ಗ್ರಾಮಗಳ ಪ್ರತಿ ರಸ್ತೆಗಳ ಸುಧಾರಣೆಗೆ ಆದ್ಯತೆ: ಶಾಸಕ ಜಿಎಸ್ಪಿ

KannadaprabhaNewsNetwork |  
Published : May 05, 2025, 12:49 AM IST
4 ರೋಣ 2. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ₹70 ಲಕ್ಷ ವೆಚ್ವದಲ್ಲಿ ಸರ್ಜಾಪೂರ ಗ್ರಾಮದಲ್ಲಿ ಸಿ.ಸಿ ರಸ್ತೆ ನಿರ್ಮಣಕ್ಕೆ ಶಾಸಕ ಜಿ.ಎಸ್‌.ಪಾಟೀಲ ಬೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಮತಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು‌ ಗ್ರಾಮಗಳ ಮುಖ್ಯ ರಸ್ತೆ ಹಾಗೂ ಬಡಾವಣೆ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ, ಅಗತ್ಯ ಅನುದಾನ ಬಿಡುಗಡೆಗೆ ಕ್ರಮ‌ಕೈಗೊಳ್ಳಲಾಗುವುದು ಎಂದು‌ ಶಾಸಕ‌ ಜಿ.ಎಸ್. ಪಾಟೀಲ ಹೇಳಿದರು.

ರೋಣ:ಮತಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು‌ ಗ್ರಾಮಗಳ ಮುಖ್ಯ ರಸ್ತೆ ಹಾಗೂ ಬಡಾವಣೆ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ, ಅಗತ್ಯ ಅನುದಾನ ಬಿಡುಗಡೆಗೆ ಕ್ರಮ‌ಕೈಗೊಳ್ಳಲಾಗುವುದು ಎಂದು‌ ಶಾಸಕ‌ ಜಿ.ಎಸ್. ಪಾಟೀಲ ಹೇಳಿದರು.

ಅವರು ಶನಿವಾರ ಸಂಜೆ ತಾಲೂಕಿನ ಸರ್ಜಾಪುರದಲ್ಲಿ 2023-24ನೇ ಸಾಲಿನ 5054 ಯೋಜನೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ₹ 70 ಲಕ್ಷ ವೆಚ್ಚದಲ್ಲಿ ಸಿ.ಸಿ‌. ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ‌ಪೂಜೆ ನೆರವೇರಿಸಿ ಬಳಕ‌ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಸವಡಿ, ಹಿರೇಮಣ್ಣೂರ, ಅರಹುಣಸಿ, ಕೊತಬಾಳ, ಮುಗಳ, ಅಬ್ಬಿಗೇರಿ, ಅಮರಗಟ್ಟಿ, ಶಾಂತಗೇರಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಕೋಟ್ಯಂತರ ಅನುದಾನ ಮಂಜೂರು ಮಾಡಿ, ಕಾಮಗಾರಿಗೆ ಚಾಲನೆ ನೀಡಲಾಗಿದೆ. ಅದರಂತೆ ಸರ್ಜಾಪುರ ಗ್ರಾಮಗಳಲ್ಲಿ ಬಸ್ ನಿಲ್ದಾಣದಿಂದ ಮಲ್ಲಯ್ಯಗುಡಿ, ಮಾರುತೇಶ್ವರ ದೇವಸ್ಥಾನ, ದ್ಯಾಮವ್ವನ ಗುಡಿ, ಬೋವಿ ಸಮಾಜದ ಓಣಿ ಸೇರಿದಂತೆ 10ಕ್ಕೂ ಹೆಚ್ಚು ಕಡೆಗಳಲ್ಲಿ ₹ 70 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗುವುದು. ಆರಾಧ್ಯ ದೇವತೆಯಾದ ಬೊಮ್ಮಸಾಗರ ದುರ್ಗಾದೇವಿಯ ಹೊರ ವಲಯದಲ್ಲಿರುವ ದುರ್ಗಾದೇವಿ ಕಟ್ಟೆಯಿಂದ ಬೊಮ್ಮಸಾಗರ ಗ್ರಾಮಕ್ಕೆ ತೆರಳುವ ರಸ್ತೆಯನ್ನು ₹ 80 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಶಾಂತಗೇರಿ ಗ್ರಾಮದಲ್ಲಿ ₹ 45 ಲಕ್ಷ ವೆಚ್ಚದಲ್ಲಿ, ಅಮರಗಟ್ಟಿ ಗ್ರಾಮದಲ್ಲಿ ₹ 30 ಲಕ್ಷ ವೆಚ್ಚದಲ್ಲಿ ಸಿ.ಸಿ. ರಸ್ತೆ ನಿರ್ಮಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಮುಖಂಡ ವ್ಹಿ.ಆರ್. ಗುಡಿಸಾಗರ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಣ ವೀರಣ್ಣ ಶೆಟ್ಟರ್, ಶರಣಗೌಡ ಪಾಟೀಲ (ಸರ್ಜಾಪೂರ), ಗ್ರಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ರಾಠೋಡ, ವೀರನಗೌಡ ಗೌಡರ, ಯೂಶೂಫ ಇಟಗಿ, ಹೊನಕೇರಪ್ಪ ಲಗಳಿ, ಗಿರೀಶಗೌಡ ಪಾಟೀಲ, ಹನಮಂತಪ್ಪ ಕಳಕಾಪೂರ, ದುರ್ಗೇಶ ವಡ್ಡರ, ಕೂಸೆಪ್ಪ ಲಮಾಣಿ, ಹೂವಪ್ಪ‌ಲಮಾಣಿ, ನಾಗಪ್ಪ ನಾಗನೂರ, ಪಾಂಡಪ್ಪ ಲಮಾಣಿ, ಭೀಮಶಿ ಲಮಾಣಿ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!