ಮುಂಡರಗಿ: ಪ್ರತಿ ತಿಂಗಳು ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ.ಸಭೆಯ ಪ್ರಗತಿ ವರದಿ ನೀಡುವಾಗ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಇರುವ ಕಾಮಗಾರಿಗಳ ಬಗ್ಗೆ ಪ್ರಗತಿ ವರದಿ ಸಲ್ಲಿಸುವಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಅಧಿಕಾರಿ ಮಾಹಿತಿ ನೀಡಿ, ಬಿತ್ತನೆ ಬೀಜಗಳ ಪೂರೈಕೆ, ಕೃಷಿ ಯಾಂತ್ರಿಕರಣ, ಕೃಷಿ ಸಂರಕ್ಷಣೆ ಯೋಜನೆ, ಕೃಷಿ ಭಾಗ್ಯ ಯೋಜನೆ, ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆಗಳಡಿ ಎಸ್.ಸಿ.ಎಸ್.ಪಿ ಯಲ್ಲಿ ಒಟ್ಟು ₹74.515 ಬಿಡುಗಡೆ ಆಗಿ ಖರ್ಚು ಕೂಡ ಆಗಿದೆ. ಟಿ.ಎಸ್.ಪಿ ಯಲ್ಲಿ ಒಟ್ಟು 27.22 ಬಿಡುಗಡೆಯಾಗಿದ್ದು ಇದು 100ಕ್ಕೆ 100ರಷ್ಟು ಖರ್ಚಾಗಿದೆ ಎಂದು ವಿವರಿಸಿದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಮಾಹಿತಿ ನೀಡಿ, ಸಿ.ಎಚ್, ಡಿ.ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆ ಮಧುವನ ಮತ್ತು ಜೇನು ಸಾಕಾಣಿಕೆ ಪಿಎಂಕೆಎಸ್ ವೈ ಯೋಜನೆ ಸೂಕ್ಷ್ಮ ನೀರಾವರಿ ಪದ್ಧತಿ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಕೇಂದ್ರ ಪುರಸ್ಕೃತ ಯೋಜನೆಗಳಾದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ, ಪಿಎಂಕೆ ಎಸ್ ವೈ ಯೋಜನೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಕೃಷಿ ಯಾಂತ್ರಿಕ ಯೋಜನೆ, ತಾಳೆ ಬೆಳೆ ಅಭಿವೃದ್ಧಿ ಯೋಜನೆಯಡಿ ಎಸ್.ಸಿ.ಎಸ್.ಪಿ. ಹಾಗೂ ಟಿಎಸ್ಪಿ ಯೋಜನೆ ಅಡಿ ಒಟ್ಟು ₹2.30 ಕೋಟಿ ಬಿಡುಗಡೆ ಆಗಿ ₹2.17 ಕೋಟಿ ಖರ್ಚಾಗಿದೆ.ಅತ್ತಿಕಟ್ಟಿ ಗ್ರಾಮದ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಶಾಲೆಯ ಶೌಚಾಲಯ ಮುಕ್ತಾಯಗೊಳಿಸುವಂತೆ ಸಂಬಂಧಪಟ್ಟ ಅಧಿಕಾಗಳಿಗೆ ಸೂಚಿಸಿ, ಕೆಆರ್ ಐ ಡಿ ಎಲ್ ಅಧಿಕಾರಿಗಳ ಪರ ಬಂದ ಅಧೀನ ಅಧಿಕಾರಿಗಳಿಗೆ ಕಕ್ಕೂರು ತಾಂಡಾದ ಅಂಗನವಾಡಿ ಕಟ್ಟಡದಲ್ಲಿ ಮೂಲಭೂತ ಸೌಕರ್ಯಗಳಾದ ಅಡುಗೆ ಮನೆಯಲ್ಲಿ ಗ್ಯಾಸ್ ಕಟ್ಟೆ ಮಕ್ಕಳ ಸ್ನೇಹಿ ಶೌಚಾಲಯ ನೀರಿನ ವ್ಯವಸ್ಥೆ ಬ್ಲಾಕ್ ಬೋರ್ಡ್, ಪೇಂಟ್ ಇವುಗಳನ್ನು ಮಾಡಿಸಿಕೊಡುವಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಅರುಣಾ ಸೋರಗಾಂವಿ ಸೂಚಿಸಿದರು.
ಎಸ್ಸಿ ಎಸ್‌ಟಿ ಮಕ್ಕಳಿಗಾಗಿ ಸಮವಸ್ತ್ರ ಶೂ ಸಾಕ್ಸ್ ಪುಸ್ತಕಗಳನ್ನು ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅನುಮತಿ ಪಡೆಯದೇ ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡುವಂತೆ ಸೂಚಿಸಿ ಸಭೆಯಲ್ಲಿ ಹಾಜರಿದ್ದ ಎಲ್ಲ ಅಧಿಕಾರಿಗಳಿಗೆ ಎಸ್.ಸಿ.ಎಸ್.ಪಿ. ಹಾಗೂ ಟಿ.ಎಸ್.ಪಿ.ಯೋಜನೆಯಡಿಯಲ್ಲಿ ಬಿಡುಗಡೆಯಾದ ಅನುದಾನವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರಿಗಾಗಿ ಮಾತ್ರ ಬಳಕೆ ಮಾಡಬೇಕು. ಒಂದು ವೇಳೆ ಬೇರೆ ಕಡೆ ಅನುದಾನ ಬಳಕೆಯಾದ ಬಗ್ಗೆ ದೂರು ಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸೂಚಿಸಿದರು. ಸಭೆಯಲ್ಲಿ ಎಸ್.ಸಿ.ಎಸ್.ಪಿ. ಹಾಗೂ ಟಿ.ಎಸ್.ಪಿ. ಸಂಬಂಧಿಸಿದ ಎಲ್ಲ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.