- ಪಟ್ಟಣದ ಸಂತೆಕೆರೆ ಏರಿ ಮೇಲಿನ (ಕೋಡಿಯಿಂದ ಕಟ್ಟೆಹೊಳೆ ವರೆಗೆ) ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ
--- ತೋಟಗಳಿಗೆ ಹೋಗಲು ರಸ್ತೆ ಇಲ್ಲದೆ ಪರಿತಪಿಸುತ್ತಿರುವುದನ್ನು ತಾವು ಒಬ್ಬ ರೈತನ ಮಗನಾಗಿ ಮನವರಿಕೆ ಮಾಡಿಕೊಂಡು ಈ ರಸ್ತೆ ನಿರ್ಮಾಣಕ್ಕೆ ಚಾಲನೆ
- ಮಲ್ಲೇಶ್ವರದ ಮಾರುತಿ ಬಡಾವಣೆ, ಬಿಜಿಎಸ್ ಕಾಲೇಜು ಮುಂದಿನ ರಸ್ತೆ, ಬಂಗಾರಮ್ಮನ ದೇವಾಲಯ ಸಂಪರ್ಕಿಸುವ ರಸ್ತೆಗಳಕಾಮಗಾರಿ- ಚಿಕ್ಕಂಗಳ ಕೆರೆ ಏರಿ ರಸ್ತೆಯ ಕಾಮಗಾರಿಗೆ ಮುಂದಿನ ದಿನಗಳಲ್ಲಿ ಹಣ
- ಈ ಭಾಗದ ರೈತರ ಅನೇಕ ವರ್ಷಗಳ ಬೇಡಿಕೆ ಪೂರೈಕೆಕನ್ನಡಪ್ರಭ ವಾರ್ತೆ, ಕಡೂರು
ಕಡೂರು ಪಟ್ಟಣ ವೇಗವಾಗಿ ಬೆಳೆಯುತ್ತಿದ್ದು ಪುರಸಭೆ ವ್ಯಾಪ್ತಿ ಮೀರಿ ಬರುವಂತಹ ಗ್ರಾಮೀಣ ರಸ್ತೆ, ಹೊರವಲಯಗಳ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಮೊದಲ ಆಧ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಪಟ್ಟಣದ ಸಂತೆಕೆರೆ ಏರಿ ಮೇಲಿನ (ಕೋಡಿಯಿಂದ ಕಟ್ಟೆಹೊಳೆ ವರೆಗೆ) ರಸ್ತೆ ನಿರ್ಮಾಣಕ್ಕೆ ಅಂದಾಜು ಒಂದು ಕೋಟಿ ವೆಚ್ಚದ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಕಳೆದ 50 ವರ್ಷಗಳಿಂದ ಸ್ಥಳೀಯ ರೈತರೆ ತಮ್ಮ ಹಣ ವ್ಯಯಮಾಡಿ ಸಂತೆಕೆರೆ ಏರಿ ರಸ್ತೆಯ ಗುಂಡಿಗಳನ್ನು ಮುಚ್ಚಿ ಓಡಾಡುತ್ತಿದ್ದರು. ತೋಟಗಳಿಗೆ ಹೋಗಲು ರಸ್ತೆ ಇಲ್ಲದೆ ಪರಿತಪಿಸುತ್ತಿರುವುದನ್ನು ತಾವು ಒಬ್ಬ ರೈತನ ಮಗನಾಗಿ ಮನವರಿಕೆ ಮಾಡಿಕೊಂಡು ಈ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದ್ದು ಬಿಡುಗಡೆಯಾಗಿರುವ ಹಣದ ಜೊತೆಗೆ ಹೆಚ್ಚುವರಿಯಾಗಿ ಇನ್ನು ₹50 ಲಕ್ಷ ನೀಡಲಿದ್ದು ಸುಮಾರು 2 ಕಿ.