ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಆವರಣದಲ್ಲಿ ಸಜ್ಜಲಶ್ರೀ ನರ್ಸಿಂಗ್ ಕಾಲೇಜಿನಲ್ಲಿ ಸ್ಥಾಪಿಸಿರುವ ರಾಷ್ಟ್ರೀಯ ರೆಫರೆನ್ಸ್ ಸಿಮ್ಯುಲೇಶನ್ ಕೇಂದ್ರ ಹಾಗೂ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಪ್ರಮಾಣೀಕರಣ ಕೇಂದ್ರ ಉದ್ಘಾಟಿಸಿ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನರ್ಸಿಂಗ್ ಶಿಕ್ಷಣದಲ್ಲಿ ತಂತ್ರಜ್ಞಾನ ಬಳಕೆ ಬಹುದಿನಗಳ ಕನಸಾಗಿತ್ತು. ಈಗ ಸಿಮ್ಯುಲೇಶನ್ ಕೇಂದ್ರದ ಸ್ಥಾಪನೆಯ ಮೂಲಕ ಆ ಕನಸು ನನಸಾಗುತ್ತಿದೆ. ಬಿವಿವಿ ಸಂಘದಲ್ಲಿ ಅತ್ಯಂತ ಆಧುನಿಕ ಸಿಮ್ಯುಲೇಶನ್ ಕೇಂದ್ರ ಸ್ಥಾಪಿಸುವುದರ ಮೂಲಕ ಡಾ.ವೀರಣ್ಣ ಚರಂತಿಮಠ ಅವರು ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಿದ್ದಾರೆ. ಈ ಕೇಂದ್ರದಲ್ಲಿ ತರಬೇತಿ ಹೊಂದಿ ನರ್ಸಿಂಗ್ ವೃತ್ತಿಪರರು ವೈದ್ಯಕೀಯ ಕ್ಷೇತ್ರ ಬಲಪಡಿಸಲಿ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಭಗವಾನ ಬಿ.ಸಿ., ಭಾರತ ನರ್ಸಿಂಗ್ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದೆ. ಈ ಕ್ಷೇತ್ರದಲ್ಲಿ ಸಂಶೋಧನೆ ಪ್ರಗತಿಯಲ್ಲಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಪರಿಣಿತರನ್ನು ರೂಪಿಸಲು ತರಬೇತಿಗಾಗಿ ಸಿಮ್ಯುಲೇಶನ್ ಕೇಂದ್ರಗಳ ಅಗತ್ಯವಿದ್ದು, ವಿಶೇಷವಾಗಿ ನಸಿಂಗ್ ಸಿಬ್ಬಂದಿಗೆ ತರಬೇತಿ ನೀಡಬೇಕಾಗಿದೆ ಎಂದ ಅವರು, ಗುಣಮಟ್ಟದ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಡಾ.ವೀರಣ್ಣ ಚರಂತಿಮಠ ಅವರು ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಅಭಿವೃದ್ಧಿಪಡಿಸುತ್ತಿರುವುದನ್ನು ಶ್ಲಾಘಿಸಿದರು.ಅಧ್ಯಕ್ಷತೆ ವಹಿಸಿದ್ದ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಸಿ.ಚರಂತಿಮಠ ಮಾತನಾಡಿ, ಕೋವಿಡ್ ಸಂದರ್ಭ ನರ್ಸಿಂಗ್ ಸಿಬ್ಬಂದಿಯ ಸೇವೆ ಅವಿಸ್ಮರಣೀಯ. ದೇಶದ ವಿವಿಧ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನರ್ಸಿಂಗ್ ವೃತ್ತಿಪರರು ಈ ಸಿಮ್ಯುಲೇಶನ್ ಕೇಂದ್ರದಲ್ಲಿ ತರಬೇತಿ ಹೊಂದಲು ಅವಕಾಶವಿದೆ. ಈ ಕೇಂದ್ರದ ಸ್ಥಾಪನೆಗಾಗಿ ಅಗತ್ಯ ಮಾರ್ಗದರ್ಶನ ನೀಡಿದ ಭಾರತೀಯ ನರ್ಸಿಂಗ್ ಮಂಡಳಿ, ಜಪೈಗೊ ಹಾಗೂ ಲ್ಯಾರ್ಡಲ್ ಮೆಡಿಕಲ್ ಸಂಸ್ಥೆಗಳ ಪ್ರತಿನಿಧಿಗಳಿಗೆ ಕೃತಜ್ಞತೆಗಳು ಸಲ್ಲಿಸಿದರು.
ಒಡಂಬಡಿಕೆ: ಇದೇ ವೇಳೆ ನರ್ಸಿಂಗ್ ಜ್ಞಾನ ಸಂಶೋಧನೆ ಹಾಗೂ ತರಬೇತಿಗಾಗಿ ಬಿವಿವಿ ಸಂಘ, ಭಾರತೀಯ ನರ್ಸಿಂಗ್ ಮಂಡಳಿ, ಜಪೈಗೊ ಮತ್ತು ಲ್ಯಾರ್ಡಲ್ ಮೆಡಿಕಲ್ ನಡುವೆ ಒಡಂಬಡಿಕೆ ಪತ್ರವನ್ನು ವಿನಿಮಯ ಮಾಡಿಕೊಳ್ಳಲಾಯಿತು.
ಉದ್ಘಾಟನೆಗೊಂಡ ರಾಷ್ಟ್ರೀಯ ರೆಫರೆನ್ಸ್ ಸಿಮ್ಯುಲೇಶನ್ ಕೇಂದ್ರದಲ್ಲಿ 7ರವರೆಗೆ ಮೂರು ದಿನಗಳ ಕಾಲ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದ್ದು, ಇಂಗ್ಲೆಂಡ್, ಆಸ್ಟ್ರೇಲಿಯಾ, ಸಿಂಗಪುರ ದೇಶಗಳಿಂದ ನರ್ಸಿಂಗ್ ವಿಜ್ಞಾನ ತಜ್ಞರು ವಿಶೇಷ ಉಪನ್ಯಾಸ ಹಾಗೂ ಶಿಬಿರಾರ್ಥಿಗಳಿಗೆ ತರಬೇತಿ ನೀಡುವರು. ಕರ್ನಾಟಕ ಮತ್ತು ವಿವಿಧ ರಾಜ್ಯಗಳಿಂದ ಸಾವಿರ ನರ್ಸಿಂಗ್ ಸಿಬ್ಬಂದಿ ತರಬೇತಿ ಪಡೆಯಲು ಆಗಮಿಸಲಿದ್ದಾರೆ.
ಜಾಸ್ಮಿನ್ ಡಿಸೋಜ ನಿರೂಪಿಸಿದರು. ಡಾ.ಶ್ರೀಹರ್ಷ ವಂದಿಸಿದರು. ಬಿವಿವಿ ಸಂಘದಲ್ಲಿ ಅತ್ಯಂತ ಆಧುನಿಕ ಸಿಮ್ಯುಲೇಶನ್ ಕೇಂದ್ರ ಸ್ಥಾಪಿಸುವುದರ ಮೂಲಕ ಡಾ.ವೀರಣ್ಣ ಚರಂತಿಮಠ ಅವರು ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಿದ್ದಾರೆ.
- ಡಾ.ಭಗವಾನ ಬಿ.ಸಿ., ಉಪಕುಲಪತಿಗಳು, ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಬೆಂಗಳೂರು