ನಿರ್ಮಾಣ ಕ್ಷೇತ್ರದಲ್ಲಿ ಪರಿಸರ ಸ್ನೇಹಿಗೆ ಆದ್ಯತೆ ನೀಡಿ

KannadaprabhaNewsNetwork |  
Published : Jul 11, 2026, 12:15 AM IST
್ಿ್ಿ್ಿ್ಿ | Kannada Prabha

ಸಾರಾಂಶ

ಅಮಾನಿಕೆರೆ ಗಾಜಿನ ಮನೆಯಲ್ಲಿ ತುಮಕೂರು ಎಂಜಿನಿಯರ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಬಿಲ್ಡ್ ಟೆಕ್ 2026

ಕನ್ನಡಪ್ರಭ ವಾರ್ತೆ ತುಮಕೂರುನಿರ್ಮಾಣ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ಒಂದೇ ಸೂರಿನಡಿ ಎಲ್ಲಾ ರೀತಿಯ ವಸ್ತುಗಳ ವೀಕ್ಷಣೆ ಮತ್ತು ಮಾಹಿತಿ ಸಂಗ್ರಹಕ್ಕೆ ಅವಕಾಶ ಕಲ್ಪಿಸುವ ಮೂಲಕ ತುಮಕೂರು ಎಂಜಿನಿಯರ್ಸ್ ಅಸೋಸಿಯೇಷನ್ ಶ್ಲಾಘನೀಯ ಕೆಲಸ ಮಾಡಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ ತಿಳಿಸಿದ್ದಾರೆ. ನಗರದ ಅಮಾನಿಕೆರೆ ಗಾಜಿನ ಮನೆಯಲ್ಲಿ ತುಮಕೂರು ಎಂಜಿನಿಯರ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಬಿಲ್ಡ್ ಟೆಕ್ 2026 ಉದ್ಘಾಟಿಸಿ ಮಾತನಾಡಿ, ಸುಮಾರು 100 ಕ್ಕೂ ಹೆಚ್ಚು ಸ್ಟಾಲ್‌ಗಳನ್ನು ತೆರೆದು, ನಿರ್ಮಾಣಕ್ಕೆ ಬೇಕಾದ ಎಲ್ಲಾ ವಸ್ತುಗಳ ಬಗ್ಗೆ ಒಂದೇ ಕಡೆ ಮಾಹಿತಿ ನೀಡುವ ಮೂಲಕ ಸಾರ್ವಶಜನಿಕರು ಹಾಗೂ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಅನುಕೂಲ ಕಲ್ಪಿಸಿರುವುದು ಒಳ್ಳೆಯದು ಎಂದರು.ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಗುಣಮಟ್ಟದ ನಿರ್ಮಾಣಕ್ಕಷ್ಟೇ ಮಹತ್ವ ನೀಡದೆ, ಅದು ಪರಿಸರ ಸ್ನೇಹಿಯಾಗಿರುವಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ. ಈ ಕ್ಷೇತ್ರದಲ್ಲಿ ಅಧುನಿಕ ತಂತ್ರಜ್ಞಾನದ ಪರಿಣಾಮವಾಗಿ ಸಾಕಷ್ಟು ಬದಲಾವಣೆಗಳಾಗಿವೆ. ಇವುಗಳ ಬಗ್ಗೆ ಕ್ಷೇತ್ರದಲ್ಲಿ ಬದುಕು