಡಿಸಿ ಅದಕ್ಕೆ ಅನುಗುಣವಾಗಿ ಬೆಳೆಯನ್ನು ಬೆಳೆಯುವ ಪದ್ಧತಿ ರೂಢಿಸಿಕೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡಿದ ಅವರು, ಅಡಿಕೆಯ ಜೊತೆಗೆ ಕಾಳು ಮೇಣಸು, ವೀಳ್ಯದೆಲೆ, ಏಲಕ್ಕಿ ಬೆಳೆಯನ್ನು ಬೆಳೆಯುವುದರಿಂದ ರೈತರಿಗೆ ಉತ್ತಮ ಆದಾಯವು ದೊರೆಯಲಿದೆ ಎಂದರು.ಟೊಮೋಟೊ ಬೆಳೆ ರೈತರಿಗೆ ಲಾಟರಿ ಇದ್ದಂತೆ ಒಮ್ಮೆ ಉತ್ತಮ ಆದಾಯ ದೊರೆತರೆ ಮತ್ತೊಮ್ಮೇ ತೀರಾ ನಷ್ಟವನ್ನುಂಟು ಮಾಡುತ್ತದೆ. ರೈತರು ಮಾರುಕಟ್ಟೆಯನ್ನು ಅವಲಂಬಿಸಿ ಟೊಮೋಟೊವನ್ನು ಬೆಳೆದರೆ ಉತ್ತಮ ಆದಾಯ ನಿರೀಕ್ಷಿಸಬಹುದು. ಟೊಮೋಟೊ ಸಸಿಗಳಲ್ಲಿ ನೂತನವಾದ ಸಸಿಗಳು ಲಭ್ಯವಿದ್ದು ಅವುಗಳನ್ನು ಖರೀದಿ ಮಡುವಂತೆಯೂ ಸಲಹೆ ನೀಡಿದರು. ಆಗಿಂದಾಗ್ಗೆ ಕೃಷಿ ಇಲಾಖೆಗಳಿಗೆ ಭೇಟಿ ನೀಡಿ ರೈತರಿಗೆ ದೊರೆಯುವ ಸೌಲಭ್ಯವನ್ನು ಪಡೆದುಕೊಳ್ಳುವಂತೆ ತಿಳಿಸಿದರು.ಕಾರ್ಯಕ್ರಮದಲ್ಲಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕಿ ಡಾ.ಎಂ.ಆರ್. ಮೌಲ್ಯಾ, ಸಹಾಯಕ ಪ್ರಾಧ್ಯಾಪಕ ಡಾ. ಶಿವಕುಮಾರ್, ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಉಮೇಶ್, ಬನ್ನೂರು ಹೋಬಳಿ ಘಟಕದ ಅಧ್ಯಕ್ಷ ವೈ.ಎ. ಪುಟ್ಟರಾಜು, ಪ್ರಗತಿ ಪರ ರೈತ ಕಾಂತರಾಜು, ಕಾರ್ಯ ನಿರ್ವಹಣಾಅಧಿಕಾರಿ ಕ್ಯಾತೇಗೌಡ ಸೇರಿದಂತೆ ಯಾಚೇನಹಳ್ಳಿ ಗ್ರಾಮಸ್ಥರು, ರೈತ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