- ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ । ಶಾಸಕ ಶುಭಾಶಯ - - -ಕನ್ನಡ ಪ್ರಭವಾರ್ತೆ ಜಗಳೂರುತಾಲೂಕಿನ ಎಲ್ಲ ಮಸೀದಿಗಳ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದು ಶಾಸಕ ಬಿ.ದೇವೇಂದ್ರಪ್ಪ ಭರವಸೆ ನೀಡಿದರು.
ಪಟ್ಟಣದ ಈದ್ಗಾ ಮೈದಾನದಲ್ಲಿ ಸೋಮವಾರ ಬಕ್ರೀದ್ ಹಿನ್ನೆಲೆ ಮುಸ್ಲಿಂ ಸಮುದಾಯದ ಸಾಮೂಹಿಕ ಪ್ರಾರ್ಥನೆಯಲ್ಲಿ ಹಬ್ಬದ ಶುಭ ಕೋರಿ ಅವರು ಮಾತನಾಡಿದರು.ಹಿಂದು ಮುಸ್ಲಿಂ ಭಾಯಿ ಭಾಯಿ. ಭಾರತೆ ಮಾತೆಯ ಮಕ್ಕಳಾಗಿ ಬಾಳೋಣ. ಹಿಂದು -ಮುಸ್ಲಿಮರು ಸಹೋದರಂತೆ ಬಾಳಬೇಕು. ನಮ್ಮ ನಮ್ಮ ಕರ್ತವ್ಯವನ್ನು ನಿಭಾಯಿಸಬೇಕಾಗಿದೆ. ಇಂದು ಪ್ರಪಂಚದಲ್ಲಿ ಮತಾಂಧತೆ ತಾಂಡವಾಡುತ್ತಿದೆ, ಜಾತಿ ಜಾತಿಗಳ ಮಧ್ಯೆ ಸಂಘರ್ಷಗಳಾಗುತ್ತಿವೆ ಎಂಬುವುದನ್ನು ಅರಿತು, ಸಾಮಾಜಿಕ ಪ್ರಜ್ಞೆಯಿಂದ ಜೀವನ ನಡೆಸಬೇಕಾಗಿದೆ ಎಂದರು.ಮುಸ್ಲಿಂ ಸಮುದಾಯದವರು ವಾಸಿಸುತ್ತಿರುವ ೪೭ ಗ್ರಾಮದಲ್ಲಿ ೪೨ ಮಸೀದಿಗಳಿವೆ. ಅವುಗಳಿಗೆ ಅಗತ್ಯ ಕಾಂಪೌಂಡ್ ನಿರ್ಮಿಸಲಾಗುವುದು. ಕ್ಷೇತ್ರದ ಮುಸ್ಲಿಂ ಸಮುದಾಯದವರ ಅಭಿವೃದ್ಧಿಗೆ ಅನುದಾನಕ್ಕೆ ಕ್ರಿಯ ಯೋಜನೆ ರೂಪಿಸಿಕೊಂಡು ಬನ್ನಿ ಎಂದು ಸಚಿವ ಜಮೀರ್ ಅಹಮದ್ ಭರವಸೆ ನೀಡಿದ್ದಾರೆ ಎಂದರು.ಬಿಲಾಲ್ ಮಸೀದಿ ಅಧ್ಯಕ್ಷ ಇಮಾಮ್ ಆಲಿ ಮಾತನಾಡಿ, ವಿಧಾನಸಭೆ, ಲೋಕಸಭೆಯಲ್ಲಿ 100ಕ್ಕೆ 100ರಷ್ಟು ಮತ ನೀಡಿದ್ದೇವೆ. ಹಾಗಾಗಿ, ಅಲ್ಪಸಂಖ್ಯಾತರಿಗೆ ಅದ್ಯತೆ ನೀಡಬೇಕು. ಸಮುದಾಯದವರಿಗೆ ಸಮುದಾಯ ಭವನ ನಿರ್ಮಿಸಿಕೊಡಬೇಕು. ಇದರಿಂದ ಮದುವೆ ಕಾರ್ಯಕ್ರಮ ಮಾಡಲು ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭ ಧರ್ಮಗುರು ಇಸ್ಮಾಯಿಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್, ಕೆ.ಪಿ.ಪಾಲಯ್ಯ, ಜಿಲ್ಲಾ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಬಿಲಾಲ್ ಮಸೀದಿ ಅಧ್ಯಕ್ಷ ಇಮಾಮ್ ಆಲಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಲೂಕ್ಮಾನ್ ಖಾನ್, ಅಹಮದ್ ಆಲಿ, ಶಕೀಲ್ , ಮುಖಂಡರಾದ ಇಕ್ಬಾಲ್ ಅತ್ತರ್ ವುಲ್ಲಾ ಖಾನ್, ಖಲಂದರ್ ಖಾನ್ ಮತ್ತಿತರರು ಹಾಜರಿದ್ದರು.- - --೧೭ಜೆಜಿಎಲ್೦4:ಜಗಳೂರು ಪಟ್ಟಣದ ಈದ್ಗಾ ಮೈದಾನದಲ್ಲಿ ಸೋಮವಾರ ಬಕ್ರೀದ್ ಅಂಗವಾಗಿ ನಡೆದ ಸಾಮೂಹಿಕ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಶಾಸಕ.ಬಿ. ದೇವೇಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು. ಮುಸ್ಲಿಂ ಮುಖಂಡರು ಇದ್ದರು.