ಕನ್ನಡಪ್ರಭ ವಾರ್ತೆ ಅಥಣಿ
ಬಡತನ ರೇಖೆಗಿಂತ ಕೆಳಗೆ ಇರುವ ಅರ್ಹ ಫಲಾನುಭವಿಗಳು ತಮ್ಮ ಜೀವನದಲ್ಲಿ ಸ್ವಾವಲಂಬನೆಯ ಬದುಕು ಬದುಕಲು ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಹೊಲಿಗೆ ಯಂತ್ರ ಹಾಗೂ ವಿದ್ಯುತ್ ಅಭಾವ ಇದ್ದಾಗ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದು ಅನ್ನುವ ಉದ್ದೇಶದಿಂದ ಯುಪಿಎಸ್ ಹಾಗೂ ಬ್ಯಾಟರಿಗಳನ್ನು ನೀಡಿ ಕತ್ತಲ ಬದುಕಿನಿಂದ ಬೆಳಕಿನಡೆಗೆ ಜೀವನ ಸಾಗಿಸಲು ಸಾದ್ಯವಾಗುತ್ತದೆ. ಪುರಸಭೆಯ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.ಪಟ್ಟಣದ ಸೌಂದರ್ಯಕರಣ ಮಾಡಲು ಪ್ರಮುಖ ರಸ್ತೆಗಳ ಬದಿಯಲ್ಲಿ ಹಾಗೂ ಡಿವೈಡರ್‌ಗಳ ಮಧ್ಯದಲ್ಲಿ ಒಂದೇ ರೀತಿಯ ಮರದ ಸಸಿಗಳನ್ನು ನೇಡುವ ಮೂಲಕ ಸುಂದರೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು. ಒಂದು ವರ್ಷದ ಅವಧಿಯಲ್ಲಿ 25 ಸಾವಿರ ಸಸಿಗಳನ್ನು ನೇಟ್ಟು ಅವುಗಳ ನಿರ್ವಹಣೆಗೆ ಅದ್ಯತೆ ನೀಡುವ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕು. ಪುರಸಭೆ ಸದಸ್ಯರು ಈ ಕಾರ್ಯಕ್ಕೆ ಮುಂದಾಗಬೇಕು ಎಂದು ಕೋರಿದರು.ಅಥಣಿ ಪುರಸಭೆ ವ್ಯಾಪ್ತಿಯಲ್ಲಿ ಲ್ಯಾಂಡ್ ಡೆವಲಪರ್ಸ್ ನಿವೇಶನಗಳನ್ನು ಸರಿಯಾಗಿ ಅಭಿವೃದ್ಧಿಪಡಿಸದೇ ಸಾರ್ವಜನಿಕರಿಗೆ ಪ್ಲಾಟ್‌ಗಳನ್ನು ಮಾರಾಟ ಮಾಡುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಮೋಸವಾಗುತ್ತಿದೆ. ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸದೆ ಪುರಸಭೆಯಿಂದ ಎನ್‌ಒಸಿ ನೀಡದಂತೆ ಪುರಸಭೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಈ ವೇಳೆ ಪುರಸಭೆ ಅಧ್ಯಕ್ಷೆ ಶಿವಲಿಲಾ ಬುಟಾಳಿ, ಉಪಾಧ್ಯಕ್ಷ ಭುವನೇಶ್ವರಿ ಯಂಕಂಚಿ, ಮಾಜಿ ಪುರಸಭೆ ಅಧ್ಯಕ್ಷ ದಿಲೀಪ ಲೋಣಾರೆ, ಸದಸ್ಯರಾದ ದತ್ತಾ ವಾಸ್ಟರ್, ಮಲ್ಲು ಹುದ್ದಾರ, ಸಂತೋಷ ಸಾವಡಕರ, ರಾಜೂ ಗುಡೋಡಗಿ, ವಿಲೀನ ಯಳಮಲ್ಲೆ, ರಿಯಾಜ್ ಸನದಿ, ಉದಯ ಸೋಳಶಿ, ಮಲ್ಲಿಕಾರ್ಜುನ ಬುಟಾಳಿ, ಪ್ರಮೋದ ಬಿಳ್ಳೂರ, ಬಸವರಾಜ ನಾಯಿಕ, ಬಿ.ಎಂ.ಪಾಟೀಲ, ಶಾಂತಾ ಲೋಣಾರೆ, ಮೃಣಾಲಿನಿ ದೇಶಪಾಂಡೆ, ವಿದ್ಯಾ ಹಳದಮಳ, ಪುರಸಭೆ ನಾಮನಿರ್ದೇಶನ ಸದಸ್ಯರಾದ ರಾಮನಗೌಡ ಪಾಟೀಲ, ವಿನಾಯಕ ದೇಸಾಯಿ ಹಾಗೂ ಮುಖಂಡರಾದ ರವಿ ಬಡಕಂಬಿ, ಆಶೀಫ್ ತಾಂಬೋಳಿ, ಮಹಾಂತೇಶ ಬಾಡಗಿ, ಬಾಬು ಖೇಮಲಾಪೂರ, ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.