ಕುಕನೂರು: ಪ್ರಧಾನಿ ನರೇಂದ್ರ ಮೋದಿ ಯು-ಟರ್ನ್ ಹೊಡೆಯುತ್ತಾರೆ. ಮೊದಲು ಜಿಎಸ್‌ಟಿ, ಆಧಾರ್ ಕಾರ್ಡ್ ವಿರೋಧಿಸಿದ್ದರು. ಈಗ ಅವರೇ ಬೆಂಬಲಿಸುತ್ತಾರೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಟೀಕಿಸಿದರು.
16ನೇ ಹಣಕಾಸು ಯೋಜನೆಗೆ ಪ್ರತಿ ರಾಜ್ಯದಿಂದ ಒಬ್ಬ ಸದಸ್ಯರ ನೇಮಕ ಮಾಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶೀಘ್ರ ಪತ್ರ ಬರೆಯುತ್ತೇನೆ ಎಂದರು.ಇತ್ತೀಚೆಗೆ ಬಜೆಟ್ ಕುರಿತು ಮೊದಲ ಸಭೆ ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ನಡೆಯಿತು. ಸಿಎಂ ಸೇರಿ ಆರು ಜನ ಮಾತ್ರ ಸಭೆಯಲ್ಲಿ ಇದ್ದೆವು. ಫಸ್ಟ್ ಇಂಪ್ರೆಷನ್ ಇಸ್ ದ ಬೆಸ್ಟ್ ಇಂಪ್ರೆಷನ್ ಎನ್ನುವಂತೆ ಮೊದಲ ಸಭೆಯಲ್ಲಿ ನನ್ನ ಸಲಹೆಗಳಿಗೆ ಸಿಎಂ ಸಿದ್ದರಾಮಯ್ಯ ಶ್ಲಾಘಿಸಿದರು. ಬಜೆಟ್ ತಯಾರಿಕೆಗೆ ಪ್ರತಿ ಹಂತದಲ್ಲೂ ರಾಯರಡ್ಡಿ ಸಲಹೆ ಪಡೆದು ಬಜೆಟ್ ತಯಾರಿಸಿ, ನನ್ನ ಹೊಣೆಗಾರಿಕೆ ಕೆಲಸ ಸಹ ಆತನದೇ ಎಂದು ಹೇಳಿದರು.ನನಗೆ ಹೊಸ ಕಾರು ಬೇಕಿಲ್ಲ, ಹೊಸ ಕಾರಿಗೆ ₹40 ಲಕ್ಷ ಬೇಕು. ನನಗೆ ಸಂಬಳ, ವಸತಿ, ಪೀಠೋಪಕರಣ ಖರ್ಚು ಬೇಡ ಎಂದು ಸಿಎಂಗೆ ಪತ್ರ ಬರೆಯುವೆ ಎಂದರು.