ಕನ್ನಡಪ್ರಭ ವಾರ್ತೆ ಸೂಲಿಬೆಲೆ
ಸೂಲಿಬೆಲೆ ಹೋಬಳಿ ವ್ಯಾಪ್ತಿಯ ನಾನಾ ಗ್ರಾಮಗಳಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸೂಲಿಬೆಲೆ ಹೋಬಳಿ ವ್ಯಾಪ್ತಿಯ ಚೀಮಸಂದ್ರ ಗ್ರಾಮದಲ್ಲಿ ಸುಮಾರು 25 ಲಕ್ಷ ರು.ರಸ್ತೆ ಕಾಮಗಾರಿ, ಬಾವಾಪುರ ಗ್ರಾಮದಲ್ಲಿ ರಸ್ತೆ ನಿರ್ಮಾಣ25 ಲಕ್ಷ ರು. ಟಿ.ಅಗ್ರಹಾರ ಗ್ರಾಮದಲ್ಲಿ ರಸ್ತೆ ನಿರ್ಮಾಣ 25 ಲಕ್ಷ ರು., ಗುಳ್ಳಹಳ್ಳಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ 25 ಲಕ್ಷ ರು., ಮುತ್ತಕದಹಳ್ಳಿ, ಗ್ರಾಮದಲ್ಲಿ 25 ಲಕ್ಷ ರು., ಬೀಮಕನಹಳ್ಳಿ ಗ್ರಾಮದಲ್ಲಿ 50 ಲಕ್ಷ ರು. ರಸ್ತೆ ಕಾಮಗಾರಿ ಈ-,ಮುತ್ಸಂದ್ರ ಗ್ರಾಮದಲ್ಲಿ 20 ಲಕ್ಷ ರು. ಕಾಮಗಾರಿ,ಹಾಗೂ ನಗರೇನಹಳ್ಳಿ ಗ್ರಾಮಗಳಲ್ಲಿ 30 ಲಕ್ಷ ರು. ರಸ್ತೆ ಕಾಮಗಾರಿ, ಒಟ್ಟು 2.25 ಕೋಟಿ ರು.ವೆಚ್ಚದ ಕಾಂಕ್ರೀಟ್ ರಸ್ತೆಗಳ ಅಭಿವೃದ್ಧಿ ಕಾಮಗಾರಿ ನೆರವೇರಿಸಲಾಗಿದೆ ಎಂದರು.
ಬಮೂಲ್ ನಿರ್ದೇಶಕ ಬಿ.ವಿ.ಸತೀಶಗೌಡ ಮಾತನಾಡಿ, ದೊಡ್ಡಹರಳಗೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ತಮ್ಮರಸನಹಳ್ಳಿ, ಟಿ.ಅಗ್ರಹಾರ, ಬಾವಾಪುರ ಗ್ರಾಮಗಳಲ್ಲಿ ಆಹಾರ ನಾಗರಿಕ ಇಲಾಖೆಯ ವತಿಯಿಂದ ನೂತನವಾಗಿ ಅರ್ಜಿ ಹಾಕಲಾಗಿದ್ದ 100 ಫಲಾನುಭವಿಗಳಿಗೆ ಹೊಸ ಪಡಿತರ ಚೀಟಿಗಳ ವಿತರಣೆ ಮಾಡಿದ್ದೇವೆ ಎಂದರು.-ಸೂಲಿಬೆಲೆ ಹೋಬಳಿ ದೊಡ್ಡಹರಳಗೆರೆ ಹಾಗೂ ಕಂಬಳೀಪುರ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಆರ್‌ಡಿಪಿಆರ್ (ಮುಖ್ಯಮಂತ್ರಿ) ಅನುದಾನ ,೩೦೫೪ ಯೋಜನೆ ಅನುದಾನ ಎಸ್.ಸಿ.ಪಿ/ಟಿಎಸ್‌ಪಿ ಅನುದಾನ ಸೇರಿದಂತೆ ೨.೨೫ ಕೋಟಿ ವೆಚ್ಚದ ಅನುದಾನವನ್ನು ಬಳಕೆ ಮಾಡಿಕೊಳ್ಳಲಾಗಿದೆ.
ದೊಡ್ಡಹರಳಗೆರೆ ಗ್ರಾಮಪಂಚಾಯಿತಿ ವ್ಯಾಪ್ತಿ ಹಾಗೂ ಕಂಬಳೀಪುರ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ತುಂಬಾ ಅಗತ್ಯವಿದ್ದ ರಸ್ತೆ ಕಾಮಗಾರಿಗೆ ಭೂಮಿಪೂಜೆ ಮಾಡಲಾಗಿದೆ. ಹೊಸ ಪಡಿತರ ಚೀಟಿಗಳನ್ನು ವಿತರಣೆ ಮಾಡಲಾಗಿದೆ. ಬಿ.ವಿ.ಸತೀಶಗೌಡ, ಬಮೂಲ್ ನಿರ್ದೇಶಕರು.