ಮೀ ರಸ್ತೆ, 5 ಮೀಟರ್ ಅಗಲವುಳ್ಳ ಉತ್ತಮ ರಸ್ತೆ ನಿರ್ಮಾಣವಾಗಲಿದೆ. ಚಿಕ್ಕಂಗಳ ಕೆರೆ ಏರಿ ರಸ್ತೆಯ ಕಾಮಗಾರಿಗೆ ಮುಂದಿನ ದಿನಗಳಲ್ಲಿ ಹಣ ನೀಡುತ್ತೇನೆ ಎಂಬ ಭರವಸೆ ನೀಡಿದರು.ಕಡೂರು ಪುರಸಭೆ ವ್ಯಾಪ್ತಿ ಮೀರಿ ಬರುವಂತಹ ಮಲ್ಲೇಶ್ವರದ ಮಾರುತಿ ಬಡಾವಣೆ, ಬಿಜಿಎಸ್ ಕಾಲೇಜು ಮುಂದಿನ ರಸ್ತೆ, ಬಂಗಾರಮ್ಮನ ದೇವಾಲಯ ಸಂಪರ್ಕಿಸುವ ರಸ್ತೆಗಳಿಗೆ ಶಾಸಕರ ಅನುದಾನದಲ್ಲಿ ಈಗಾಗಲೆ ರಸ್ತೆ ಕಾಮಗಾರಿಗೆ ಹಣ ನೀಡಿದ್ದು ಪಟ್ಟಣಕ್ಕೆ ಗ್ರಾಮೀಣ ಭಾಗಗಳಿಂದ ಸಂಪರ್ಕಿಸುವ ರಸ್ತೆಗಳಿಗೆ ಮೊದಲ ಆಧ್ಯತೆ ನೀಡಿದ್ದೇನೆ ಎಂದರು.ಪುರಸಭೆ ಮಾಜಿ ಉಪಾಧ್ಯಕ್ಷ ಮಂಜುನಾಥ್ ಮಾತನಾಡಿ, ಈ ಭಾಗದ ರೈತರ ಅನೇಕ ವರ್ಷಗಳ ಬೇಡಿಕೆಯನ್ನು ಶಾಸಕ ಆನಂದ್ ಪೂರೈಸಿದ್ದಾರೆ, ಸ್ಥಳೀಯ ರೈತರ ಪರವಾಗಿ ಧನ್ಯವಾದ ಹೇಳುತ್ತೇನೆ ಎಂದರು.ಪುರಸಭೆ ಸದಸ್ಯ ಮಂಡಿ ಇಕ್ಬಾಲ್ ಮಾತನಾಡಿ, ಸಂತೆಕೆರೆ ನನ್ನ ವಾರ್ಡ್‌ನ ಪಕ್ಕದಲ್ಲೆ ಇದ್ದು ಶಾಸಕರು ಈ ಭಾಗದ ತೋಟ ಗಳಿಗೆ ಸಂಪರ್ಕಿಸುವ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹಣ ನೀಡಿ ರಸ್ತೆ ನಿರ್ಮಿಸುತ್ತಿದ್ದು ಇದರ ಜೊತೆಗೆ ಪಕ್ಕದಲ್ಲಿಯೆ ಹಾದು ಹೋಗಲಿರುವ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ರಸ್ತೆ ಸಹ ಶಾಸಕರು ಮಾಡಿಕೊಡಲಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆಆರ್‌ಐಡಿಎಲ್‌ನ ಇಂಜಿನಿಯರ್ ಗಿರೀಶ್, ಗುತ್ತಿಗೆದಾರ ಶಾಂತಕುಮಾರ್ ಸೇರಿದಂತೆ ರೈತರಾದ ಬೀರಪ್ಪ, ಶಶಿ, ಮಲ್ಲಿಕಾರ್ಜುನ್, ಶೇಖರಪ್ಪ, ಸೋಮನಾಥ್, ಮನು, ರಾಮಣ್ಣ, ರಘು, ಕುಮಾರ ಒಡೆಯರ್, ಹುಚ್ಚಪ್ಪ ಮತ್ತು ಚಿಕ್ಕಂಗಳ ಗ್ರಾಮಸ್ಥರು ಇದ್ದರು.28 ಕೆಸಿಕೆಎಂ 2ಕಡೂರು ಸಂತೆಕೆರೆ ಏರಿ ಮೇಲಿನ ರಸ್ತೆ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಭೂಮಿ ಪೂಜೆ ನೆರವೇರಿಸಿದರು.