ಕಂಡುಕೊಂಡಿರುವ ಎಲ್ಲಾ ಹಂತದವ ಜನರಿಗೂ ಮಾಹಿತಿ ಇದ್ದರೆ ಒಳ್ಳೆಯದು. ಈ ನಿಟ್ಟಿನಲ್ಲಿ ಸಾರ್ವಜನಿಕರು ಮೂರು ದಿನಗಳ ಕಾಲದ ಈ ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುವಂತೆ ಶುಭ ಕಲ್ಯಾಣ್ ಸಲಹೆ ನೀಡಿದರು.ಕಾಪ್‌ರಾಡ್ ಇಂಡಸ್ಟ್ರೀಯ ಮಾಲೀಕ ಎಚ್.ಜಿ.ಚಂದ್ರಶೇಖರ ಮಾತನಾಡಿ, ಈ ವಸ್ತು ಪ್ರದರ್ಶನದಲ್ಲಿ ಮಾಹಿತಿಗಳ ಭಂಡಾರವೇ ಇದೆ.ಈ ಹಿಂದೆ ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ಇಂತಹ ವಸ್ತು ಪ್ರದರ್ಶನ ಕಾಣಲು ಸಿಗುತ್ತಿತ್ತು.ಆದರೆ ತುಮಕೂರು ಎಂಜಿನಿಯರ್ಸ್ ಅಸೋಸಿಯೇಷನ್ ಕಳೆದ 20 ವರ್ಷಗಳಿಂದಲೂ ಪ್ರತಿ ಎರಡು ವರ್ಷಕ್ಕೊಮ್ಮೆ ಆಯೋಜಿಸುವ ಮೂಲಕ ಇಲ್ಲಿನ ಜನರನ್ನು ಅಧುನಿಕ ತಂತ್ರಜ್ಞಾನಕ್ಕೆ ತೆರೆದುಕೊಳ್ಳುವಂತೆ ಮಾಡಿದೆ.ಇದಕ್ಕಾಗಿ ಎಂಜಿನಿಯರ್ಸ್ ಅಸೋಸಿಯೇಷನ್ ನವರನ್ನು ಅಭಿನಂದಿಸುತ್ತೇನೆ.ತಂತ್ರಜ್ಞಾನ ಬಳಕೆ ಮಾಡಿಕೊಂಡು ಕಟ್ಟಡ ಕಟ್ಟುವಲ್ಲಿ ಚೀನಿಯರು ನಿಸ್ಸೀಮರು.ಅವರಿಂದ ನಮ್ಮವರು ಕಲಿಯುವಂತಹದ್ದು ಬಹಳಷ್ಟಿದೆ ಎಂದರು.ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ವಸ್ತುಗಳು ಚೀನಾದಿಂದ ರಫ್ತಾಗುತ್ತವೆ.ಅದರಲ್ಲಿ ಬಹುತೇಕ ವಸ್ತುಗಳನ್ನು ಭಾರತೀಯರು ಆಮದು ಮಾಡಿಕೊಳ್ಳುತ್ತಾರೆ. ನರ್ಮಾಣ ಕ್ಷೇತ್ರದಲ್ಲಿ ನಾವುಗಳು ಸ್ವಾವಲಂಬಿಗಳಾಗುವುದನ್ನು ಕಲಿಯಬೇಕು. ತಂತ್ರಜ್ಞಾನವನ್ನು ಹೆಚ್ಚಿನ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.ಸಿದ್ದಾರ್ಥ ಮ್ಯಾನೇಜ್ ಮೆಂಟ್ ಕಾಲೇಜಿನ ಪ್ರಾಂಶುಪಾಲರಾದ ಡಾ.