ಅಳ್ನಾವರ:
ಕಾರ್ಮಿಕರೊಂದಿಗೆ ಚರ್ಚಿಸಿದ ಅಧಿಕಾರಿಗಳು, ಮುಂದಿನ ದಿನಗಳಲ್ಲಿ ಜನರಿಗೆ ಇನ್ನೂ ಹೆಚ್ಚಿನ ಉದ್ಯೋಗ ನೀಡಲು ಹೊಸ ಕಾಮಗಾರಿ ಕ್ರಿಯಾಯೋಜನೆ ತಯಾರಿಸಲಾಗುತ್ತಿದೆ. ಜಿಲ್ಲೆಯಲ್ಲಿಯೇ ಅತಿ ದೊಡ್ಡ ಕೆರೆಯಾಗಿರುವ ಹುಲಿಕೇರಿ ಕೆರೆಯ ಸಮಗ್ರ ಅಭಿವೃದ್ಧಿಗೆ ಗಮನ ಹರಿಸಲಾಗುವುದು. ಜತೆಗೆ ಪ್ರವಾಸಿ ತಾಣವನ್ನಾಗಿಸಲು ಅಗತ್ಯ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ತಿಳಿಸಿದರು.
ಗ್ರಾಮದಿಂದ ಕೆರೆ ವರೆಗಿನ ಕಚ್ಚಾ ರಸ್ತೆಯನ್ನು ಸಂಚಾರಕ್ಕೆ ಯೋಗ್ಯವಾಗುವ ರೀತಿ ರಸ್ತೆ ನಿರ್ಮಾಣಕ್ಕೆ ಜಿಪಂದಿಂದ ಅನುದಾನ ಒದಗಿಸಲು ಸೂಚಿಸಿದ ಜಿಲ್ಲಾಧಿಕಾರಿ, ಕಾರ್ಮಿಕರ ಸಮಸ್ಯೆ ಆಲಿಸಿ ಅಶಕ್ತ ಕಾರ್ಮಿಕರಿಗೆ ಉಳಿದವರು ಸಹಾಯ ಮಾಡುವಂತೆ ಸೂಚಿಸಿದರು. ಸ್ಥಳೀಯವಾಗಿದ್ದ ಕೂಲಿ ಕಾರ್ಮಿಕರು ಮಾತನಾಡಿ, ಈ ಯೋಜನೆ ನಮ್ಮ ಬದುಕಿಗೆ ಆಸರೆಯಾಗಿದ್ದು ಬೇರೆ ಬೇರೆ ಇಲಾಖೆಯ ಕಾಮಗಾರಿ ನೀಡಲು ಮನವಿ ಮಾಡಿದರು.ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಸಂಜೆ 7 ಗಂಟೆಗೆ ಅಳ್ನಾವರದಿಂದ ಹುಲಿಕೇರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಪಾಲಕರು ಮಾಡಿಕೊಂಡ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು. ಇದಕ್ಕೂ ಮೊದಲು ಅನಿರೀಕ್ಷಿತವಾಗಿ ಡೋರಿ ಗ್ರಾಮಕ್ಕೆ ಭೇಟಿ ನೀಡಿದ ಅವರು, ಅಂಗನವಾಡಿ ಹಾಗೂ ಶಾಲೆಗಳಿಗೆ ತೆರಳಿ ಪರಿಶೀಲಿಸಿ ನಂತರ ಕೆನರಾ ಬ್ಯಾಂಕಿನ ಸಿಎಸ್‌ಆರ್ ಅನುದಾನದಡಿ ಗ್ರಾಮದಲ್ಲಿ ಕೈಕೊಳ್ಳಬೇಕಾದ ಕಾಮಗಾರಿಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ತಾಪಂ ಇಒ ಪ್ರಶಾಂತ ತುರಕಾಣಿ, ತಾಪಂ ಎಡಿ ಸಂತೋಷ ತಳಕಲ್, ಪಿಡಿಒ ಆನಂದ ಪಾಟೀಲ, ಕಾರ್ಯದರ್ಶಿ ಷಣ್ಮುಖ ಸುಳಗೇಕರ ಇದ್ದರು.