ಮಂಗಳೂರು: ಪ್ರಧಾನಮಂತ್ರಿಯವರು ಮೇ 10ರಂದು ಮಾಡಿದ ಘೋಷಣೆಗಳು ಭಾರತದ ಆರ್ಥಿಕತೆಯನ್ನು ಇನ್ನಷ್ಟು ಬಲಿಷ್ಠ, ಸ್ವಾವಲಂಬಿ ಮತ್ತು ಭವಿಷ್ಯದತ್ತ ದೂರದೃಷ್ಟಿಯ ಕ್ರಮವಾಗಿದೆ. ಜಾಗತಿಕ ಮಟ್ಟದಲ್ಲಿ ಉಂಟಾಗುತ್ತಿರುವ ಅನಿಶ್ಚಿತತೆಗಳ ನಡುವೆಯೂ ಭಾರತ ಆತ್ಮವಿಶ್ವಾಸದಿಂದ ಹಾಗೂ ಯೋಜಿತ ರೀತಿಯಲ್ಲಿ ಮುಂದುವರಿಯುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ ಎಂದು ದ.ಕ. ಜಿಲ್ಲಾ ಬಿಜೆಪಿ ಆರ್ಥಿಕ ಪ್ರಕೋಷ್ಠ ಹೇಳಿದೆ.
ಕಚ್ಚಾ ತೈಲ, ಚಿನ್ನ, ಸಸ್ಯಜನ್ಯ ಎಣ್ಣೆಗಳು ಹಾಗೂ ರಸಗೊಬ್ಬರ ಈ ನಾಲ್ಕು ವಸ್ತುಗಳು ಭಾರತದ ಒಟ್ಟು ಆಮದಿನ ಶೇಕಡಾ 31.1 ರಷ್ಟಿದೆ. ಒಟ್ಟು ಆಮದು ಬಿಲ್‌ನಲ್ಲಿ ಚಿನ್ನ ಮಾತ್ರ ಶೇಕಡಾ 10 ರಷ್ಟಿದೆ. ಭಾರತ ವಿಶ್ವದ ಅತಿ ದೊಡ್ಡ ಚಿನ್ನ ಬಳಕೆದಾರ ರಾಷ್ಟ್ರಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಸುಮಾರು 700 ರಿಂದ 900 ಟನ್ ಚಿನ್ನವನ್ನು ಭಾರತ ಆಮದು ಮಾಡಿಕೊಳ್ಳುತ್ತದೆ ಹಾಗೂ ಇದಕ್ಕಾಗಿ 72 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ವೆಚ್ಚವಾಗುತ್ತದೆ ಎಂದರು.2024-25ನೇ ಹಣಕಾಸು ವರ್ಷದಲ್ಲಿ ಭಾರತದ ವ್ಯಾಪಾರ ಕೊರತೆ 95 ಬಿಲಿಯನ್ ಡಾಲರ್ ಆಗಿದ್ದು , 2025-26 ರಲ್ಲಿ 119 ಬಿಲಿಯನ್ ಡಾಲರ್‌ಗೆ ಏರಿದೆ. ಹಾಗೆಯೇ ಚಾಲ್ತಿ ಖಾತೆ ಕೊರತೆ 88 ಬಿಲಿಯನ್ ಡಾಲರ್ ಗೆ ಏರಿದ್ದು ಜಿಡಿಪಿಯ ಶೇ. 2.1 ಆಗಿದೆ. ಈ ಕೊರತೆಯನ್ನು ಜಿಡಿಪಿಯ ಶೇ. 1 ಕ್ಕಿಂತ ಕಡಿಮೆ ಇಳಿಸುವ ಅಗತ್ಯತೆ ಇದೆ. ಅದೇ ರೀತಿ ಚಿನ್ನದ ಆಮದು ಶೇ. 30-40 ರಷ್ಟು ಕುಸಿದರೂ ಸಹ 20-25 ಬಿಲಿಯನ್ ಡಾಲರ್‌ಗಳನ್ನು ಉಳಿಸಬಹುದು. ಶೇ.50ರ ಕುಸಿತವು 36 ಬಿಲಿಯನ್ ಡಾಲರ್‌ಗಳನ್ನು ಉಳಿಸಬಹುದು ಎಂದರು.