ನಜ್ಮತ್‌ವುಲ್ಲಾ ಮಾತನಾಡಿ,ನಿರ್ಮಾಣ ಕ್ಷೇತ್ರದಲ್ಲಿ ದಿನಕ್ಕೊಂದು ಅವಿಷ್ಕಾರ ನಡೆಯುತ್ತಿದೆ. ಅದು ಬಹುಬೇಗ ಜನರು ಅಳವಡಿಸಿಕೊಳ್ಳುತ್ತಿದ್ದಾರೆ. ಗುಣಮಟ್ಟದ ಕಟ್ಟಡದ ಜೊತೆಗೆ, ಪರಿಸ್ನೇಹಿ ಹಾಗೂ ಗಟ್ಟಿಮುಟ್ಟಾದ ಕಟ್ಟಡಗಳು ನಮ್ಮ ಗುರಿಯಾಗಬೇಕಿದೆ. ಮೂರು ದಿನಗಳ ಈ ಬಿಲ್ಡ್ ಟೆಕ್-2026 ವಸ್ತು ಪ್ರರ್ಶೇನವನ್ನು ಎಲ್ಲಾ ವರ್ಗದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭೇಟಿ ನೀಡಿ ಮಾಹಿತಿ ಪಡೆದರೆ ಉತ್ತಮ ಎಂದರು.ಸಾನಿಧ್ಯ ವಹಿಸಿದ್ದ ರಾಮಕೃಷ್ಣ-ವಿವೇಕಾನಂದ ಆಶ್ರಮದ ಡಾ.ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ನಿರ್ಮಾಣ ಕ್ಷೇತ್ರ ಇಂದು ಇಡೀ ವಿಶ್ವದಲ್ಲಿಯೇ ಅತಿ ದೊಡ್ಡ ಉದ್ಯಮವಾಗಿ ಬೆಳೆದಿದೆ.ಆದರೆ ಸಂಘಟನೆಯ ಕೊರತೆಯಿದೆ. ಅಸಂಘಟಿತ ವಲಯದಲ್ಲಿರುವ ಈ ಕ್ಷೇತ್ರ ಸಂಘಟಿತ ವಲಯಕ್ಕೆ ಸರ್ಪದಡೆಗೊಂಡರೆ, ಇಲ್ಲಿ ಕೆಲಸ ಮಾಡುವ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ ಎಂದರು.ತುಮಕೂರು ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಎನ್.ವಿ.ರಾಮಮರ್ತಿ ಮಾತನಾಡಿ,ಇಂಜಿನಿಯರ್ಸ್ ಅಸೋಸಿಯೇಷನ್ ತುಮಕೂರು ಮತ್ತು ಯು ಎಸ್ ಕಮ್ಯುನಿಕೇಷನ್ಸ್ ಬೆಂಗಳೂರು ಇವರ ಸಹಯೋಗದಲ್ಲಿ ಜರಗುವ ಈ ಕಾರ್ಯತಕ್ರಮ ಕಳೆದ 20 ವರ್ಷಗಳಿಂದ ನಿರಂತರವಾಗಿ ಪ್ರತಿ ಎರಡು ವರ್ಷಕ್ಕೆ ಒಂದು ಬಾರಿ ನಡೆಯುತ್ತಾ ಬಂದಿದೆ ಎಂದರುಎಂ.ಡಿ. ಟಿ.ಎನ್.ಚನ್ನಬಸವಪ್ರಸಾದ್ ಮಾತನಾಡಿದರು. ವೇದಿಕೆಯಲ್ಲಿ ಇಂಜಿನಿಯರ್ಸ್ ಅಸೋಸಿಯೇಷನ್ ಕಾರ್ಯಿದರ್ಶಿ ಎಂ.ಡಿ.ರಾಜು, ಸಹಕಾರ್ಯಳದರ್ಶಿ ಮಂಗಳಕುಮಾರ್, ನಿರ್ದೇಶಕರಾದ ಶ್ರೀಕಂಠಸ್ವಾಮಿ, ರಾಜಶೇಖರ್, ಸತೀಶ್, ಉಮಾಪತಿ, ದಿನೇಶ್, ರವಿಕುಮಾರ್,ಕಲ್ಮೇಶ್ ತೊಟದ್ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಲಹರಣವಾಗುತ್ತಿದೆ ಹೊರತು ಪ್ರಗತಿ ಇಲ್ಲ
ಬಿಸಿಯೂಟ ಕಾರ್ಮಿಕರ ವೇತನ ಹೆಚ್ಚಿಸುವಂತೆ ಅಕ್ಷರ ದಾಸೋಹ ನೌಕರರ ಸಂಘದಿಂದ ಪ್ರತಿಭಟನೆ