ದೇಶದ ಅಡುಗೆ ಎಣ್ಣೆಯ ಬೇಡಿಕೆಯ ಸುಮಾರು 55 ರಿಂದ 60 ಶೇಕಡಾ ವಿದೇಶಗಳಿಂದ ಆಮದು ಆಗುತ್ತಿದೆ. ವಿಶೇಷವಾಗಿ Palm Oil, Sunflower Oil ಮತ್ತು Soybean Oil ಮೇಲಿನ ಅವಲಂಬನೆ ಹೆಚ್ಚಿದೆ. ಆದರೆ ಕೇಂದ್ರ ಸರ್ಕಾರದ National Edible Oil Mission ಮೂಲಕ ದೇಶೀಯ ಎಣ್ಣೆ ಬೀಜ ಉತ್ಪಾದನೆಯನ್ನು ಹೆಚ್ಚಿಸುವ ಕಾರ್ಯ ವೇಗವಾಗಿ ನಡೆಯುತ್ತಿದೆ.ಪೆಟ್ರೋಲ್ ಮತ್ತು ಡೀಸೆಲ್ ವಿಷಯದಲ್ಲಿ ಭಾರತ ತನ್ನ ಅಗತ್ಯ ಕಚ್ಚಾ ತೈಲದ 85 ಶೇಕಡಕ್ಕೂ ಹೆಚ್ಚು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. Electric Vehicle ಕ್ಷೇತ್ರದಲ್ಲಿ ಭಾರತ ವೇಗವಾಗಿ ಬೆಳೆಯುತ್ತಿದ್ದು, Charging Infrastructure, Battery Manufacturing ಮತ್ತು Renewable Energy ಕ್ಷೇತ್ರಗಳಿಗೆ ಭಾರಿ ಹೂಡಿಕೆ ಬರುತ್ತಿದೆ. Solar Energy ಮತ್ತು Green Hydrogen ಕ್ಷೇತ್ರಗಳಲ್ಲಿ ಭಾರತ ಜಾಗತಿಕ ನಾಯಕತ್ವದತ್ತ ಹೆಜ್ಜೆ ಇಡುತ್ತಿದೆ. ರಸಗೊಬ್ಬರ ಕ್ಷೇತ್ರದಲ್ಲಿಯೂ ಭಾರತ ಸ್ವಾವಲಂಬನೆಯತ್ತ ಸಾಗುತ್ತಿದೆ. ವಿಶೇಷವಾಗಿ IFFCO ಅಭಿವೃದ್ಧಿಪಡಿಸಿರುವ Nano Urea ಭಾರತಕ್ಕೆ ಹೊಸ ಆಶಾಕಿರಣವಾಗಿದೆ ಎಂದರು.ಇದರಿಂದಾಗಿ ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ತಮ್ಮ ಹಣವನ್ನು ಹಿಂಪಡೆಯಬಹುದು. ದೇಶೀಯವಾಗಿ ಬೆಲೆ ಏರಿಕೆಯಾಗಲಿದೆ. ರುಪಾಯಿ ಮೌಲ್ಯ ಕುಸಿದಾಗ, ಭಾರತದ ಸರಕು ಮತ್ತು ಸೇವೆಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಗ್ಗವಾಗುತ್ತವೆ. ಇದು ಐಟಿ (IT), ಫಾರ್ಮಾ (ಔಷಧ) ಮತ್ತು ಜವಳಿ ಉದ್ಯಮಗಳಿಗೆ ಹೆಚ್ಚಿನ ರಫ್ತು ಆದೇಶಗಳನ್ನು ತರಲಿದೆ. ವಿದೇಶದಲ್ಲಿರುವ ಭಾರತೀಯರು ತಮ್ಮ ಹಣವನ್ನು ಭಾರತಕ್ಕೆ ಕಳುಹಿಸಿದಾಗ ಹೆಚ್ಚಿನ ರುಪಾಯಿ ಮೌಲ್ಯವನ್ನು ಪಡೆಯುತ್ತಾರೆ. ಆಮದು ದುಬಾರಿಯಾಗುವುದರಿಂದ ಸ್ಥಳೀಯವಾಗಿ ವಸ್ತುಗಳನ್ನು ತಯಾರಿಸಲು (Make in India) ಪ್ರೋತ್ಸಾಹ ಸಿಗುತ್ತದೆ ಎಂದರು.